ಎಂಎಸ್ ಧೋನಿ ನಾಯಕತ್ವವನ್ನು ಕೊಂಡಾಡಿದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ

ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿಯ ಬಳಿಕ ಓಝಾ ಧೋನಿ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಆಡಿದ ಓಜಾ ಧೋನಿಯನ್ನು ಮನಸಾರೆ ಹೊಗಳಿದ್ದಾರೆ.
ಪ್ರಗ್ಯಾನ್ ಓಜಾ ಧೋನಿಯನ್ನು ಬೌಲರ್‌ಗಳ ನಾಯಕ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಬೌಲರ್‌ಗಳಿಗೆ ನಾಯಕನಾಗಿ ಧೋನಿ ನೀಡುತ್ತಿದ್ದ ಸಲಹೆ ಮತ್ತು ನೀಡುತ್ತಿದ್ದ ಸ್ವಾತಂತ್ರ್ಯವನ್ನು ಪ್ರಗ್ಯಾನ್ ಓಜಾ ಸ್ಮರಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಆತನೋರ್ವ ಬೌಲರ್‌ಗಳ ನಾಯಕ ಎಂದು ಹೇಳಿದ್ದಾರೆ.
ಪ್ರತಿ ಬೌಲರ್‌ಕೂಡ ತಮ್ಮನ್ನು ಅರ್ಥ ಮಾಡಿಕೊಳ್ಳುವ ನಾಯಕನನ್ನು ಬಯಸುತ್ತಾರೆ. ಅದೇ ಕಾರಣಕ್ಕೆ ಎಲ್ಲಾ ಬೌಲರ್‌ಗಳು ಧೋನಿ ನಾಯಕತ್ವವನ್ನು ಮೆಚ್ಚಿಕೊಳ್ಳುತ್ತಾರೆ. ತಮ್ಮಲ್ಲಿರುವ ಬೌಲಿಂಗ್ ಅಸ್ತ್ರಗಳನ್ನು ಬಳಸಿಕೊಳ್ಳುತ್ತಿದ್ದ ರೀತಿ ಮತ್ತು ಸೂಕ್ತ ಸಮಯದಲ್ಲಿ ನೀಡುತ್ತಿದ್ದ ಸಲಹೆಗಳು ಬೌಲರ್‌ಗೆ ಸಾಕಷ್ಟು ಸಹಾಯಕವಾಗುತ್ತಿತ್ತು ಎಂದು ಪ್ರಗ್ಯಾನ್ ಓಜಾ ಹೇಳಿದ್ದಾರೆ.
ಪ್ರಗ್ಯಾನ್ ಓಜಾ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಮುಖ್ಯ ಬೌಲರ್ ಆಗಿದ್ದರು. ಅದರಲ್ಲೂ ಭಾರತೀಯ ನೆಲದಲ್ಲಿ ಪ್ರಗ್ಯಾನ್ ಓಜಾ ಅವರನ್ನು ಧೋನಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಪ್ರಗ್ಯಾನ್ ಓಜಾ ರೋಹಿತ್ ಶರ್ಮಾ ಆವರ ನಾಯಕತ್ವದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿರುವ ಓಜಾ ಮುಂಬೈ ನಾಯಕ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಪಂದ್ಯಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications