For Quick Alerts
ALLOW NOTIFICATIONS  
For Daily Alerts
 

ರಾಯಲ್ಸ್‌ ಅಜೇಯ ಓಟಕ್ಕೆ ಬ್ರೇಕ್ ಹಾಕಿದ SRH: ಪ್ರಫುಲ್ ಹಿಂಗೆ ಮಿಂಚು

ಮುತ್ತಿನ ನಗರಿ ಎಂದೇ ಖ್ಯಾತಿ ಪಡೆದಿರುವ ಹೈದರಾಬಾದ್‌ನಲ್ಲಿ ತವರಿನ ತಂಡ ಸನ್‌ರೈಸರ್ಸ್‌ ಹೈದರಾಬಾದ್ ಅಮೋಘ ಪ್ರದರ್ಶನ ನೀಡಿದೆ. ಮೊದಲು ಬ್ಯಾಟರ್‌ಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಿದರೆ, ಬಳಿಕ ಬೌಲರ್‌ಗಳು ತಮ್ಮ ಕರಾರುವಾಕ್ ದಾಳಿಯಿಂದ ಎಲ್ಲರ ಮನ ಗೆದ್ದರು. ಈ ಮೂಲಕ ಎಸ್‌ಆರ್‌ಎಚ್‌ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ಅಜೇಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಈ ಗೆಲುವಿನ ಮೂಲಕ ಸನ್‌ ತಂಡ ಆಡಿದ 5 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದು, 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

217 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ರಾಜಸ್ಥಾನ ತಂಡದ ಆರಂಭ ಕಳಪೆಯಾಗಿತ್ತು. ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ವೈಭವ್ ಸೂರ್ಯವಂಶಿ ತಾವು ಎದುರಿಸಿದ ಮೊದಲ ಎಸೆದಲ್ಲೇ ಪ್ರಫುಲ್ ಹಿಂಗೆ ತೋಡಿದ ಖೆಡ್ಡಾಗೆ ಬಲಿಯಾದರು. ಇನಿಂಗ್ಸ್‌ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಭರವಸೆಯ ಬ್ಯಾಟರ್ ಧ್ರುವ್ ಜುರೇಲ್‌, ಆರನೇ ಎಸೆತದಲ್ಲಿ ಲ್ಹುವಾನ್-ಡ್ರೆ ಪ್ರಿಟೋರಿಯಸ್ ವಿಕೆಟ್‌ ಕಳೆದುಕೊಂಡ ರಾಯಲ್ಸ್‌ ಸಂಕಷ್ಟಕ್ಕೆ ಸಿಲುಕಿತು. ತಂಡದ ಮೊತ್ತ 1 ರನ್ ಆಗಿದ್ದಾಗಲೇ 3 ವಿಕೆಟ್‌ ಪಡೆದ ಪ್ರಫುಲ್ ಹಿಂಗೆ ಮಿಂಚಿದರು.

Praful Hinge

19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದ ಯಶಸ್ವಿ ಜೈಸ್ವಾಲ್‌ ಅವರ ಆಟವೂ ತಂಡದ ಮೊತ್ತ 2 ಆಗಿದ್ದಾಗ ಕೊನೆಯಾಯಿತು. ಇನ್ನು ನಾಯಕ ರಿಯಾನ್‌ ಪರಾಗ್‌ ಇನಿಂಗ್ಸ್‌ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಪ್ರಫುಲ್ ಹಿಂಗೆ ಅವರಿಗೆ ವಿಕೆಟ್‌ ಒಪ್ಪಿಸಿದರು. ರಾಯಲ್ಸ್‌ 3 ಓವರ್‌ಗಳಲ್ಲಿ 9 ರನ್‌ ಆಗುವಷ್ಟರಲ್ಲಿ 5 ಬಹುಮುಖ್ಯ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ರಾಯಲ್‌ ತಂಡದ ಅರ್ಧದಷ್ಟು ತಂಡ ಬರೀ ಮೂರು ಓವರ್‌ಗಳಲ್ಲಿ ಪೆವಿಲಿಯನ್ ಸೇರಿತ್ತು.

