Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪ್ರಗ್ಯಾನ್ ಓಜಾ

Pragyan Ojha Announces Retirement From All Forms Of Cricket

ಭಾರತೀಯ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ದಿಢೀರ್ ಆಗಿ ನಿವೃತ್ತಿಯನ್ನು ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ತಕ್ಷಣದಿಂದಲೇ ಜಾರಿಯಾಗುವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಪ್ರಗ್ಯಾನ್ ಓಜಾ ಟ್ವಿಟ್ಟರ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

2008ರಲ್ಲಿ ಪ್ರಗ್ಯಾನ್ ಓಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆನ್ನು ಮಾಡಿದ್ದರು. ಒಟ್ಟಾರೆ 16 ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಪ್ರಗ್ಯಾನ್ ಓಜಾ ನಿವೃತ್ತಿ ಘೋಷಿಸುವುದರೊಂದಿಗೆ ಪೂರ್ಣವಿರಾಮ ಹಾಕಿದ್ದಾರೆ.

2013ರ ವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಆದರೆ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆಯುವಲ್ಲಿ ವಿಫಲರಾದ ಓಜಾ ದೇಸಿ ಕ್ರಿಕೆಟ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದರು.

ಪ್ರಗ್ಯಾನ್ ಓಜಾ ಈವರೆಗೂ 24 ಟೆಸ್ಟ್ 18 ಏಕದಿನ ಮತ್ತು 6 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.ಟೆಸ್ಟ್‌ನಲ್ಲಿ 113 ವಿಕೆಟ್ ಪಡೆದುಕೊಂಡಿದ್ದರೆ ಏಕದಿನದಲ್ಲಿ 21 ವಿಕೆಟ್ ಪಡೆದುಕೊಂಡಿದ್ದಾರೆ.

ನಾನು ಬದುಕಿನ ಮತ್ತೊಂದು ಹಂತಕ್ಕೆ ಮುನ್ನುಗ್ಗಲು ನಿರ್ಧಾರವನ್ನು ಮಾಡಿದ್ದೇನೆ. ಕ್ರಿಕೆಟ್‌ ವೃತ್ತಿ ಜೀವನದಲ್ಲಿ ದೊರಕಿದ ಪ್ರೀತಿ ಮತ್ತು ಬೆಂಬಲ ನನಗೆ ನೆನಪಿನಲ್ಲಿದ್ದು ಅದು ಯಾವಾಗಲು ನನಗೆ ಉತ್ತೇಜನವನ್ನು ನೀಡುತ್ತದೆ ಬರೆದುಕೊಂಡಿರುವ ಪ್ರಗ್ಯಾನ್ ಓಜಾ ನಿವೃತ್ತಿಯ ಬಗ್ಗೆ ಸುದೀರ್ಘ ಪೋಸ್ಟ್‌ವೊಂದನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ.

Story first published: Tuesday, May 5, 2020, 14:54 [IST]
Other articles published on May 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+