ಏಕದಿನ ಕ್ರಿಕೆಟ್ ಸರಣಿ: ಧೋನಿಗೆ ಮತ್ತೊಂದು ಅಗ್ನಿಪರೀಕ್ಷೆ
ಕಾನ್ಪುರ, ಅ.10: ಅತಿಥೇಯ ಟೀಂ ಇಂಡಿಯಾ ವಿರುದ್ಧ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಟಿ20 ಸರಣಿಯನ್ನು ಸುಲಭವಾಗಿ ತನ್ನದಾಗಿಸಿಕೊಂಡು ಏಕದಿನ ಸರಣಿ ಎದುರು ನೋಡುತ್ತಿದೆ. ಎಂಎಸ್ ಧೋನಿ ನೇತೃತ್ವದ ಭಾರತ ಸಹಜವಾಗಿ ಒತ್ತಡದಿಂದಲೇ ಭಾನುವಾರ ಕಣಕ್ಕಿಳಿಯಲಿದೆ.
ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಅಕ್ಟೋಬರ್ 11ರಿಂದ ಆರಂಭಗೊಳ್ಳಲಿದೆ. ಧೋನಿ ಅವರ ನಾಯಕತ್ವ, ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳು ಎದ್ದಿದೆ. ತಂಡದ ಆಯ್ಕೆಯಲ್ಲಿ ಧೋನಿ ಪದೇ ಪದೇ ಸೋಲುತ್ತಿದ್ದಾರೆ ಎಂಬ ಆಪಾದನೆ ಬಂದಿದೆ.[ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಮಾರ್ಗದರ್ಶಿ]
ಟೀಂ ಇಂಡಿಯಾದಲ್ಲಿ ಬದಲಾವಣೆ: ಟಿ20 ಪಂದ್ಯಗಳಿಗೆ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಕೂಗೆದ್ದಿದೆ. ಏಕದಿನ ಪಂದ್ಯಗಳಿಗೆ ಸ್ಟುವರ್ಟ್ ಬಿನ್ನಿ ಹಾಗೂ ರಹಾನೆ ಅವರನ್ನು ಆಯ್ಕೆ ಮಾಡುವ ಒತ್ತಡದಲ್ಲಿ ಧೋನಿ ಇದ್ದಾರೆ.

ಜೊತೆಗೆ ತಂಡಕ್ಕೆ ವೇಗಿ ಉಮೇಶ್ ಯಾದವ್ ಕೂಡಾ ಮರಳಿದ್ದಾರೆ. ಭಾರತ 'ಎ' ಪರ ಉತ್ತಮ ಪ್ರದರ್ಶನ ನೀಡಿದ ಆಲ್ ರೌಂಡರ್ ಗುರ್ ಕೀರತ್ ಸಿಂಗ್ ಅವರು ಕೂಡಾ ತಂಡದ ಪ್ರಥಮ ಅದ್ಯತೆ ಆಗಲಿದ್ದಾರೆ. [ಭಾರತದ ಸೋಲಿಗಿಂತ ಪ್ರೇಕ್ಷಕರ ವರ್ತನೆಗೆ ಕಟು ಟೀಕೆ]
ಧೋನಿ ಬ್ಯಾಟಿಂಗ್ ಕ್ರಮಾಂಕ: 4ನೇ ಕ್ರಮಾಂಕದಲ್ಲೇ ಧೋನಿ ಆಡಿದರೆ ಉತ್ತಮ ಎಂಬುದು ಹಲವಾರು ತಜ್ಞರ ಅಭಿಪ್ರಾಯವಾಗಿದೆ. ಅದರೆ, ಸಮಯ, ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾಡುವುದು ಧೋನಿ ಶೈಲಿಯಾಗಿದೆ.
ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಆರಂಭಿಕ ಬ್ಯಾಟ್ಸ್ ಮನ್ ಗಳಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ. ರಹಾನೆ ತಂಡ ಸೇರಿದರೂ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲಿದ್ದಾರೆ. ಕಳಪೆ ಪ್ರದರ್ಶನದಿಂದ ರಾಯುಡು ಅವರು ರಹಾನೆಗೆ ಸ್ಥಾನ ಬಿಟ್ಟುಕೊಡಬೇಕಾಗಿದೆ. ಪಂದ್ಯ ಗೆಲ್ಲಿಸಿಕೊಡಬಲ್ಲ ಬೌಲರ್ ಗಳ ಪೈಕಿ ಆರ್ ಅಶ್ವಿನ್ ಬಿಟ್ಟರೆ ಮಿಕ್ಕವರು ಇನ್ನೂ ಲಯ ಕಂಡುಕೊಂಡಿಲ್ಲ.
ದಕ್ಷಿಣ ಆಫ್ರಿಕಾ ಬಲಿಷ್ಠ: ಇನ್ನೊಂದೆಡೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮಾರ್ನೆ ಮಾರ್ಕೆಲ್ ಹಾಗೂ ಡೆಲ್ ಸ್ಟೈನ್ ಅವರ ಬಲ ಸಿಕ್ಕಿದೆ. ಏಕದಿನ ಕ್ರಿಕೆಟ್ ತಂಡಕ್ಕೆ ಎಬಿ ಡಿವಿಲೆಯರ್ಸ್ ನಾಯಕರಾಗಿದ್ದು, ಕೈಲಿ ಅಬಾಟ್ ಹಾಗೂ ಕಗಿಸೋ ರಬಡಾ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸುಳಿವು ನೀಡಿದ್ದಾರೆ. [ಹಸುಳೆ ಮುಂದೆ ಮಂಡಿಯೂರಿದ ಜಗದೇಕ ವೇಗಿ]

ಜೆಪಿ ಡುಮಿನಿ ಲಯ ಕಂಡುಕೊಂಡಿರುವುದು, ಇಮ್ರಾನ್ ತಾಹೀರ್ ಉತ್ತಮ ಬೌಲಿಂಗ್ ದಕ್ಷಿಣ ಆಫ್ರಿಕಾವನ್ನು ಮೇಲ್ನೋಟಕ್ಕೆ ಟೀಂ ಇಂಡಿಯಾಗಿಂತ ಮೇಲಕ್ಕೇರಿಸಿದೆ. ಅಂತಿಮವಾಗಿ ಆಡುವ XI ಜಾಣ್ಮೆಯಿಂದ ಆಯ್ಕೆ ಮಾಡಿದ ನಾಯಕ ಮೊದಲ ಅಗ್ನಿ ಪರೀಕ್ಷೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಸ್ಟಾರ್ ಸ್ಫೋರ್ಟ್ ನಲ್ಲಿ ಬೆಳಗ್ಗೆ 9 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಉಭಯ ತಂಡಗಳು ಇಂತಿದೆ:
ಭಾರತ: ಎಂಎಸ್ ಧೋನಿ (ನಾಯಕ), ರವಿಚಂದ್ರನ್ ಅಶ್ವಿನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಂಬಟಿ ರಾಯುಡು, ಮೋಹಿತ್ ಶರ್ಮ, ರೋಹಿತ್ ಶರ್ಮ, ಉಮೇಶ್ ಯಾದವ್, ಗುರ್ ಕೀರತ್ ಸಿಂಗ್, ಅಮಿತ್ ಮಿಶ್ರಾ.
ದಕ್ಷಿಣ ಆಫ್ರಿಕಾ: ಎಬಿ ಡಿ ವಿಲೆಯರ್ಸ್ (ನಾಯಕ), ಹಶೀಂ ಅಮ್ಲಾ, ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್, ಜೆಪಿ ಡುಮಿನಿ, ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ದೀನ್, ಕ್ರಿಸ್ ಮೋರಿಸ್, ಖಾಯ ಝೊಂಡೋ, ಅರೋನ್ ಫಂಗಿಸೋ, ಇಮ್ರಾನ್ ತಾಹೀರ್, ಕೈಲಿ ಅಬಾಟ್, ಡೇಲ್ ಸ್ಟೈನ್, ಮಾರ್ನೆ ಮಾರ್ಕೆಲ್ ಹಾಗೂ ಕಾಗಿಸೋ ರಬಡಾ (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications