Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Praful Hinge ಎಲ್ಲಿದ್ದಿ ಇಲ್ಲಿ ತನಕ? ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ ಪಡೆದ ಬೌಲರ್‌ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಯುವ ಆಟಗಾರರು ತಮ್ಮ ಅಮೋಘ ಪ್ರದರ್ಶನದ ಬಲದಿಂದ ತಾವು ಪ್ರತಿನಿಧಿಸುವ ತಂಡಗಳಿಗೆ ವರದಾನವಾಗಿದ್ದಾರೆ. ಸೋಮವಾರವೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 24 ವರ್ಷದ ವಿದರ್ಭ ಬೌಲರ್‌ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿದ್ದಾರೆ. ಈ ಮೂಲಕ ಪ್ರಫುಲ್ ಹಿಂಗೆ ಸದ್ದು ಮಾಡಿದ್ದಾರೆ. ಪದಾರ್ಪಣಾ ಪಂದ್ಯದಲ್ಲಿ ಪ್ರಫುಲ್ ಹಿಂಗೆ 4 ವಿಕೆಟ್‌ ಪಡೆದು ಆರ್ಭಟಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಪ್ರಫುಲ್ ಹಿಂಗೆ ಆಡುವ ಅವಕಾಶವನ್ನು ಪಡೆದರು. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಅವಕಾಶವನ್ನು ಬಳಸಿಕೊಂಡ ಪ್ರಫುಲ್ ಹಿಂಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಶಾಕ್‌ ನೀಡಿದರು. ತಾವು ಐಪಿಎಲ್‌ನಲ್ಲಿ ಮಾಡಿದ ಮೊದಲ ಓವರ್‌ನಲ್ಲಿ ಬಹುಮುಖ್ಯ ಮೂರು ವಿಕೆಟ್‌ ಪಡೆದ ಪ್ರಫುಲ್ ಹಿಂಗೆ ರಾಯಲ್ಸ್‌ಗೆ ಶಾಕ್‌ ನೀಡಿದರು. ಈಗ ಅಭಿಮಾನಿಗಳು ಪ್ರಫುಲ್ ಹಿಂಗೆ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ.

Praful Hinge

ಐಪಿಎಲ್ 2026 ರ ಋತುವಿನ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಪ್ರಫುಲ್ ಹಿಂಗೆ ಅವರನ್ನು 30 ಲಕ್ಷ ರೂ.ಗಳಿಗೆ ಖರೀದಿಸಿತು. ಪ್ರಪ್ರಫುಲ್ ಹಿಂಗೆ ಅವರ ದೇಶೀಯ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು 10 ಪ್ರಥಮ ದರ್ಜೆ ಪಂದ್ಯಗಳು, ಆರು ಲಿಸ್ಟ್ ಎ ಪಂದ್ಯಗಳು ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಇವರು ಐಪಿಎಲ್‌ನಲ್ಲಿ ತಾವಾಡಿದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದಾರೆ.

ಬ್ಯಾಟಿಂಗ್ ಪವರ್ ಕಟ್ಟ

ಪ್ರಪ್ರಫುಲ್ ಹಿಂಗೆ ಮೊದಲ ಎಸೆತದಲ್ಲೇ ಸ್ಫೋಟಕ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಅಲ್ಲದೆ ಈ ಲೀಗ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾಗಿದ್ದ ಜುರೇಲ್‌ ಅವರ ವಿಕೆಟ್‌ ಸಹ ಪಡೆದರು. ಇನಿಂಗ್ಸ್‌ನ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಲುವಾನ್ ಡ್ರೆ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿದ ಪ್ರಪ್ರಫುಲ್ ಹಿಂಗೆ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಇನಿಂಗ್ಸ್‌ನ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ರಿಯಾನ್ ಪರಾಗ್ ಅವರಿಗೆ ಔಟ್ ಸೈಡ್ ಆಫ್ ಸ್ಟಂಪ್ ಹಾಕಿದ ಚೆಂಡನ್ನು ಕೆಣಕಿ ಅಭಿಷೇಕ್ ಶರ್ಮಾ ಅವರಿಗೆ ಕ್ಯಾಚ್ ನೀಡಿದರು. ತಮ್ಮ ಪದಾರ್ಪಣಾ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಪ್ರಪ್ರಫುಲ್ ಹಿಂಗೆ 4 ಓವರ್‌ಗಳಲ್ಲಿ 34 ರನ್‌ ನೀಡಿ 4 ಪ್ರಮುಖ ವಿಕೆಟ್‌ ಪಡೆದರು.


ಪ್ರಪ್ರಫುಲ್ ಹಿಂಗೆ ಬ್ಯಾಟ್ಸ್‌ಮನ್‌ ಆಗಬೇಕು ಎಂದು ಅಂಗಳ ಪ್ರವೇಶಿಸಿದ್ದರು. ಆದರೆ ಅವರ ತಂದೆ ಅವರ ಎತ್ತರವನ್ನು ನೋಡಿ ಬೌಲರ್ ಆಗಲು ಸಲಹೆ ನೀಡಿದರು. ಇದರ ನಂತರ, ಹಿಂತಿರುಗಿ ನೋಡಲೇ ಇಲ್ಲ. ಪ್ರಪ್ರಫುಲ್ ಹಿಂಗೆ 2022 ರಿಂದ ಚೆನ್ನೈನ ಎಂಆರ್‌ಎಫ್ ಪೇಸ್ ಫೌಂಡೇಶನ್‌ನಲ್ಲಿ ತರಬೇತಿ ಪಡೆದ ಅನುಭವ ಇದೆ. ಅಲ್ಲದೆ 2024 ರಲ್ಲಿ 15 ದಿನಗಳ ಶಿಬಿರಕ್ಕಾಗಿ ಬ್ರಿಸ್ಬೇನ್‌ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಯೂ ಬೌಲಿಂಗ್ ಸುಧಾರಣೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ಪ್ರದರ್ಶನವನ್ನು ಪ್ರಪ್ರಫುಲ್‌ ಮುಂದುವರೆಸಲಿ ಎಂಬುದೇ ಅಭಿಮಾನಿಗಳ ಆಶಯ.

Story first published: Tuesday, April 14, 2026, 0:00 [IST]
Other articles published on Apr 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+