6ನೇ ವಿಕೆಟ್‌ಗೆ ಶತಕದ ಜೊತೆಯಾಟ

6ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ಡೊನೊವನ್ ಫೆರೆರಾ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಈ ಜೋಡಿ ಶತಕದ ಜೊತೆಯಾಟದ ಕಾಣಿಕೆ ನೀಡಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಹಂತದಲ್ಲಿ ಡೊನೊವನ್ ಫೆರೆರಾ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 69 ರನ್‌ ಬಾರಿಸಿ ಔಟ್ ಆದರು. ರವೀಂದ್ರ ಜಡೇಜಾ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 45 ರನ್‌ ಬಾರಿಸಿದರು. ಕೆಳಕ್ರಮಾಂಕದಲ್ಲಿ ತುಷಾರ್ ದೇಶಪಾಂಡೆ 3 ಸಿಕ್ಸರ್ ಸಹಾಯದಿಂದ 25 ರನ್‌ ಬಾರಿಸಿದರು. ಅಂತಿಮವಾಗಿ ರಾಯಲ್ಸ್‌ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು.

ಬುಮ್ರಾ 5 ಐಪಿಎಲ್‌ ಪಂದ್ಯವಾಡಿದರೂ ವಿಕೆಟ್‌ ಪಡೆದಿಲ್ಲ ಏಕೆ? ಅಶ್ವಿನ್ ದೊಡ್ಡ ಹೇಳಿಕೆಬುಮ್ರಾ 5 ಐಪಿಎಲ್‌ ಪಂದ್ಯವಾಡಿದರೂ ವಿಕೆಟ್‌ ಪಡೆದಿಲ್ಲ ಏಕೆ? ಅಶ್ವಿನ್ ದೊಡ್ಡ ಹೇಳಿಕೆ

ಪದಾರ್ಪಣಾ ಬೌಲರ್‌ಗಳ ಆರ್ಭಟ

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಪದಾರ್ಪಣೆ ಮಾಡಿದ ಇಬ್ಬರೂ ಬೌಲರ್‌ಗಳಾದ ಪ್ರಫುಲ್ ಹಿಂಗೆ ಹಾಗೂ ಸಕಿಬ್ ಹುಸೇನ್‌ ಅಬ್ಬರಿಸಿದರು. ಉಭಯ ಬೌಲರ್‌ಗಳು ತಲಾ 4 ವಿಕೆಟ್‌ ಪಡೆದು ಆರ್‌ಆರ್‌ ಬ್ಯಾಟರ್‌ಗಳಿಗೆ ಕಾಡಿದರು. ಈ ಯುವ ಬೌಲರ್‌ಗಳ ಬಿಗುವಿನ ದಾಳಿಯ ನೆರವಿನಿಂದ ಎಸ್‌ಆರ್‌ಎಚ್‌ ಜಯ ಸಾಧಿಸಿತು.

ಸೊನ್ನೆಗೆ ಔಟ್ ಆಗಿ ಬೇಡವಾದ ದಾಖಲೆ ಬರೆದ ಅಭಿಷೇಕ್ ಶರ್ಮಾಸೊನ್ನೆಗೆ ಔಟ್ ಆಗಿ ಬೇಡವಾದ ದಾಖಲೆ ಬರೆದ ಅಭಿಷೇಕ್ ಶರ್ಮಾ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಅಭಿಷೇಕ್ ಶರ್ಮಾ ಸೊನ್ನೆ ಸುತ್ತಿದರು. ಎರಡನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಹಾಗೂ ಇಶಾನ್‌ ಕಿಶನ್‌ ಜೋಡಿ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಮೂರನೇ ವಿಕೆಟ್‌ಗೆ ಇಶಾನ್‌ ಜೊತೆಗೂಡಿದ ಅನುಭವಿ ಹೆನ್ರಿಕ್ ಕ್ಲಾಸೆನ್‌ (40) ಜೋಡಿ 39 ಎಸೆತಗಳಲ್ಲಿ 88 ರನ್‌ ಸೇರಿಸಿತು. ನಿತೀಶ್ ಕುಮಾರ್ ರೆಡ್ಡಿ (28), ಸಲಿಲ್ ಆರೋರಾ (ಅಜೇಯ 24) ತಂಡಕ್ಕೆ ಆಧಾರವಾದರು. ನಾಯಕ ಇಶಾನ್‌ ಕಿಶನ್‌ 91 ರನ್ ಬಾರಿಸಿ ಔಟ್ ಆದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 8 ಬೌಂಡರಿ, 6 ಸಿಕ್ಸರ್ ಸೇರಿವೆ.

Story first published: Monday, April 13, 2026, 23:48 [IST]
Other articles published on Apr 13, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+