Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Vijay Hazare Trophy: ದೇಶೀಯ ಟೂರ್ನಿಯಲ್ಲಿ ಆಡಲಿರುವ ಟೀಮ್ ಇಂಡಿಯಾದ ಸ್ಟಾರ್ಸ್‌

ಭಾರತ ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿದೆ. ಸದ್ಯ ಟೀಮ್ ಇಂಡಿಯಾದ ಆಟಗಾರರು ವಿಶ್ರಾಂತಿ ಕಡೆಗೆ ಮುಖ ಮಾಡಿದ್ದಾರೆ. ಇನ್ನು ಹಲವು ಆಟಗಾರರು ದೇಶೀಯ ಟೂರ್ನಿಯಲ್ಲಿ ತಮ್ಮ ತಮ್ಮ ರಾಜ್ಯದ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಐದು ಪಂದ್ಯಗಳ ಸರಣಿಯಲ್ಲಿ 1-3 ರಿಂದ ಹಿನ್ನಡೆ ಅನುಭವಿಸಿದೆ. ಈ ಸರಣಿಯಲ್ಲಿ ಸ್ಟಾರ್ ಆಟಗಾರರು ಅಂದುಕೊಂಡತಂಹ ಪ್ರದರ್ಶನ ನೀಡದೇ ಇರುವುದು ಟೀಕೆಗೆ ಗುರಿಯಾಗಿದೆ.

ಟೀಮ್ ಇಂಡಿಯಾ ಮುಂದಿನ ಸರಣಿಯನ್ನು ಜನವರಿ 22 ರಂದು ಆಡಲಿದೆ. ಈ ನಡುವಿನ ಸಮಯವನ್ನು ಚೆನ್ನಾಗಿ ಸದುಪಯೋಗ ಪಡಿಸಿಕೊಳ್ಳಲು, ಭಾರತದ ಯುವ ಆಟಗಾರರ ಪ್ಲ್ಯಾನ್‌ ಮಾಡಿದ್ದಾರೆ. ಈಗಾಗಲೇ ದೇಶೀಯ ಟೂರ್ನಿ ವಿಜಯ್ ಹಜಾರೆಯ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ನಾಳೆಯಿಂದ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ. ಈ ವೇಳ ತಮ್ಮ ತಮ್ಮ ತಂಡಗಳ ಪರ ಕಣಕ್ಕೆ ಇಳಿಯಲು ಯುವ ಆಟಗಾರರು ತಯಾರಿ ನಡೆಸಿದ್ದಾರೆ.

Prasidh Krishna Abhimanyu and Devdutt Padikkal Set to Feature in Vijay Hazare Trophy Knockouts

ದೇಶೀಯ ಟೂರ್ನಿಯಲ್ಲಿ ಆಡಲಿರುವ ಯಂಗ್ ಸ್ಟರ್ಸ್‌

ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ಭಾಗವಹಿಸಿದ್ದ ಅಭಿಮನ್ಯು ಈಶ್ವರನ್, ಪ್ರಸಿದ್ಧ ಕೃಷ್ಣಾ, ದೇವದತ್ ಪಡಿಕ್ಕಲ್‌ ಈಗ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ. ಇವರು ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಇನ್ನು ಕೆಎಲ್ ರಾಹುಲ್ ವಿಶ್ರಾಂತಿ ಕೇಳಿದ್ದಾರೆ. ಸ್ಟಾರ್ ಸ್ಪಿನ್ ಬೌಲರ್ ವಾಷಿಂಗ್ಟನ್‌ ಸುಂದರ್‌ ತಮಿಳು ನಾಡು ತಂಡವನ್ನು ಸೆಮಿಫೈನಲ್ಸ್ ವೇಳೆಗೆ ಸೇರುವ ಸಾಧ್ಯತೆ ಇದೆ.

ಪ್ರಸಿದ್ಧ ಹಾಗೂ ದೇವದತ್ ಭಾರತಕ್ಕೆ ಹಾರಲಿರುವ ಆಟಗಾರರೊಂದಿಗೆ ಬರಲಿದ್ದು, ಅಭಿಮನ್ಯು ಈಶ್ವರನ್ ಈಗಾಗಲೇ ತವರಿನತ್ತ ಮುಖ ಮಾಡಿದ್ದಾರೆ. ಇವರಿಗೆ ಒಂದು ದಿನ ಮುಂಚಿತವಾಗಿ ತಂಡದಿಂದ ಹೊರ ಹೋಗಿ ತವರು ತಂಡ ಸೇರಿಕೊಳ್ಳಲು ಅನುಮತಿ ಸಿಕ್ಕಿದು. ಇವರು ಬಂಗಾಳ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಬುಧವಾರ ಅಭಿಮನ್ಯು ಬಂಗಾಳ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಬಂಗಾಳ ಪ್ರೀ ಕ್ವಾರ್ಡರ್ ಫೈನಲ್ ಪಂದ್ಯದಲ್ಲಿ ಹರಿಯಾಣ ವಿರುದ್ಧ ಕಾದಾಟ ನಡೆಸಲಿದೆ.

Prasidh Krishna Abhimanyu and Devdutt Padikkal Set to Feature in Vijay Hazare Trophy Knockouts

ಬಂಗಾಳ ತಂಡದ ಇನ್ನೊಬ್ಬ ಪೇಸರ್‌ ಆಕಾಶ್ ದೀಪ್‌ ಸಿಡ್ನಿ ಟೆಸ್ಟ್‌ಗೂ ಮುನ್ನ ಗಾಯಕ್ಕೆ ತುತ್ತಾಗಿ ತಂಡದಿ ಹೊರ ನಡೆದಿದ್ದರು.

ಪ್ರಸಿದ್ಧ ಕೃಷ್ಣಾ ಹಾಗೂ ದೇವದತ್ ಪಡಿಕ್ಕಲ್‌ ಕರ್ನಾಟಕ ತಂಡವನ್ನು ಜನವರಿ 10 ರದು ಸೇರುವ ಸಾಧ್ಯತೆ ಇದೆ. ಕರ್ನಾಟಕ ತಂಡ ಜನವರಿ 11 ರಂದು ತನ್ನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಬರೋಡಾ ವಿರುದ್ಧ ಆಡಲಿದೆ. ಪ್ರಸಿದ್ಧ ಕೃಷ್ಣಾ ಅವರಿಗೆ ಸಿಡ್ನಿ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ನೀಡಲಾಯಿತು. ಬಹು ದಿನಗಳ ಬಳಿಕ ಟೆಸ್ಟ್‌ ಪಂದ್ಯ ಆಡಿದ ಪ್ರಸಿದ್ಧ ಸ್ಥಿರ ಪ್ರದರ್ಶನ ನೀಡಿ 6 ವಿಕೆಟ್‌ ಕಬಳಿಸಿದ್ದರು. ಇನ್ನು ದೇವದತ್ ಪಡಿಕ್ಕಲ್‌ ಅವರಿಗೆ ಪರ್ತ್‌ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದರೆ ಈ ಅವಕಾಶವನ್ನು ಎರಡೂ ಕೈಗಳಿಂದ ಕೈ ಚೆಲ್ಲಿದ್ದರು.

Story first published: Wednesday, January 8, 2025, 14:16 [IST]
Other articles published on Jan 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+