ENG vs SL: ಚೆಂಡು ತಿರುಗಿದ್ದು ನೋಡಿ ಹ್ಯಾರಿ ಬ್ರೂಕ್ ಶಾಕ್: ಅಭಿಮಾನಿಗಳಿಗೆ ನೆನಪಾದ ವಿರಾಟ್
ಶ್ರೀಲಂಕಾ ಸದ್ಯ ಇಂಗ್ಲೆಂಡ್ ಪ್ರವಾಸವನ್ನು ಮಾಡುತ್ತಿದೆ. ಈ ವೇಳೆ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಹಲವು ಅಚ್ಚರಿಯ ಘಟನೆಗಳು ನಡೆದಿವೆ. ಅಲ್ಲದೆ ಆ ಒಂದು ಎಸೆತ ನಿಜಕ್ಕೂ ಅಭಿಮಾನಿಗಳನ್ನು ವಿರಾಟ್ ಕೊಹ್ಲಿ ಅವರು ಔಟ್ ಆಗಿದ್ದನ್ನು ನೆನಪಿಸುವಂತೆ ಮಾಡಿದೆ.
ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 236 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ಎರಡನೇ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್‌ಗೆ 259 ರನ್ ಕಲೆ ಹಾಕಿದೆ. ಆತಿಥೇಯ ತಂಡ ಸದ್ಯ 23 ರನ್ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ತಂಡಕ್ಕೆ ಎರಡನೇ ದಿನ ಜೇಮಿ ಸ್ಮಿತ್ ಹಾಗೂ ಹ್ಯಾರಿ ಬ್ರೂಕ್ ಆಧಾರವಾದರು. ಈ ಜೋಡಿ ತಂಡಕ್ಕೆ ಅಗತ್ಯ ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಹ್ಯಾರಿ ಬ್ರೂಕ್ 56 ರನ್ ಗಳಿಸಿ ಮುನ್ನುಗುತ್ತಿದ್ದಾಗ ಪ್ರಭಾತ್ ಜಯಸೂರ್ಯ ಅವರ ಎಸೆತವನ್ನು ತಪ್ಪಾಗಿ ಅರ್ಥಮಾಡಿಕೊಂಡ ಔಟ್ ಆದರು.
ಆಗಿದ್ದೇನು?
ಇನಿಂಗ್ಸ್‌ನ 40ನೇ ಓವರ್ ಎಸೆಯಲು ಜಯಸೂರ್ಯ ಬಂದರು. ಓವರ್ ಮೊದಲ ಎಸೆತವನ್ನು ಎದುರಿಸಲು ಬ್ರೂಕ್ ಹೈರಾಣಾದರು. ಚೆಂಡನ್ನು ಜಯಸೂರ್ಯ ಮಿಡಲ್ ಸ್ಟಂಪ್‌ನ ಲೈನ್‌ನಲ್ಲಿ ಬೌಲ್ ಮಾಡಿದರು. ಬ್ರೂಕ್ ಚೆಂಡಿನ ಲೈನ್‌ಗೆ ಬಂದು ರಕ್ಷಣಾತ್ಮಕ ಆಟವಾಡಲು ಮುಂದಾದರು. ಆದರೆ ಪಿಚ್ ಆಗುತ್ತಿದ್ದಂತೆ ಚೆಂಡು ವೇಗ ಪಡೆದು, ಆಫ್ ಸ್ಟಂಪ್‌ಗೆ ಬಡಿಯಿತು. ಬೌಲ್ಡ್ ಆದ ನಂತರ, ಬ್ರೂಕ್ ಪಿಚ್ ಅನ್ನು ಆಶ್ಚರ್ಯದಿಂದ ನೋಡುತ್ತಲೇ ಇದ್ದರು.
ಇಂತಹದ್ದೇ ಎಸೆತಕ್ಕೆ ಕೊಹ್ಲಿ ಔಟ್?
ಭಾರತ 2018ರಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಏಕದಿನ ಪಂದ್ಯಗಳು ಸಹ ನಡೆದವು. ಈ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮೊದಲ ಬ್ಯಾಟ್ ಮಾಡುತ್ತಿತ್ತು. ಈ ವೇಳೆ ವಿರಾಟ್ ಅಮೋಘ ಬ್ಯಾಟಿಂಗ್ ನಡೆಸಿದ್ದರು. ಈ ಪಂದ್ಯದ 31ನೇ ಓವರ್ ಎಸೆಯಲು ರಶೀದ್ ಬಂದರು. ಆಗ ವಿರಾಟ್ ಕೊಹ್ಲಿಗೆ ಆದಿಲ್ ರಶೀದ್ ಇದೇ ರೀತಿಯ ಚೆಂಡನ್ನು ಬೌಲ್ ಮಾಡಿದ್ದರು. ಆ ಚೆಂಡು ಸಹ ಪಿಚ್ ಆಗುತ್ತಿದ್ದಂತೆ ವೇಗವಾಗಿ ಹೊರ ಬಂದಿತ್ತು. ಅಲ್ಲದೆ ಆಫ್ ಸ್ಟಂಪ್‌ಗೆ ಬಡಿದಿತ್ತು. ಈ ಚೆಂಡನ್ನು ನೋಡಿ ವಿರಾಟ್ ಶಾಕ್ ಆದರು.
ಹ್ಯಾರಿ ಬ್ರೂಕ್ ಔಟ್ ಆಗುತ್ತಿದಂತೆ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರು ಔಟ್ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications