ಪೂಜಾರ ಸ್ಥಾನಕ್ಕೆ ಸೂಕ್ತವಾಗಬಲ್ಲ ಭಾರತೀಯ ಯುವ ಆಟಗಾರನನ್ನು ಹೆಸರಿಸಿದ ಬ್ರಾಡ್ ಹಾಗ್

ಭಾರತೀಯ ಅನುಭವಿ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ಇತ್ತೀಚಿನ ದಿನಗಳಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪ್ರವಾಸದಲ್ಲಿ ಪೂಜಾರ ಕೆಚ್ಚೆದೆಯ ಪ್ರದರ್ಶನವನ್ನು ನೀಡಿದರಾದರೂ ದೊಡ್ಡ ಇನ್ನಿಂಗ್ಸ್ ಅವರಿಂದ ಬಂದಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಹೀಗೆಯೇ ಆಗಿತ್ತು. ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಪೂಜಾರ ತೀರಾ ಕಳಪೆ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಈ ಪ್ರದರ್ಶನದ ಕಾರಣದಿಂದಾಗಿ ಚೇತೇಶ್ವರ್ ಪೂಜಾರಾ ಸ್ಥಾನ ಈಗ ತೂಗುಯ್ಯಾಲೆಯಲ್ಲಿದೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಪೂಜಾರ ಭವಿಷ್ಯವನ್ನು ನಿರ್ಧರಿಸಿದರೂ ಅಚ್ಚರಿಯಿಲ್ಲ. ಈ ಮಧ್ಯೆ ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗ ಬ್ರಾಡ್ ಹಾಗ್ ಚೇತೇಶ್ವರ್ ಪೂಜಾರ ಸ್ಥಾನಕ್ಕೆ ಸೂಕ್ತವಾಗಬಲ್ಲ ಯುವ ಆಟಗಾರನನ್ನು ಹೆಸರಿಸಿದ್ದಾರೆ.

ಪೃಥ್ವಿ ಶಾ ಬಗ್ಗೆ ಬ್ರಾಡ್ ಹಾಗ್ ವಿಶ್ವಾಸ
ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಚೇತೇಶ್ವರ್ ಪೂಜಾರ ಬದಲಿಗೆ ಸೂಕ್ತವಾದ ಆಟಗಾರ ಎಂದು ಬ್ರಾಡ್ ಹಾಗ್ ಹೇಳಿದ್ದಾರೆ. "ಯಾರಾದರೂ ಪೂಜಾರ ಅವರ ಸ್ಥಾನವನ್ನು ತುಂಬಬಲ್ಲ ಅರ್ಹ ಆಟಗಾರನಿದ್ದರೆ ಅದು ಪೃಥ್ವಿ ಶಾ. ನನ್ನ ಪ್ರಕಾರ ಅವರು ಆರಂಭಿಕನಿಗಿಂತ ಈ ಕ್ರಮಾಂಕದಲ್ಲಿ ಉತ್ತಮವೆನಿಸುತ್ತಾರೆ ಎಂದು ಭಾವಿಸುತ್ತೇನೆ. ಆತನಲ್ಲಿ ಸಾಕಷ್ಟು ಪ್ರತಿಭೆಯಿದ್ದು ಉತ್ತಮ ಭವಿಷ್ಯವಿದೆ. ಆತ ಇಂಗ್ಲೆಂಡ್ ಪ್ರವಾಸದಲ್ಲಿಲ್ಲ. ಆದರೆ ವೈಲ್ಡ್ ಕಾರ್ಡ್ ಆಯ್ಕೆ ಆತ" ಎಂದು ಹಾಗ್ ಹೇಳಿದ್ದಾರೆ.

ಪೂಜಾರ ಕಳಪೆ ಫಾರ್ಮ್
ರಾಹುಲ್ ದ್ರಾವಿಡ್ ಬಳಿಕ ಭಾರತ ಕ್ರಿಕೆಟ್‌ನ ಗೋಡೆ ಎಂದು ಖ್ಯಾತಿಯನ್ನು ಪಡೆದಿರುವ ಚೇತೇಶ್ವರ್ ಪೂಜಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ 18 ಪಂದ್ಯಗಳ ಪೈಕಿ ಕೇವಲ 28 ರನ್‌ಗಳ ಸರಾಸರಿಯಲ್ಲಿ 841 ರನ್‌ಗಳಿಸಿದ್ದಾರೆ. ಈ ಕಳಪೆ ಪ್ರದರ್ಶನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಮುಂದುವರಿದಿತ್ತು. ಫೈನಲ್ ಪಂದ್ಯದಲ್ಲಿ ಪೂಜಾರ ಕೇವಲ 23 ರನ್‌ಗಳನನ್ಷ್ಟೇ ಗಳಿಸಲು ಶಕ್ತರಾಗಿದ್ದರು.

ಪೂಜಾರ ಮಿಂಚಲಿದ್ದಾರೆ ಎಂದ ಚೋಪ್ರ
ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಬಗ್ಗೆ ಟೀಕೆಗಳು ಕೇಳಿ ಬರತೊಡಗಿದ್ದರೂ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಮಾತ್ರ ಪೂಜಾರ ಪರವಾಗಿ ಬ್ಯಾಟ್ ಬೀಸಿದ್ದಾರೆ. ಚೇತೇಶ್ವರ್ ಪೂಜಾರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಆಕಾಶ್ ಚೋಪ್ರ ವ್ಯಕ್ತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications