Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೃಥ್ವಿ ಶಾ ಮೊಣಕಾಲಿಗೆ ತೀವ್ರ ಗಾಯ: ಸಯ್ಯದ್ ಮುಷ್ತಾಕ್, ವಿಜಯ್ ಹಜಾರೆ ಟ್ರೋಫಿಗೆ ಅನುಮಾನ

ಯುವ ಕ್ರಿಕೆಟಿಗ ಪೃಥ್ವಿ ಶಾ ಇಂಗ್ಲೆಂಡ್‌ನ ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಇಂಗ್ಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ ಪೃಥ್ವಿ ಶಾ ಮತ್ತೆ ಭರ್ಜರಿ ಫಾರ್ಮ್‌ಗೆ ಮರಳಿರುವುದನ್ನು ಭರ್ಜರಿಯಾಗಿ ಘೋಷಿಸಿದ್ದರು. ಆದರೆ ಅದಾದ ಬಳಿಕ ಗಾಯಕ್ಕೆ ತುತ್ತಾಗಿರುವುದು ಯುವ ಕ್ರಿಕೆಟಿಗನಿಗೆ ತೀವ್ರ ಹಿನ್ನಡೆಯುಂಟು ಮಾಡಿದೆ. ಇದೀಗ ಮುಂಬರುವ ದೇಶೀಯ ಆವೃತ್ತಿಗೆ ಅಲಭ್ಯವಾಗುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ನಡೆಯುತ್ತಿರುವ ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ನಾರ್ಥಾಂಪ್ಟನ್ ಶೈರ್ ತಂಡದ ಪರವಾಗಿ ಆಡುತ್ತಿದ್ದರು. ಆದರೆ ಪಂದ್ಯದಲ್ಲಿ ಫೀಲ್ಡಿಂಗ್ ಸಂದರ್ಭದಲ್ಲಿ ಯುವ ಆಟಗಾರ ಮೊಣಕಾಲಿನ ತೀವ್ರ ಗಾಯಕ್ಕೆ ಒಳಗಾಗಿದ್ದಾರೆ. ಸ್ಕ್ಯಾನಿಂಗ್ ವರದಿ ಈಗ ಬಂದಿದ್ದು ಆರಂಭದಲ್ಲಿ ಊಹಿಸಿದ್ದಕ್ಕಿಂತಲೂ ಗಾಯದ ತೀವ್ರತೆ ಹೆಚ್ಚಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಕ್ರಿಕೆಟ್ ಅಸೊಸಿಯೇಶನ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದು ಮುಂದಿನ ವರ್ಷಾರಂಭದಲ್ಲಿ ಪೃಥ್ವಿ ಶಾ ಮತ್ತೆ ಕಣಕ್ಕಿಳಿಯಬಹುದು ಎಂದಿದ್ದಾರೆ.

Prithvi Shaw Injury: doubtful for Syed Mushtaq ali Trophy and Vijay Hazare Trophy

"ಪೃಥ್ವಿ ಶಾ ಜೊತೆಗೆ ಚರ್ಚೆ ನಡೆಸಿದ ಬಳಿಕ ಅವರ ಸಂಪೂರ್ಣ ಚೇತರಿಕೆಗೆ ಎರಡರಿಂದ ಮೂರು ತಿಂಗಳ ಕಾಲಾವಧಿ ಅಗತ್ಯವಿರುವುದು ಕಂಡುಬಂದಿದೆ. ಡಿಸೆಂಬರ್‌ ವೇಳೆಗೆ ಅವರು ಸಿದ್ಧವಾಗುವ ಸಾಧ್ಯತೆಯಿದ್ದು ಜನವರಿಯಲ್ಲಿ ರಣಜಿ ಟ್ರೋಫಿಯ ವೇಳೆಗೆ ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣುವ ನಿರೀಕ್ಷೆಯಿದೆ" ಎಂದು ಎಂಸಿಎ ಅಧಿಕಾರಿ ಕ್ರಿಕ್ ಬಜ್‌ಗೆ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು "ಪೃಥ್ವಿ ಶಾ ಬಿಸಿಸಿಐ ಉಸ್ತುವಾರಿಯಲ್ಲಿ ಲಂಡನ್‌ನಲ್ಲಿ ತಜ್ಞವೈದ್ಯರಲ್ಲಿ ಶುಕ್ರವಾರ ಸಮಾಲೋಚನೆ ನಡೆಸಲಿದ್ದಾರೆ" ಎಂದು ತಿಳಿಸಿದ್ದಾರೆ.

ಪೃಥ್ವಿ ಶಾ ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಅಮೋಈಘ ಫಾರ್ಮ್‌ನಲ್ಲಿದ್ದು ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಶಾ ಭರ್ಜರಿ 429 ರನ್‌ಗಳನ್ನು ಗಳಿಸಿದ್ದು ಸೋಮರ್ಸೆಟ್ ತಂಡದ ವಿರುದ್ಧ ದಾಖಲೆಯ 244 ರನ್ ಕೂಡ ಇದರಲ್ಲಿ ಸೇರಿದೆ. ಅಲ್ಲದೆ ಡರ್ಹಮ್ ವಿರುದ್ಧ 125 ರನ್‌ಗಳನ್ನು ಕುಡ ಬಾರಿಸಿ ಅಬ್ಬರಿಸಿದ್ದರು. ಆದರೆ ಮೊಣಕಾಲಿನ ಗಾಯಕ್ಕೆ ತುತ್ತಾಗುವ ಮೂಲಕ ನಾರ್ಥಾಂಪ್ಟನ್ ಶೈರ್ ಜೊತೆಗಿನ ಈ ಬಾರಿಯ ಅಭಿಯಾನ ಅಂತ್ಯವಾದಂತಾಗಿದೆ.

ಇನ್ನು ಪೃಥ್ವಿ ಶಾ ಈ ಸಂದರ್ಭದಲ್ಲಿ ಗಾಯಗೊಂಡಿರುವುದು ರಾಷ್ಟ್ರೀಯ ತಂಡದಲ್ಲಿ ಮತ್ತೆ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಕನಸಿಗೆ ದೊಡ್ಡ ಏಟು ಕೊಟ್ಟಂತಾಗಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಮತ್ತೆ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೇ ಸಂದರ್ಭದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದಾರೆ.

Story first published: Thursday, August 17, 2023, 22:59 [IST]
Other articles published on Aug 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+