'ಭಾರತೀಯ ಮಹಿಳಾ ತಂಡದಲ್ಲಿ 'ಅಹಂ' ಸಂಸ್ಕೃತಿ ಕೊನೆಗಾಣಬೇಕು'

ನವದೆಹಲಿ: ಇತ್ತೀಚೆಗಷ್ಟೇ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿರುವ ಡಬ್ಲ್ಯೂವಿ ರಾಮನ್ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮುಖ್ಯಸ್ಥ ಸೌರವ್ ಗಂಗೂಲಿಗೆ ಒಂದು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ರಾಮನ್, ಭಾರತ ಮಹಿಳಾ ತಂಡದಲ್ಲಿರುವ 'ಅಹಂ' ಸಂಸ್ಕೃತಿ ಕೊನೆಗಾಣಬೇಕು ಎಂದು ಹೇಳಿರುವುದಾಗಿ ತಿಳಿದುಬಂದಿದೆ.
2018ರಿಂದ 2021ರ ವರೆಗೆ ಭಾರತದ ವನಿತಾ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ದ ಡಬ್ಲ್ಯೂವಿ ರಾಮನ್ ಮೇ 13ರಂದು ಸ್ಥಾನದಿಂದ ಕೆಳಗಿಳಿದಿದ್ದರು. ರಾಮನ್ ಜಾಗಕ್ಕೆ ಹಿಂದೆ ಮುಖ್ಯ ಕೋಚ್ ಆಗಿದ್ದ ರಮೇಶ್ ಪೊವಾರ್ ಅವರೇ ಮತ್ತೆ ಬಂದಿದ್ದರು.
ಗಂಗೂಲಿಗೆ ಬರೆದಿರುವ ಪತ್ರದಲ್ಲಿ ರಾಮನ್ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರನ್ನೂ ಉಲ್ಲೇಖಿಸಿ ಅವರ ಗಮನಕ್ಕೂ ಈ ವಿಚಾರ ಬರುವಂತೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ದ್ರಾವಿಡ್-ಗಂಗೂಲಿ ಒಪ್ಪಿದರೆ ಭಾರತೀಯ ಮಹಿಳಾ ತಂಡಕ್ಕೆ ಒಂದು ಮಾರ್ಗಸೂಚಿ ತಯಾರಿಸಿ ಕೊಡುವುದಾಗಿ ಕೂಡ ಹೇಳಿದ್ದಾರೆ ಎನ್ನಲಾಗಿದೆ.
'ರಾಮನ್‌ಗೆ ತಂಡದ ಏಳ್ಗೆ ಎಲ್ಲದಕ್ಕಿಂತ ಮಿಗಿಲಾಗಿತ್ತು ಎಂದು ಹೇಳುತ್ತಿದ್ದರು. ಅದನ್ನೇ ಅವರು ನಂಬಿದ್ದರು. ಅವರು ತಂಡದಲ್ಲಿ ಯಾವುದೇ ವ್ಯಕ್ತಿ ಅಹಂನವರು ಆಗಿರಬಾರದು ಎಂದು ಹೇಳುತ್ತಿದ್ದರು,' ಎಂದು ರಾಮನ್‌ಗೆ ಹತ್ತಿರದ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications