Prithvi Shaw: ನಾನೇನು ತಪ್ಪು ಮಾಡಿದ್ದೇ... ಮೌನ ಮುರಿದ ಪೃಥ್ವಿ ಶಾ
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ತಂಡದ ಭರವಸೆಯ ಆಟಗಾರ ಪೃಥ್ವಿ ಶಾ ಅನ್‌ಸೋಲ್ಡ್ ಆಗಿದ್ದಾರೆ. ಇವರ ಮೂಲ ಬೆಲೆ 75 ಲಕ್ಷ ಇತ್ತು. ಇವರು ಐಪಿಎಲ್ ಹರಾಜಿನ ಎರಡೂ ದಿನ ಸಹ ಐಪಿಎಲ್ ಫ್ರಾಂಚೈಸಿಗಳ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಇವರು ಅನ್ ಸೋಲ್ಡ್ ಆಗುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋ ಬಗ್ಗೆ ಪೃಥ್ವಿ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೋಲ್ ಮಾಡುವುದು ಒಳ್ಳೆಯದು ಅಲ್ಲ. ಕೆಟ್ಟದ್ದು ಅಲ್ಲ ಎಂದಿದ್ದಾರೆ. ಇನ್ನು ತಮ್ಮ ಮೇಲೆ ಮಾಡಿರುವ ಎಲ್ಲಾ ಮೀಮ್‌ಗಳನ್ನು ನೋಡಿ ನಗುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೆಲ್ಲಾ ಕಾರಣ ಏನು?
ಪೃಥ್ವಿ ಶಾ ತಮ್ಮ 25 ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ತಮ್ಮ ಕುಟುಂಬದ ಜೊತೆಗೆ ಒಂದು ನೃತ್ಯ ಮಾಡುತ್ತಾರೆ. ಅದರಲ್ಲಿ ಅವರ ಅತ್ತಿಗೆ ಹಾಗೂ ಸಹೋದರರಿಯರು ಸೇರಿರುತ್ತಾರೆ. ಈ ನೃತ್ಯವನ್ನು ಅವರ ಸಹೋದರಿಯರು ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದನ್ನು ಕಂಡು ಫ್ಯಾನ್ಸ್ ಗರಂ ಆಗಿದ್ದಾರೆ. ನಾವು ಇಲ್ಲಿ ನೀವು ತಂಡಕ್ಕೆ ಮರಳಿ ಬರಲಿ ಎಂದು ಫಾರ್ಥನೆ ಮಾಡುತ್ತಿದ್ದೇವೆ. ಅಲ್ಲಿ ನೀನು ಡ್ಯಾನ್ಸ್ ಮಾಡುತ್ತಿರುವೆಯಾ ಎಂದು ಕೇಳಿದ್ದಾರೆ.
ಪೃಥ್ವಿ ಶಾ ನನ್ನ ಜನ್ಮ ದಿನಂದದೂ ಸಹ ನಾನು ಸಂತೋಷವಾಗಿ ಕುಣಿಯಬಾರದಾ? ಆ ಸ್ವಾಂತತ್ರ್ಯವೂ ನನಗೆ ಇಲ್ಲವೇ? ನಾನೇನು ತಪ್ಪು ಮಾಡಿದೆ ಎಂದು ಕೇಳಿದ್ದಾರೆ. ಅಲ್ಲದೆ ನಾನು ಯಾವುದೇ ತಪ್ಪನ್ನು ಮಾಡಿಲ್ಲ. ತಪ್ಪು ಮಾಡಿದಾಗ ನನಗೆ ತಿಳಿದಿತ್ತು ಎಂದು ಸ್ಪಷ್ಟನೇ ನೀಡಿದ್ದಾರೆ. ಟ್ರೋಲ್ ಆಗುವುದಕ್ಕೆ ಪೃಥ್ವಿ ಶಾ ಸ್ಪಷ್ಟನೆ ನೀಡಿದ್ದಾರೆ.
ಟೀಮ್ ಇಂಡಿಯಾದಿಂದ ಬಹು ದಿನಗಳಿಂದ ಹೊರಗುಳಿದಿರುವ ಪೃಥ್ವಿ ಶಾ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಆದರೆ ಈ ಕನಸಿಗೆ ಫಲ ನೀಡುತ್ತಿಲ್ಲ. ಇತ್ತೀಚಿಗೆ ಪೃಥ್ವಿ ಶಾ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಸಹ ಆಡಿ ಸೈ ಎನಿಸಿಕೊಂಡಿದ್ದರು. ಆದರೆ ಆ ಟೂರ್ನಿಯಲ್ಲೂ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಮುಂಬೈ ರಣಜಿ ತಂಡದ ಪರ ಇವರಿಗೆ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದರು. ಆದರೆ ಎರಡೂ ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇವರು ಆಡಿದ ನಾಲ್ಕು ಇನಿಂಗ್ಸ್‌ಗಳಲ್ಲಿ 19.66ರ ಸರಾಸರಿಯಲ್ಲಿ 59 ರನ್ ಸಿಡಿಸಿ ನಿರಾಸೆ ಮೂಡಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪೃಥ್ವಿ ಶಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ.
ಪೃಥ್ವಿ ಐಪಿಎಲ್ ಸಾಧನೆ
ಪೃಥ್ವಿ ಶಾ ಕಳೆದ ಕೆಲವು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಆದರೆ ಈ ಬಾರಿಯ ಹರಾಜಿಗೂ ಮುನ್ನ ಇವರನ್ನು ಡೆಲ್ಲಿ ತಂಡ ಕೈ ಬಿಟ್ಟಿತ್ತು. ಇವರು ಐಪಿಎಲ್‌ನಲ್ಲಿ 79 ಪಂದ್ಯಗಳನ್ನು ಆಡಿ 147ರ ಸ್ಟ್ರೈಕ್ ರೇಟ್‌ನಲ್ಲಿ 1892 ರನ್ ಸಿಡಿಸಿದ್ದಾರೆ. ಇದರಲ್ಲಿ 14 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications