Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್‌ ಇಂಡೀಸ್‌ ವಿರುದ್ಧದ ಭರ್ಜರಿ ಗೆಲುವಿನ ಬಳಿಕ ಶಾಕಿಬ್‌ ಹೇಳಿದ್ದಿದು!

Prepared to handle any situation: Shakib Al Hasan

ಲಂಡನ್‌, ಜೂನ್‌ 18: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ 322 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ ತಂಡಕ್ಕೆ 99 ಎಸೆತಗಳಲ್ಲಿ ಅಜೇಯ 124 ರನ್‌ಗಳ ಅಮೋಘ ಶತಕದ ಮೂಲಕ ಇನ್ನೂ 51 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್‌ಗಳ ಜಯ ತಂದುಕೊಟ್ಟ ಸ್ಟಾರ್‌ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿಯೂ ಹೊರಹೊಮ್ಮಿದರು.

ಈ ಅಮೋಘ ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ 31 ವರ್ಷದ ಆಲ್‌ರೌಂಡರ್‌, ವಿಶ್ವಕಪ್‌ ಟೂರ್ನಿಗೂ ಮುನ್ನ ಐರ್ಲೆಂಡ್‌ನಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದು ತಂಡಕ್ಕೆ ನೆರವಾಗಿದೆ ಎಂದು ಹೇಳಿದ್ದಾರೆ.

"ಇದು ನಮ್ಮ ತಂಡಕ್ಕೆ ಹೊಸದೊಂದು ಹಂತವಾಗಿದೆ. ಐರ್ಲೆಂಡ್‌ನಲ್ಲಿ ಆಡಿದ ಪಂದ್ಯಗಳು ನಮ್ಮ ನೆರವಿಗೆ ಬಂದಿದೆ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಅಲ್ಲಿ ಗುರಿ ಬೆನ್ನತ್ತಿದ ಎಲ್ಲಾ ಪಂದ್ಯಗಳಲ್ಲಿ ಜಯ ದಾಖಲಿಸಿದ್ದೆವು. ಹೀಗಾಗಿ ದೊಡ್ಡ ಮೊತ್ತವನ್ನು ಬೆನ್ನತ್ತಿದಾಗ ನಮಗೆ ಎಲ್ಲಿಯೂ ಒತ್ತಡದ ಅನುಭವವಾಗಲಿಲ್ಲ,'' ಎಂದು ಶಾಕಿಬ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

"ಹೌದು ಪಂದ್ಯದಲ್ಲಿ ಎಲ್ಲರೂ ದೊಡ್ಡ ಹೊಡೆತಗಳನ್ನಾಡಿದರು. ಆದರೆ, ಕ್ರಿಕೆಟ್‌ನ ಹೊಡೆತಗಳೇನಿವೆ ಅವನ್ನಷ್ಟೇ ನಮ್ಮ ತಂಡ ಆಡಿದೆ. ಇಂತಹ ಆಟವನ್ನು ದೊಡ್ಡ ತಂಡಗಳಷ್ಟೇ ಆಡುತ್ತವೆ. ನಮ್ಮ ತಂಡದ ಈ ಪ್ರದರ್ಶನಕ್ಕೆ ತರಬೇತಿ ವರ್ಗಕ್ಕೆ ಹೆಚ್ಚಿನ ಶ್ರೇಯಸ್ಸು ಸಿಗಬೇಕು. ಹಿಂದೆಲ್ಲಾ ಡ್ರೆಸಿಂಗ್‌ ರೂಮ್‌ನಲ್ಲಿ ನಾವೆಲ್ಲರೂ ಗಾಬರಿಗೊಳ್ಳುತ್ತಿದ್ದೆವು. ಇದೇ ನಮ್ಮ ತಂಡದ ಬಹುದೊಡ್ಡ ಸಮಸ್ಯೆಯಾಗಿತ್ತು. ಇದೀಗ ಆಗಿರುವ ಉತ್ತಮ ಸಂಗತಿಯೇನೆಂದರೆ, ನಮ್ಮ ತರಬೇತಿ ವರ್ಗ ಶಾಂತಯುತವಾಗಿರುವುದರಿಂದ ಆಟಗಾರರು ಕೂಡ ಯಾವುದೇ ರೀತಿಯಲ್ಲಿ ಗಾಬರಿಗೆ ಒಳಗಾಗುತ್ತಿಲ್ಲ. ಒಬ್ಬರು ಗಾಬರಿಗೊಳಗಾದರೆ ಅದರಿಂದ ಬೇರೆಲ್ಲರೂ ಗಾಬರಿಗೊಳ್ಳುವುದು ಸಹಜ. ಆದರೀಗ ಇವೆಲ್ಲವೂ ಇಲ್ಲವಾಗಿದೆ. ನಮ್ಮ ತರಬೇತಿ ವರ್ಗವು ನಮ್ಮ ಡ್ರೆಸಿಂಗ್‌ ರೂಮ್‌ನಲ್ಲಿ ಇಂಥದ್ದೊಂದು ಮಹತ್ವದ ಬದಲಾವಣೆ ತಂದಿದೆ. ಇದರಿಂದಲೇ ಇಷ್ಟು ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಲು ಸಾಧ್ಯವಾಯಿತು ,'' ಎಂದಿದ್ದಾರೆ.

"ಹಿಂದೆಲ್ಲಾ ಕಠಿಣ ಪರಿಶ್ರಮ ವಹಿಸಿದ್ದೇನೆ. ಕಷ್ಟದ ಸ್ಥಿತಿ ಎದುರಾದಾಗಲೆಲ್ಲಾ ನನ್ನ ಪರಿಶ್ರಮವನ್ನು ನೆನೆಯುತ್ತೇನೆ. ಇದು ನನ್ನಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ತುಂಬುತ್ತದೆ. ಎಲ್ಲದಕ್ಕೂ ನಮ್ಮ ಮನಸ್ಥಿತಿ ಮುಖ್ಯವಾಗುತ್ತದೆ. ಜೊತೆಗೆ ನಿಮ್ಮ ಫಿಟ್ನೆಸ್‌ ಉತ್ತಮವಾಗಿದ್ದರೆ, ಕಾರ್ಯ ಸುಲಭವಾಗುತ್ತದೆ. ಆದರೆ, ಕಷ್ಟದ ಸ್ಥಿತಿಗಳಲ್ಲಿ ನಮ್ಮ ಮಾನಸಿಕ ಬಲ ಮತ್ತು ಆತ್ಮಸ್ಥೈರ್ಯ ಪ್ರಮುಖವಾಗುತ್ತದೆ. ಈ ಅಂಶಗಳು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ನೆರವಾಗುತ್ತದೆ,'' ಎಂದು ಶಾಕಿಬ್‌ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

Story first published: Tuesday, June 18, 2019, 17:36 [IST]
Other articles published on Jun 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+