Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Prasid Krishna: ಗುಜರಾತ್ ಟೈಟಾನ್ಸ್ ತಂಡದ ಗೆಲುವಿಗೆ ಕನ್ನಡಿಗ ಹೀರೋ

ಐಪಿಎಲ್ 2025 ರ 51ನೇ ಪಂದ್ಯ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಹೈದರಾಬಾದ್ ತಂಡವನ್ನು ಗುಜರಾತ್ 38 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಗುಜರಾತ್ ಲೀಗ್‌ನಲ್ಲಿ 7ನೇ ಗೆಲುವು ಸಾಧಿಸಿತು. ಇತ್ತ ಸೋಲು ಕಂಡ ಹೈದರಾಬಾದ್ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‍‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 224 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪ್ಯಾಟ್ ಕಮ್ಮಿನ್ಸ್ ಪಡೆ 20 ಓವರ್‍‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 186 ರನ್ ಗಳಿಸಲು ಶಕ್ತವಾಯಿತು. ಗುಜರಾತ್ ಟೈಟಾನ್ಸ್ ಗೆಲುವಿನಲ್ಲಿ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಮಿಂಚಿದರು. ಅದ್ಭುತ ಬೌಲಿಂಗ್ ದಾಳಿ ಮೂಲಕ ಗುಜರಾತ್ ತಂಡಕ್ಕೆ ಗೆಲುವು ಖಚಿತ ಪಡೆಸಿದರು.

Prasidh Krishna played a key role in Gujarat Titans win over Sunrisers Hyderabad

ಗುಜರಾತ್‌ನಿಂದ ಗೆಲ್ಲಲು 225 ರನ್‌ಗಳ ಗುರಿ ಪಡೆದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಿತು. ಹೈದರಾಬಾದ್‌ ಪರ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅವರು 38 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 74 ರನ್‌ಗಳ ಇನ್ನಿಂಗ್ಸ್ ಆಡಿದರು. ಅಭಿಷೇಕ್ ಶರ್ಮಾ ಜೊತೆಗೆ ಇನ್ನಿಂಗ್ಸ್ ತೆರೆದ ಟ್ರಾವಿಸ್ ಹೆಡ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಅವರು ಟ್ರಾವಿಸ್ ಹೆಡ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಮೊದಲ ಬ್ರೇಕ್ ನೀಡಿದರು.

ಟ್ರಾವಿಸ್ ಹೆಡ್ ಔಟ್ ಆದ ಬಳಿಕ ಹೆನ್ರಿಚ್ ಕ್ಲಾಸೆನ್ ಮಧ್ಯಮ ಓವರ್‍‌ಗಳಲ್ಲಿ ಗುಜರಾತ್ ಬೌಲರ್ಸ್ ಕಾಡುವಂತೆ ಕಾಣುತ್ತಿದ್ದರು. ಆಗ ನಾಯಕ ಶುಭಮನ್ ಗಿಲ್ ಮತ್ತೊಮ್ಮೆ ಪ್ರಸಿದ್ಧ್ ಕೃಷ್ಣ ಅವರನ್ನು ಬೌಲಿಂಗ್ ದಾಳಿಗೆ ಕರೆ ತಂದರು. ನಾಯಕನ ಭರವಸೆಯನ್ನು ಉಳಿಸಿಕೊಂಡ ಪ್ರಸಿದ್ಧ್ ಕೃಷ್ಣ ಅವರು ಕ್ಲಾಸೆನ್ ವಿಕೆಟ್ ಬೇಟೆಯಾಡಿರು. ಕ್ಲಾಸೆನ್ 18 ಎಸೆತಗಳಲ್ಲಿ 23 ರನ್ ಗಳಿಸಿ ಔಟಾದರು.

ಗುಜರಾತ್ ಟೈಟಾನ್ಸ್ ಪರ ಎಲ್ಲಾ ಬೌಲರ್ಸ್ ದುಬಾರಿ ಎನಿಸಿಕೊಂಡರು. ಆದರೆ ವೇಗಿ ಪ್ರಸಿದ್ಧ್ ಕೃಷ್ಣ ಮಾತ್ರ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದರು. ಅವರು 4 ಓವರ್‍‌ಗಳಲ್ಲಿ 19 ರನ್ ನೀಡಿ ಪ್ರಮುಖ 2 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಹೈದರಾಬಾದ್ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿ ಗುಜರಾತ್ ತಂಡದ ಗೆಲುವಿಗೆ ನೆರವಾದರು.

ಪಂದ್ಯ ಹೇಗಿತ್ತು?

ಅಭಿಷೇಕ್ ಶರ್ಮಾ ಹೈದರಾಬಾದ್ ಪರ 74 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 20 ರನ್ ಮತ್ತು ಹೆನ್ರಿಕ್ ಕ್ಲಾಸೆನ್ 23 ರನ್ ಗಳಿಸಿದರು. ಇಶಾನ್ ಕಿಶನ್ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು. ಇದಾದ ನಂತರ, ಬೇರೆ ಯಾವುದೇ ಬ್ಯಾಟರ್ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈದರಾಬಾದ್ ಸೋಲು ಕಂಡಿತು. ಗುಜರಾತ್ ಪರ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ ಮತ್ತು ಜೆರಾಲ್ಡ್ ಕೋಟ್ಜೀ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ಪರ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅದ್ಭುತ ಅರ್ಧಶತಕ ಗಳಿಸಿದರು. ಗಿಲ್ 38 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 76 ರನ್ ಕಲೆ ಹಾಕಿದರು. ಬಟ್ಲರ್ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 64 ರನ್ ಗಳಿಸಿದರು. ಈ ಇಬ್ಬರಲ್ಲದೆ, ಸಾಯಿ ಸುದರ್ಶನ್ ಕೂಡ 23 ಎಸೆತಗಳಲ್ಲಿ 48 ರನ್ ಬಾರಿಸಿದರು. ಅವರನ್ನು ಹೊರತುಪಡಿಸಿ, ವಾಷಿಂಗ್ಟನ್ ಸುಂದರ್ 16 ಎಸೆತಗಳಲ್ಲಿ 21 ರನ್ ಗಳಿಸಿದರು. ಹೈದರಾಬಾದ್ ಪರ ಜಯದೇವ್ ಉನಾದ್ಕಟ್ ಗರಿಷ್ಠ 3 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಮತ್ತು ಜೀಶನ್ ಅನ್ಸಾರಿ ತಲಾ ಒಂದೊಂದು ವಿಕೆಟ್ ಪಡೆದರು.

Story first published: Saturday, May 3, 2025, 6:05 [IST]
Other articles published on May 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+