ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದೇ ನನ್ನ ಗುರಿ ಎಂದ ಈ ಬ್ಯಾಟರ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಹೊರಗಿಟ್ಟಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿರುವ ಪೃಥ್ವಿಶಾ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಪಶ್ಚಿಮ ವಲಯಕ್ಕಾಗಿ ದುಲೀಪ್ ಟ್ರೋಫಿಯಲ್ಲಿ ಪೃಥ್ವಿ ಶಾ ಸತತವಾಗಿ ಶತಕಗಳನ್ನು ಸಿಡಿಸಿದರು ಮತ್ತು ಕಳೆದ ತಿಂಗಳು ನ್ಯೂಜಿಲೆಂಡ್ ಎ ವಿರುದ್ಧ ಭಾರತ ಎ ಪರ 77 ರನ್ ಗಳಿಸಿದರು.
ಪೃಥ್ವಿ ಶಾ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು ಕೂಡ ರನ್ ಗಳಿಸುವ ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಅವರು ಎಂದಿಗೂ ತಮ್ಮ ಆಶಯವನ್ನು ಬಿಟ್ಟುಕೊಡಲು ಸಿದ್ಧರಾಗಿಲ್ಲ.
ಪೃಥ್ವಿ ಶಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ, ಬಿಸಿಸಿಐ ಮಾತ್ರ ಅಚ್ಚರಿ ಎಂಬಂತೆ ಹಲವು ಹೊಸಬರನ್ನು ಆಯ್ಕೆ ಮಾಡಿ, ಪೃಥ್ವಿ ಶಾ ಅವರನ್ನು ಕೈ ಬಿಟ್ಟಿದೆ. ಬಿಸಿಸಿಐ ನಡೆ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ. ಆಯ್ಕೆಗಾಗಿ ಪೃಥ್ವಿ ಶಾರನ್ನು ಕಡೆಗಣಿಸಿದ್ದಕ್ಕೆ ಟೀಕೆ ಮಾಡಿದ್ದರು.

ಕಠಿಣ ಕೆಲಸ ಮಾಡಿದರೂ ಅವಕಾಶ ಸಿಗುತ್ತಿಲ್ಲ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗದಿರುವ ಬಗ್ಗೆ ಪೃಥ್ವಿ ಶಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, "ನನಗೆ ನಿರಾಶೆಯಾಗಿದೆ. ನಾನು ರನ್ ಗಳಿಸುತ್ತಿದ್ದೇನೆ, ಸಾಕಷ್ಟು ಕಠಿಣ ಕೆಲಸ ಮಾಡುತ್ತಿದ್ದೇನೆ, ಆದರೆ ಅವಕಾಶ ಸಿಗುತ್ತಿಲ್ಲ. ಆದರೆ, ಪರವಾಗಿಲ್ಲ. ರಾಷ್ಟ್ರೀಯ ಆಯ್ಕೆದಾರರು ನಾನು ಸಿದ್ಧ ಎಂದು ಭಾವಿಸಿದಾಗ, ಅವರು ನನ್ನನ್ನು ಆಯ್ಕೆ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಪೃಥ್ವಿ ಶಾ ಸದ್ಯ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿಲ್ಲ. ಈ ಬಗ್ಗೆ ಪೃಥ್ವಿ ಶಾ ಸ್ವತಃ ಬೇಸರ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
Ind vs SA 2nd ODI: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ 11

ನನ್ನ ಕೆಲಸ ಮುಂದುವರೆಸುತ್ತೇನೆ
ನನಗೆ ಯಾವುದೇ ಅವಕಾಶಗಳು ಸಿಗಲಿ, ಅದು ಭಾರತ 'ಎ' ಅಥವಾ ಇತರ ತಂಡಗಳಾಗಿರಲಿ, ನಾನು ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ ಮತ್ತು ನನ್ನ ಫಿಟ್‌ನೆಸ್ ಮಟ್ಟವನ್ನು ಉತ್ತಮ ಪಡಿಸಿಕೊಳ್ಳುತ್ತೇನೆ. ನಾನು ಫಾರ್ಮ್‌ಗೆ ಮರಳಿದ್ದೇನೆ ಎಂದು ಪೃಥ್ವಿ ಶಾ ಅವರು ಹೇಳಿದರು.
ನಾನು ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುವ ಬಗ್ಗೆ ಚಿಂತಿಸುತ್ತಿದ್ದೇನೆ. ನನ್ನ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ನಾನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಯಾವಾಗ ಅವಕಾಶ ಸಿಕ್ಕರೂ, ತಂಡಕ್ಕಾಗಿ ಆಡಲು ಸಿದ್ಧನಾಗಿರುತ್ತೇನೆ ಎಂದು ಹೇಳಿದರು.

ಸಿಹಿ, ತಂಪು ಪಾನೀಯ ಸೇವನೆ ಬಿಟ್ಟ ಪೃಥ್ವಿ ಶಾ
ಕಳೆದ ಕೆಲವು ವರ್ಷಗಳಿಂದ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಫಿಟ್‌ನೆಸ್‌ಗೆ ನೀಡುತ್ತಿರುವ ಮಹತ್ವವನ್ನು ಪೃಥ್ವಿ ಶಾ ಅರ್ಥಮಾಡಿಕೊಂಡಿದ್ದಾರೆ. ಐಪಿಎಲ್ 2022ರ ಋತುವಿನಿಂದ ಸುಮಾರು ಏಳರಿಂದ ಎಂಟು ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
"ನಾನು ಕಳೆದ ಐಪಿಎಲ್ ನಂತರ ತೂಕ ಇಳಿಸುವ ಕೆಲಸ ಮಾಡಿದ್ದೇನೆ ಮತ್ತು ಕಳೆದ ಐಪಿಎಲ್ ನಂತರ ಏಳರಿಂದ ಎಂಟು ಕೆಜಿ ತೂಕ ಇಳಿಸಿದ್ದೇನೆ. ನಾನು ಜಿಮ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ, ಸಾಕಷ್ಟು ಓಟ ಮಾಡಿದ್ದೇನೆ, ಯಾವುದೇ ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳನ್ನು ಸೇವಿಸಲಿಲ್ಲ. ಚೈನೀಸ್ ಆಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ" ಎಂದು ಅವರು ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications