ಭಾರತ vs ಆಸ್ಟ್ರೇಲಿಯಾ: ಟೀಕಾಕಾರರಿಗೆ ತಿರುಗೇಟು ನೀಡಿದ ಪೃಥ್ವಿ ಶಾ

ಸಿಡ್ನಿ: ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಓಪನರ್ ಪೃಥ್ವಿ ಶಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಶಾ ತಂಡಕ್ಕೆ ಬಲವಾಗಿ ನಿಲ್ಲಬಲ್ಲರು ಎಂದು ನಿರೀಕ್ಷಿಸಿದ್ದವರಿಗೆ ಶಾ ಬ್ಯಾಟಿಂಗ್ ನಿರಾಸೆ ಮೂಡಿಸಿತ್ತು. ಹೀಗಾಗಿ ಪೃಥ್ವಿಯನ್ನು ಅನೇಕರು ಟೀಕಿಸಿದ್ದರು.
ತನ್ನ ಕಳಪೆ ಪ್ರದರ್ಶನಕ್ಕೆ ಟೀಕಿಸಿದ್ದವರಿಗೆ ಪೃಥ್ವಿ ಶಾ ತಿರುಗೇಟು ನೀಡಿದ್ದಾರೆ. 2018ರಲ್ಲಿ ಅಂಡರ್ 19 ವಿಶ್ವಕಪ್ ನಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಂಡದ ನಾಯಕರಾಗಿದ್ದ ಪೃಥ್ವಿ, ಇನ್‌ಸ್ಟಾಗ್ರಾಮ್ ಮೂಲಕ ಟೀಕಾಕಾರರಿಗೆ ಪ್ರತಿಕ್ರಿಯಿಸಿದ್ದಾರೆ.
'ಒಂದು ಕೆಲಸವನ್ನು ನೀವು ಮಾಡಲು ಯತ್ನಿಸುವಾಗ ಜನ ನಿಮ್ಮನ್ನು ಹೀಯಾಳಿಸತೊಡಗಿದರೆ ಅದರರ್ಥ ನೀವು ಆ ಕೆಲಸ ಮಾಡಬಲ್ಲಿರಿ, ಆದರೆ ಅವರಿಂದ ಮಾಡಲಾಗಲ್ಲ ಎಂದು,' ಎಂದು ಶಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಆರಂಭಿಕ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಪೃಥ್ವಿ ಕ್ರಮವಾಗಿ 0, 4 ರನ್ ಬಾರಿಸಿದ್ದರು. ಅಂದಿನ ಪಂದ್ಯದಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 36 ರನ್ ಬಾರಿಸಿ ಕೆಟ್ಟ ದಾಖಲೆ ನಿರ್ಮಿಸಿತ್ತಲ್ಲದೆ, 8 ವಿಕೆಟ್ ಸೋಲನುಭವಿಸಿತ್ತು. ಬಹುಶಃ ದ್ವಿತೀಯ ಪಂದ್ಯದಲ್ಲಿ ಶಾ ಬದಲಿಗೆ ಕೆಎಲ್ ರಾಹುಲ್ ಕಾಣಿಸಿಕೊಳ್ಲುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications