IND vs ENG 5th Test: ಪ್ರಸಿದ್ಧ್ ಕೃಷ್ಣಾ, ಸಿರಾಜ್ ಮಾರಕ ದಾಳಿ: ಇಂಗ್ಲೆಂಡ್‌ಗೆ 23 ರನ್ ಮುನ್ನಡೆ
ಭರವಸೆಯ ಬೌಲರ್‌ಗಳಾದ ಕನ್ನಡಿಗ ಪ್ರಸಿದ್ಧ್ ಕೃಷ್ಣಾ (62 ಕ್ಕೆ 4) ಹಾಗೂ ಮೊಹಮ್ಮದ್ ಸಿರಾಜ್ (86 ಕ್ಕೆ 4) ಅವರ ಬಿಗುವಿನ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆಗೆ ಕಟ್ಟಿ ಹಾಕುವಲ್ಲಿ ಸಫಲವಾಗಿದೆ. ಈ ಮೂಲಕ ಐದನೇ ಟೆಸ್ಟ್ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಕನಸು ಕಾಣುತ್ತಿದೆ.
ಇಂಗ್ಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಇಂಗ್ಲೆಂಡ್ ತಂಡದ ಆರಂಭಿಕರಾದ ಬೆನ್ ಡಕೇಟ್, ಜಾಕ್ ಕ್ರಾಲಿ ಅವರು ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಿತು. ಅಲ್ಲದೆ ಇಂಗ್ಲೆಂಡ್ ಈಗಲೂ ಬೇಜ್‌ಬಾಲ್ ಕ್ರಿಕೆಟ್ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಸಾಬೀತು ಪಡಿಸಿತು. ಈ ಜೋಡಿ ಆರಂಭದಿಂದಲೂ ಕೆಟ್ಟ ಎಸೆತಗಳನ್ನು ಎದುರಿಸುತ್ತಾ ಸಾಗಿದರು. ಈ ಮೂಲಕ ಇಂಗ್ಲೆಂಡ್ ಅಂದುಕೊಂಡಂತ ಆರಂಭವನ್ನು ನೀಡುಯಲ್ಲಿ ಈ ಜೋಡಿ ಸಫಲವಾಯಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಟಿ20 ಶೈಲಿಯ ಬ್ಯಾಟಿಂಗ್ ಮಾಡಿದ ಡಕೇಟ್ ಹಾಗೂ ಕ್ರಾಲಿ ಜೋಡಿ 12.5 ಓವರ್‌ಗಳಲ್ಲಿ 92 ರನ್ ಸೇರಿಸಿತು. ಬೆನ್ ಡಕೇಟ್ 38 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಆಕಾಶ್ ದೀಪ್ ಅವರ ತೋಡಿದ ಖೆಡ್ಡಾಗೆ ಬಲಿಯಾದರು. ಇನ್ನೋರ್ವ ಆರಂಭಿಕ ಆಟಗಾರ ಜ್ಯಾಕ್ ಕ್ರಾಲಿ 57 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ 64 ರನ್ ಬಾರಿಸಿ ಕನ್ನಡಿಗ ಪ್ರಸಿದ್ಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್ ತಂಡದ ನಾಯಕ ಓಲಿ ಪೋಪ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಸೂಚನೆಯನ್ನು ನೀಡಿದರು. ಆದರೆ ಇವರ ತಾಳ್ಮೆಗೆ ಸಿರಾಜ್ ಬ್ರೇಕ್ ಹಾಕಿದರು. ಪೋಪ್ 44 ಎಸೆತಗಳಲ್ಲಿ 22 ರನ್ ಸೇರಿಸಿ ಮುನ್ನುಗುತ್ತಿದ್ದಾಗ ಪೆವಿಲಿಯನ್ ಸೇರಿದರು. ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ ಜೋ ರೂಟ್ ಸಮಯೋಚಿತ ಬ್ಯಾಟಿಂಗ್ ಮಾಡುವ ಸೂಚನೆಯನ್ನು ನೀಡಿದರು. ಆದರೆ ಭಾರತ ತಂಡದ ಮೊನಚಾದ ದಾಳಿಯ ವಿರುದ್ಧ ಹೆಚ್ಚು ಸಮಯ ಕಳೆಯುವಲ್ಲಿ ವಿಫಲರಾದರು. ಇವರು 45 ಎಸೆತಗಳಲ್ಲಿ 29 ರನ್ ಬಾರಿಸಿದರು.
ಬ್ರೂಕ್ ಅಬ್ಬರ
ಉಳಿದಂತೆ ಇಂಗ್ಲೆಂಡ್ ತಂಡದ ಜಾಕಬ್ ಬೆತೆಲ್ (6), ಜೇಮಿ ಸ್ಮಿತ್ (8), ಜೇಮಿ ಓವರ್‌ಟನ್ (0), ಗಸ್ ಅಟ್ಕಿನ್ಸನ್ (11) ತಂಡದ ಮೊತ್ತ ಹೆಚ್ಚಿಸುವಲ್ಲಿ ಕೊಂಚ ಶ್ರಮಿಸಿದರು. ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಹ್ಯಾರಿ ಬ್ರೂಕ್ ಒಂದು ಕಡೆಯಲ್ಲಿ ವಿಕೆಟ್ ಬೀಳುತ್ತಾ ಇದ್ದರೂ ಧೃತಿ ಗೆಡದೆ ಬ್ಯಾಟ್ ಮಾಡಿದರು. ಇವರು 64 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿ ಕೊನೆಯರಾಗಿ ಔಟ್ ಆದರು. ಪರಿಣಾಮ ಇಂಗ್ಲೆಂಡ್ 23 ರನ್‌ಗಳ ಮುನ್ನಡೆ ಸಾಧಿಸಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 247 ರನ್‌ಗೆ ಆಲೌಟ್ ಆಯಿತು.
ಪ್ರಸಿದ್ಧ್, ಸಿರಾಜ್ ಕಮಾಲ್
ಟೀಮ್ ಇಂಡಿಯಾದ ಪರ ವೇಗದ ಬೌಲರ್‌ಗಳಾದ ಪ್ರಸಿದ್ಧ್ ಕೃಷ್ಣಾ ಹಾಗೂ ಮೊಹಮ್ಮದ್ ಸಿರಾಜ್ ತಮ್ಮ ಬಿಗುವಿನ ದಾಳಿಯಿಂದ ಅಬ್ಬರಿಸಿದರು. ಇವರಿಬ್ಬರೂ ತಲಾ 4 ವಿಕೆಟ್ ಪಡೆದು ಮಿಂಚಿದರು. ಆಕಾಶ್ ದೀಪ್ ಒಂದು ವಿಕೆಟ್ ಪಡೆದರು. ಇನ್ನು ಇಂಗ್ಲೆಂಡ್ ತಂಡದ ಕ್ರಿಸ್ ವೋಕ್ಸ್ ಗಾಯದಿಂದ ಪಂದ್ಯದಿಂದ ಹೊರ ನಡೆದಿದ್ದು, ಇಂಗ್ಲೆಂಡ್ 9 ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಆಲೌಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications