ಐಪಿಎಲ್ ನಲ್ಲಿ ಪ್ರೀತಿ- ವಾಡಿಯಾ ಕಿತ್ತಾಟ, ಕೋರ್ಟಿನಲ್ಲಿ ಅರ್ಜಿ ವಜಾ

ಮುಂಬೈ, ಅಕ್ಟೋಬರ್ 10: ಉದ್ಯಮಿ ನೆಸ್ ವಾಡಿಯಾ ವಿರುದ್ಧ ನಟಿ ಪ್ರೀತಿ ಜಿಂಟಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು(ಅಕ್ಟೋಬರ್ 10) ತಿರಸ್ಕರಿಸಿದೆ. ಎರಡು ದಿನಗಳ ಹಿಂದೆ ಈ ಪ್ರಕರಣವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಕೋರ್ಟ್ ಸೂಚಿಸಿತ್ತು.
ಆದರೆ, ವಿಚಾರಣೆಗೆ ಮನವಿ ಮಾಡಿದ್ದ ಪ್ರೀತಿಗೆ ಈಗ ಹಿನ್ನಡೆಯಾಗಿದೆ. ಉದ್ಯಮಿ ನೆಸ್ ವಾಡಿಯಾ ಅವರು ಕ್ಷಮೆಯಾಚಿಸಿದರೆ ಮಾತ್ರ ಅರ್ಜಿ ಹಿಂಪಡೆಯಲು ನನ್ನ ಕಕ್ಷಿದಾರರು ಸಿದ್ಧರಾಗಿದ್ದಾರೆ ಎಂದು ಪ್ರೀತಿ ಅವರ ವಕೀಲರು ಕೋರ್ಟಿಗೆ ತಿಳಿಸಿದ್ದರು. ಆದರೆ, ನೆಸ್ ವಾಡಿಯಾ ಕ್ಷಮೆಯಾಚಿಸಲು ನಿರಾಕರಿಸಿದ್ದರು.
2014ರ ಮೇ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆಯಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಇವರಿಬ್ಬರು ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರಾಗಿದ್ದರು.
ಐಪಿಎಲ್ ಟಿಕೆಟ್ ಹಂಚಿಕೆ ವಿಷಯದಲ್ಲಿ ಇಬ್ಬರಿಗೂ ಜಗಳವಾಗಿತ್ತು. ಟೀಂ ಮುಂದೆ ನನ್ನನ್ನು ದಬಾಯಿಸಿದ್ದಲ್ಲದೆ, ನನ್ನ ರಟ್ಟೆ ಹಿಡಿದು ಎಳೆದಾಡಿದರು. ನನಗೆ ಅಪಮಾನ ಮಾಡಿ, ಕೆಟ್ಟ ಶಬ್ದಗಳಿಂದ ನಿಂದಿಸಿದರು ಎಂದು ಪ್ರೀತಿ ದೂರಿದ್ದರು.
ನೆಸ್ ವಾಡಿಯಾ ವಿರುದ್ಧ ಚಾರ್ಜ್ ಶೀಟ್ : ಮೇ 30 ರಂದು ನಡೆದ ಘಟನೆ ಕುರಿತಂತೆ ಪ್ರೀತಿ ನೀಡಿದ ದೂರಿನ ಅನ್ವಯ ಪೊಲೀಸರು ಜೂನ್ 13, 2014ರಂದು ಐಪಿಸಿ ಸೆಕ್ಷನ್ 354, 504, 506, 509 ಅನ್ವಯ ದೂರು ದಾಖಲಿಸಿಕೊಂಡಿದ್ದರು, 2018ರ ಫೆಬ್ರವರಿಯಲ್ಲಿ ವಾಡಿಯಾ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications