Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Prabhsimran Singh: ಕೆಕೆಆರ್ ವಿರುದ್ಧ ಪ್ರಭ್‌ಸಿಮ್ರಾನ್ ಸ್ಪೋಟಕ ಬ್ಯಾಟಿಂಗ್; ರಾಹುಲ್-ಗೇಲ್ ಕ್ಲಬ್‌ಗೆ ಸೇರ್ಪಡೆ

ಐಪಿಎಲ್ 2025 ರಲ್ಲಿ ಆನೇಕ ಯುವ ಅಟಗಾರರು ತಮ್ಮ ಅದ್ಭುತ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ ಸೇರಿದ್ದಾರೆ. ಅವರು ಮತ್ತೊಂಮ್ಮೆ ಪಂಜಾಬ್ ಕಿಂಗ್ಸ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2025 ರ 44ನೇ ಪಂದ್ಯದಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ ಕೋಲ್ಕತ್ತಾ ನೈಟ್‌ ರೈಡರ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡಿ 83 ರನ್ ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್ ಮೂಲಕ ಪ್ರಭ್‌ಸಿಮ್ರಾನ್ ಸಿಂಗ್ ತಮ್ಮ ಹೆಸರಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.

ಪ್ರಭ್‌ಸಿಮ್ರಾನ್ ಸಿಂಗ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ 1000 ರನ್ ಗಳಿಸದ 10ನೇ ಆಟಗಾರ ಎನಿಸಿಕೊಂಡಿದ್ದಾರೆ. ಪ್ರಭ್‌ಸಿಮ್ರಾನ್ ಸಿಂಗ್ 43ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅವರು ಕೆಎಲ್ ರಾಹುಲ್, ಮಾಯಾಂಕ್ ಅರ್ಗವಾಲ್, ಕ್ರಿಸ್ ಗೇಲ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ವಿಶೇಷ ಆಟಗಾರರ ಕ್ಲಬ್‌ಗೆ ಸೇರಿದ್ದಾರೆ.

Prabhasimran Singh brilliant innings against KKR has earned KL Rahul-Chris Gayle entry into the club

ಪ್ರಭ್‌ಸಿಮ್ರಾನ್ ಸಿಂಗ್ 2019 ರಿಂದ ಪಂಜಾಬ್ ತಂಡದ ಭಾಗವಾಗಿದ್ದಾರೆ. ಅವರು ಇಲ್ಲಿವರೆಗೆ 43 ಪಂದ್ಯಗಳನ್ನು ಆಡಿದ್ದು, 24.37 ರ ಸರಾಸರಿಯಲ್ಲಿ 1048 ರನ್ ಗಳಿಸಿದ್ದಾರೆ. ಪ್ರಭ್‌ಸಿಮ್ರಾನ್ ಸಿಂಗ್ 151 ಕ್ಕಿಂತ ಹೆಚ್ಚಿನ ಸ್ಟ್ರೇಕ್‌ ರೇಟ್‌ನಲ್ಲಿ ಈ ರನ್ ಕಲೆ ಹಾಕಿದ್ದಾರೆ. ಪ್ರಭ್‌ಸಿಮ್ರಾನ್ ಸಿಂಗ್ ಐಪಿಎಲ್‌ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ ಪಂಜಾಬ್ ಪರ ಹೆಚ್ಚು ರನ್ ಗಳಿಸಿದವರು

ಕೆಎಲ್ ರಾಹುಲ್- 2548 ರನ್, 55 ಇನ್ನಿಂಗ್ಸ್
ಶಾನ್ ಮಾರ್ಷ್- 2477 ರನ್, 69 ಇನ್ನಿಂಗ್ಸ್
ಡೇವಿಡ್ ಮಿಲ್ಲರ್- 1850 ರನ್, 77 ಇನ್ನಿಂಗ್ಸ್
ಮಯಾಂಕ್ ಅಗರ್ವಾಲ್- 1513 ರನ್, 59 ಇನ್ನಿಂಗ್ಸ್
ಕ್ರಿಸ್ ಗೇಲ್- 1339 ರನ್, 41 ಇನ್ನಿಂಗ್ಸ್
ಗ್ಲೆನ್ ಮ್ಯಾಕ್ಸ್‌ವೆಲ್- 1335 ರನ್, 67 ಇನ್ನಿಂಗ್ಸ್
ವೃದ್ದಿಮಾನ್ ಸಹಾ- 1115 ರನ್, 49 ಇನ್ನಿಂಗ್ಸ್
ಮಂದೀಪ್ ಸಿಂಗ್- 1073 ರನ್, 58 ಇನ್ನಿಂಗ್ಸ್
ಕುಮಾರ್ ಸಂಗಕ್ಕಾರ- 1009 ರನ್, 34 ಇನ್ನಿಂಗ್ಸ್
ಪ್ರಭ್‌ಸಿಮ್ರಾನ್ ಸಿಂಗ್- 1048 ರನ್, 43 ಇನ್ನಿಂಗ್ಸ್

ಪಂದ್ಯ ರದ್ದು

ಪಂಜಾಬ್ ಕಿಂಗ್ಸ್ ತಂಡವು 4 ವಿಕೆಟ್‌ಗಳಿಗೆ 201 ರನ್ ಗಳಿಸುವಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ ಅವರ 6 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳ ಇನ್ನಿಂಗ್ಸ್ ಪ್ರಮುಖ ಪಾತ್ರ ವಹಿಸಿತು. ಪ್ರಭ್‌ಸಿಮ್ರಾನ್ ಸಿಂಗ್ 49 ಎಸೆತಗಳಲ್ಲಿ 83 ರನ್ ಗಳಿಸಿದರು. ಪ್ರಿಯಾಂಶ್ ಆರ್ಯ ಅವರೊಂದಿಗೆ ಪ್ರಭ್‌ಸಿಮ್ರಾನ್ ಸಿಂಗ್ 120 ರನ್‌ಗಳ ಅದ್ಭುತ ಆರಂಭಿಕ ಜೊತೆಯಾಟ ಆಡಿದರು. ಪ್ರಿಯಾಂಶ್ 35 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ಪಂಜಾಬ್ ಬಿಗ್ ಸ್ಕೋರ್ ಕಲೆ ಹಾಕಲು ಅಡಿಪಾಯ ಹಾಕಿದರು. ಆದರೆ ಇತರ ಬ್ಯಾಟರ್ಸ್ ಇದರ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಪಂಜಾಬ್ ನೀಡಿದ 202 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡಕ್ಕೆ ಮಳೆ ಅಡ್ಡಿಯಾಯಿತು. ಪರಿಣಾಮ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಬ್ಯಾಟರ್ಸ್ ರಹಮಾನಲ್ಲಾ ಗುರ್ಬಾಜ್ ಮತ್ತು ಸುನಿಲ್ ನರೈನ್ ಕೇವಲ ಒಂದು ಓವರ್ ಮಾತ್ರ ಆಡುವಲ್ಲಿ ಯಶಸ್ವಿಯಾದರು. ಬಲವಾದ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು. ಇದಾದ ನಂತರ ಒಂದು ಗಂಟೆಗೂ ಹೆಚ್ಚು ಕಾಲ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು .

Story first published: Sunday, April 27, 2025, 6:00 [IST]
Other articles published on Apr 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+