Pratika Rawal: ಪ್ರತೀಕಾ ರಾವಲ್ ವೇಗವಾಗಿ 500 ರನ್ ಕಲೆ ಹಾಕಿ ವಿಶ್ವದಾಖಲೆ
ಟೀಮ್ ಇಂಡಿಯಾ ಮಹಿಳಾ ತಂಡ ಸದ್ಯ ಶ್ರೀಲಂಕಾ ಪ್ರವಾಸದಲ್ಲಿ ತ್ರಿಕೋನ ಸರಣಿಯನ್ನು ಆಡುತ್ತಿದೆ. ಈ ವೇಳೆ ಭಾರತ ತಂಡದ ಆಟಗಾರ್ತಿ ಪ್ರತೀಕಾ ರಾವಲ್ ದೊಡ್ಡ ಸಾಧನೆ ಮಾಡಿದ್ದಾರೆ. ಭಾರತದ ಉದಯೋನ್ಮುಖ ತಾರೆ ಪ್ರತೀಕಾ ರಾವಲ್, ತಮ್ಮ ಹೆಸರಿಗೆ ಮತ್ತೊಂದು ದಾಖಲೆ ನಮೂದಿಸಿಕೊಂಡಿದ್ದಾರೆ. ಈ ಮೂಲಕ ಈ ಹಿಂದೆ ಯಾವೊಬ್ಬ ಭಾರತೀಯ ಆಟಗಾರ್ತಿ ಮಾಡದ ಸಾಧನೆಯನ್ನು ಮಾಡಿ ಬೀಗಿದ್ದಾರೆ. ಅವರು ಮಾಡಿದ ಸಾಧನೆ ಬಗ್ಗೆ ಮಾಹಿತಿ ಇಲ್ಲಿದೆ.
ತ್ರಿಕೋನ ಸರಣಿಯ ಎರಡನೇ ಪಂದ್ಯ ಮಂಗಳವಾರ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಆರಂಭಿಕರಾದ ಸ್ಮೃತಿ ಮಂಧನಾ ಹಾಗೂ ಪ್ರತಿಕಾ ರಾವಲ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 18.3 ಓವರ್‌ಗಳಲ್ಲಿ 83 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಸ್ಮೃತಿ 36 ರನ್ ಬಾರಿಸಿ ಔಟ್ ಆದರು. ಆದರೆ ಇನ್ನೊಬ್ಬ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ತಮ್ಮ ಅಮೋಘ ಇನಿಂಗ್ಸ್ ಮುಂದುವರೆಸಿದರು. ಇವರು 91 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 78 ರನ್ ಸಿಡಿಸಿ ಔಟ್ ಆದರು.

24 ವರ್ಷದ ಯುವ ಆಟಗಾರ್ತಿ ದಕ್ಷಿಣ ಆಫ್ರಿಕಾ ವಿರುದ್ಧ ಇತಿಹಾಸ ನಿರ್ಮಿಸಲು 8 ರನ್ ಅವಶ್ಯಕತೆ ಇತ್ತು. ಈ ಸಾಧನೆಯನ್ನು ಇವರು ಇನಿಂಗ್ಸ್‌ನ 8ನೇ ಓವರ್ ಕೊನೆಯ ಎಸೆತದಲ್ಲಿ ಸ್ಕ್ವೇರ್ ಲೆಗ್ ಕಡೆ ಚೆಂಡನ್ನು ತಳ್ಳಿ ಒಂದು ರನ್ ತೆಗೆದುಕೊಳ್ಳುವ ಮೂಲಕ ಮಾಡಿದರು. ಈ ಮೂಲಕ ಪ್ರತಿಕಾ ರಾವಲ್ ಏಕದಿನ ಕ್ರಿಕೆಟ್‌ನಲ್ಲಿ 500 ರನ್ ಪೂರ್ಣಗೊಳಿಸಿದರು. ಪ್ರತಿಕಾ ತಮ್ಮ 8ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಪ್ರತಿಕಾ ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಬಾರಿಸಿ ಮಿಂಚಿದರು.
ವಿಶ್ವ ದಾಖಲೆ
ಪ್ರತಿಕಾ ರಾವಲ್ ವೆಗವಾಗಿ 500 ರನ್ ಕಲೆ ಹಾಕಿದ ವಿಶ್ವ ದಾಖಲೆ ನಿರ್ಮಿಸಿದರು. ಈ ಮೊದಲು ಈ ದಾಖಲೆ ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ ಹೆಸರಿನಲ್ಲಿತ್ತು. ಇಂಗ್ಲೆಂಡ್ ಆಟಗಾರ್ತಿ 500 ರನ್ ಕಲೆ ಹಾಕಲು 9 ಪಂದ್ಯಗಳನ್ನು ತೆಗೆದುಕೊಂಡಿದ್ದರು.
ವೇಗವಾಗಿ 500 ರನ್ ಕಲೆ ಹಾಕಿದ ಆಟಗಾರ್ತಿಯರು
ಪ್ರತಿಕಾ ರಾವಲ್, ಭಾರತ, 8 ಇನಿಂಗ್ಸ್
ಷಾರ್ಲೆಟ್ ಎಡ್ವರ್ಡ್ಸ್, ಇಂಗ್ಲೆಂಡ್, 9 ಇನ್ನಿಂಗ್ಸ್
ಕ್ಯಾಥರೀನ್ ಬ್ರೈಸ್, ಸ್ಕಾಟ್ಲೆಂಡ್, 10 ಇನ್ನಿಂಗ್ಸ್
ನಿಕೋಲ್ ಬೋಲ್ಟನ್, ಆಸ್ಟ್ರೇಲಿಯಾ, 11 ಇನ್ನಿಂಗ್ಸ್
ವೆಂಡಿ ವ್ಯಾಟ್ಸನ್, ಇಂಗ್ಲೆಂಡ್, 12 ಇನ್ನಿಂಗ್ಸ್
ಬೆಲಿಂಡಾ ಕ್ಲಾರ್ಕ್, ಆಸ್ಟ್ರೇಲಿಯಾ, 12 ಇನ್ನಿಂಗ್ಸ್
ಪ್ರತಿಕಾ ರಾವಲ್ ಅವರನ್ನು ಬಿಟ್ಟರೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪರ ಯಾವೊಬ್ಬ ಆಟಗಾರ್ತಿ 50 ರನ್ ಬಾರಿಸಲಿಲ್ಲ. ಕೊನೆಯಲ್ಲಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 276 ರನ್ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಮಹಿಳೆಯರು 49.2 ಓವರ್‍ಗಳಲ್ಲಿ 261 ರನ್‌ಗಳಿಗೆ ಆಲೌಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications