Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 ವಿಶ್ವಕಪ್: ಭಾರತದ ''ಅಚ್ಚರಿಯ" ಬೌಲರ್ ಹೆಸರಿಸಿದ ಕೊಹ್ಲಿ

Virat Kohli calls this pacer as a surprise package | VIRAT KOHLI | PRASIDH | ONEINDIA KANNADA
Prasidh Krishna: Know all about Virat Kohlis surprise package for India in T20 World Cup

ಬೆಂಗಳೂರು, ಜನವರಿ 08: ಶ್ರೀಲಂಕಾದ ವಿರುದ್ಧದ ಟಿ20 ಸರಣಿ ಮೂಲಕ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್ ಗೆ ಟೀಂ ಇಂಡಿಯಾ ಭರ್ಜರಿ ತಯಾರಿ ಆರಂಭಿಸಿದೆ. ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತ ತಂಡ ಅಚ್ಚರಿಯ ಪ್ಯಾಕೇಜ್ ನೊಂದಿಗೆ ಎಂಟ್ರಿ ಕೊಡಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.

ಕೊಹ್ಲಿ ಸಹಜವಾಗಿ ಒಬ್ಬ ಆಟಗಾರನ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳುವುದು ಕಡಿಮೆ. ಅದರಲ್ಲೂ ಕರ್ನಾಟಕದ ವೇಗಿಯೊಬ್ಬ ಕೊಹ್ಲಿ ಗಮನ ಸೆಳೆದಿದ್ದು, ಮುಂಬರುವ ವಿಶ್ವಕಪ್ ನಲ್ಲಿ ತಂಡದ ಅಚ್ಚರಿಯ ಅಸ್ತ್ರವಾಗಬಲ್ಲರು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಮೆಚ್ಚುಗೆ ಪಡೆದ ವೇಗಿ ಮತ್ಯಾರು ಅಲ್ಲ, ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಪ್ರಸಿಧ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ...

ದೇಶಿ ಕ್ರಿಕೆಟ್ ದಾಖಲೆ

ದೇಶಿ ಕ್ರಿಕೆಟ್ ದಾಖಲೆ

23 ವರ್ಷ ವಯಸ್ಸಿನ ಪ್ರಸಿಧ್ ಕೃಷ್ಣ ಸತತವಾಗಿ 140 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚೆಂಡನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. 6 ಪ್ರಥಮ ದರ್ಜೆ ಪಂದ್ಯ, 41 ಲಿಸ್ಟ್ ಎ ಪಂದ್ಯ ಹಾಗೂ 28 ಟಿ20 ಪಂದ್ಯಗಳನ್ನಾಡಿದ್ದಾರೆ. 2018, 2019 ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ.

ಎಂಆರ್ ಎಫ್ ಪೇಸ್ ಫೌಂಡೇಶನ್

ಎಂಆರ್ ಎಫ್ ಪೇಸ್ ಫೌಂಡೇಶನ್

ಚೆನ್ನೈನ ಎಂಆರ್ ಎಫ್ ಪೇಸ್ ಫೌಂಡೇಶನ್ ನಲ್ಲಿ ತರಬೇತಿ ಪಡೆದುಕೊಂಡಿರುವ ಪ್ರಸಿಧ್ ಕೃಷ್ಣ ಅವರಿಗೆ ತರಬೇತಿ ಸಮಯದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಗ್ಲೆನ್ ಮೆಗ್ರಾರಿಂದ ಸೂಕ್ತ ಸಲಹೆ, ಮಾರ್ಗದರ್ಶನ ಸಿಕ್ಕಿದೆ. ಅಲ್ಲದೆ, ಆಸ್ಟ್ರೇಲಿಯಾಕ್ಕೆ ತೆರಳಿ ಜೆಫ್ ಥಾಮ್ಸನ್ ಅವರಿಂದ ವೇಗದ ಬೌಲಿಂಗ್ ನಲ್ಲಿ ಹೆಚ್ಚಿನ ತರಬೇತಿ ಪಡೆದುಕೊಂಡಿದ್ದಾರೆ.

2018ರಲ್ಲಿ ವಿಜಯ್ ಹಜಾರೆ ಟ್ರೋಫಿ 2018ರಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಮೆರೆಯಲು ಪ್ರಸಿದ್ಧ್ ಕೂಡಾ ಕಾರಣರಾದರು. 8 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದರು. ಇದರಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಲು ಸಾಧ್ಯವಾಯಿತು.

ಐಪಿಎಲ್ ನಲ್ಲಿ ಪ್ರಸಿದ್ಧ್ ಪ್ರದರ್ಶನ

ಐಪಿಎಲ್ ನಲ್ಲಿ ಪ್ರಸಿದ್ಧ್ ಪ್ರದರ್ಶನ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಅಂಡರ್ 19 ತಂಡದ ವೇಗಿ ಕಮಲೇಶ್ ನಾಗರ್ ಕೋಟಿ ಗಾಯಾಳುವಾಗಿದ್ದರಿಂದ ಪ್ರಸಿದ್ಧ್ ಗೆ ಅವಕಾಶ ಸಿಕ್ಕಿತ್ತು. ಕನ್ನಡಿಗರಾದ ಎಸ್ ಅರವಿಂದ್ ಹಾಗೂ ಪ್ರಸಿದ್ಧ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಯುವ ವೇಗಿ ಪ್ರಸಿದ್ಧ್ ಗೆ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೃಷ್ಣ, 7 ಪಂದ್ಯಗಳಿಂದ 10 ವಿಕೆಟ್ ಪಡೆದರು.

ಪ್ರಸಿದ್ಧ್ ಅಚ್ಚರಿಯ ಪ್ಯಾಕೇಜ್ ಎಂದ ಕೊಹ್ಲಿ

ಪ್ರಸಿದ್ಧ್ ಅಚ್ಚರಿಯ ಪ್ಯಾಕೇಜ್ ಎಂದ ಕೊಹ್ಲಿ

ಮುಂಬರುವ ವಿಶ್ವಕಪ್ ನಲಿ ಒಬ್ಬ ಆಟಗಾರ ಅಚ್ಚರಿಯ ಪ್ಯಾಕೇಜ್ ಆಗಿರುತ್ತಾರೆ ಎಂದಿರುವ ಕೊಹ್ಲಿ, ಪ್ರಸಿದ್ಧ್ ಕೃಷ್ಣ ಅವರ ಆಟದ ವೈಖರಿಯನ್ನು ಕಂಡು ಹೇಳಿದ್ದಾರೆ. ಈ ಮೂಲಕ ವಿಶ್ವಕಪ್ ತಂಡದಲ್ಲಿ ಪ್ರಸಿದ್ಧ್ ಆಡುವ ಅವಕಾಶ ಸಿಗಲಿದೆ ಎಂಬ ಸುಳಿವು ನೀಡಿದ್ದಾರೆ. ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಪ್ರಸಿದ್ಧ್, ಐಪಿಎಲ್ 2020ರಲ್ಲಿ ಆರ್ ಸಿಬಿ ನಾಯಕ ಕೊಹ್ಲಿ ವಿರುದ್ಧವೇ ಬೌಲಿಂಗ್ ಮಾಡಿ ಉತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ.

Story first published: Thursday, January 9, 2020, 11:02 [IST]
Other articles published on Jan 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+