ಕರುಣ್ ನಾಯರ್ ಅವರಿಗೆ ಬಿಸಿಸಿಐ ಮಹಾರಾಜ್ ಟ್ರೋಫಿ ಟಿ20 ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನೀಡಿಲ್ಲ. ಇವರಿಗೆ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಿಂದ ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ಇವರು ಮೈಸೂರು ವಾರಿಯರ್ಸ್ ಪರ ಆಡುವ ಕನಸು ದೂರ ಸರಿದಿದೆ.
ಈಗಾಗಲೇ ಮೈಸೂರಿನಲ್ಲಿ ಮಹಾರಾಜ್ ಟ್ರೋಫಿ ಟಿ20 ಟೂರ್ನಿ ಆರಂಭವಾಗಿದೆ. ಕರುಣ್ ನಾಯರ್ ಈ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಇವರು ಸದ್ಯ ಮಹಾರಾಜ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಕಾರಣ ಇವರು ಇತ್ತೀಚಿಗೆ ನಡೆದ ಇಂಗ್ಲೆಂಡ್ ಪ್ರವಾಸದಲ್ಲಿ ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಈ ಗಾಯ ಇನ್ನು ಗುಣವಾಗದ ಕಾರಣ ಇವರಿಗೆ ಮಹಾರಾಜ್ ಟಿ20 ಟೂರ್ನಿಯಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿದೆ.

ಆಟಗಾರರು ತಮ್ಮ ಫಿಟ್ನೆಸ್ ಸಾಬೀತು ಪಡಿಸಲು ಮೈದಾನದಲ್ಲಿ ಕಠಿಣ ಶ್ರಮ ವಹಿಸುತ್ತಿದ್ದಾರೆ. ಅಲ್ಲದೆ ಬೆಂಗಳುರಿನಲ್ಲಿ ಪುನರ್ವಸತಿ ಆರಂಭಿಸಿದ್ದಾರೆ. ಕರುಣ್ ನಾಯರ್ ಮೈಸೂರು ವಾರಿಯರ್ಸ್ ಕ್ಯಾಂಪ್ ಸೇರುವ ಮುನ್ನ ಬೆಂಗಳೂರಿನಲ್ಲಿ ಬೆವರು ಹರಿಸಿದ್ದಾರೆ. ಬುಧವಾರ ಮೈಸೂರು, ಗುಲ್ಬರ್ಗ್ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿದಾಗ ಕರುಣ್ ನಾಯರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇನ್ನು ಗುರುವಾರ ಮೈಸುರು ತಂಡ ಮಹತ್ವದ ಪಂದ್ಯವನ್ನು ಆಡಲಿದೆ. ಈ ವೇಳೆ ಮೈಸೂರು ವಾರಿಯರ್ಸ್ ತಂಡ ಪ್ಏ ಆಫ್‌ನಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯ. ಈ ಪಂದ್ಯದಲ್ಲೂ ಇವರಿಗೆ ಆಡುವ ಅವಕಾಶ ಲಭಿಸಲಿಲ್ಲ. ಮೈಸೂರು ಪ್ಲೇ ಆಫ್‌ಗೆ ಪ್ರವೇಶ ಪಡೆದಲ್ಲಿ ಕರುಣ್ ಅಂಗಳಕ್ಕೆ ಇಳಿಯಬಹುದಾ ಕಾದು ನೋಡಬೇಕಿದೆ.
ಇನ್ನು ಮಂಗಳೂರು ಡ್ರ್ಯಾಗನ್ಸ್ ವಿರುದ್ದ ಪಂದ್ಯದಲ್ಲಿ ಸ್ಟಾರ್ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಇವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಈಗ ಇವರು ಮಹಾರಾಜ್ ಟ್ರೋಫಿಯಲ್ಲಿ ಮಂಗಳೂರು ವಿರುದ್ಧ ಮೊದಲ ಪಂದ್ಯವನ್ನು ಆಡಿದ್ದಾರೆ. ಪ್ರಸಿದ್ಧ್ ಕೃಷ್ಣ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿ ಪರ್ಪಲ್ ಕ್ಯಾಪ್ ತಮ್ಮ ಮುಡಿಗೆ ಪಡೆದಿದ್ದರು. ಆದರೆ ಇವರು ಏಷ್ಯಾ ಕಪ್ ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇವರಿಗೆ ಕಾಯ್ದಿರಿಸಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.