ಸ್ಟಾರ್ ಬ್ಯಾಟ್ಸ್‌ಮನ್ ಪೃಥ್ವಿ ಶಾ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮರಳುವ ಕನಸಿನಲ್ಲಿದ್ದಾರೆ. ಇತ್ತೀಚೆಗೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಫಿಟ್‌ನೆಸ್‌ನಲ್ಲಿ ಕೆಲಸ ಮಾಡಿದ ನಂತರ ಮೈದಾನಕ್ಕೆ ಮರಳಿದ್ದಾರೆ. ಅಂಗಳಕ್ಕೆ ಇಳಿಯುತ್ತಿದ್ದಂತೆ ತಮ್ಮ ರುದ್ರಾವತಾರವನ್ನು ಪೃಥ್ವಿ ಶಾ ಪ್ರದರ್ಶಿಸಿದ್ದಾರೆ.
ಛತ್ತೀಸ್‌ಗಢ ವಿರುದ್ಧ ಮುಂಬೈ ಪರ ಆಡುತ್ತಿರು ಪೃಥ್ವಿ ಶಾ 185 ಎಸೆತಗಳಲ್ಲಿ 159 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುತ್ತಿದ್ದಾರೆ. ಪೃಥ್ವಿ ಶಾ ಅವರ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳು ಸೇರಿದ್ದವು. ಅಷ್ಟೇ ಅಲ್ಲ, ಪೃಥ್ವಿ ಶಾ ಭೂಪೇನ್ ಜೊತೆಗೂಡಿ ಮುಂಬೈಗೆ ಮೊದಲ ವಿಕೆಟ್‌ಗೆ 244 ರನ್‌ಗಳ ಆರಂಭವನ್ನು ನೀಡಿದರು. ಈ ಇನ್ನಿಂಗ್ಸ್ ಮೂಲಕ ಪೃಥ್ವಿ ಶಾ ಫಾರ್ಮ್ ಮತ್ತು ಫಿಟ್ನೆಸ್ ಎರಡನ್ನೂ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೃಥ್ವಿ ಶಾ ಫಾರ್ಮ್‌ಗೆ ಮರಳಿರುವುದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಮಾಧಾನಕರ ಸುದ್ದಿ. ಕಳೆದ ಋತುವಿನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ ಅವರನ್ನು ಉಳಿಸಿಕೊಂಡಿದೆ. ರಿಷಭ್ ಪಂತ್ ಇಡೀ ಋತುವನ್ನು ಆಡುವ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಇಲ್ಲ.
ಒಂದು ವೇಳೆ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕೆ ಇಳಿದರೆ ಆಟದಲ್ಲಿ ಬದಲಾವಣೆಯನ್ನು ತರಬಹುದು. ಪೃಥ್ವಿ ಶಾ ಸ್ಫೋಟಕ ರೀತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರೆ, ಡೆಲ್ಲಿ ತಂಡಕ್ಕೆ ಬೂಸ್ಟ್ ಸಿಕ್ಕಂತೆ ಆಗುತ್ತದೆ. ಅಲ್ಲದೆ ಎದುರಾಳಿ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಲ್ಲಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಪೃಥ್ವಿ ಶಾ 19ನೇ ವಯಸ್ಸಿನಲ್ಲಿ ಟೀಂ ಇಂಡಿಯಾ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಶತಕ ಬಾರಿಸಿದ ಆಟಗಾರ. ಶಾ ಅವರನ್ನು ಭವಿಷ್ಯದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ನೋಡಲಾಗುತ್ತಿದೆ. ಪೃಥ್ವಿ ಶಾ ಅವರ ಫಾರ್ಮ್ ಮತ್ತು ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಎದ್ದವು. ಟೀಂ ಇಂಡಿಯಾ ಈಗ ಭವಿಷ್ಯದ ತಂಡವನ್ನು ಕಟ್ಟುವಲ್ಲಿ ಚಿತ್ತ ನೆಟ್ಟಿದೆ.

ಇಂತಹ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ತನ್ನ ಕ್ಷಮತೆಯನ್ನು ಸಾಬೀತು ಪಡಿಸಿದರೆ ಅವರು ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡ ಬಹುದು. ಪೃಥ್ವಿ ಶಾ ಕೊನೆಯ ಬಾರಿಗೆ 2021 ರಲ್ಲಿ ಭಾರತಕ್ಕಾಗಿ ಆಡಿದ್ದರು. ಪೃಥ್ವಿ ಶಾ 5 ಟೆಸ್ಟ್ ಪಂದ್ಯಗಳಲ್ಲದೆ 6 ಏಕದಿನ ಹಾಗೂ ಒಂದು ಟಿ20 ಪಂದ್ಯವನ್ನು ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದಿದ್ದಾರೆ. ಆದಾಗ್ಯೂ, ಟೆಸ್ಟ್ ತಂಡಕ್ಕೆ ಮರಳುವ ಶಾ ಅವರ ಹಕ್ಕು ತುಂಬಾ ಪ್ರಬಲವಾಗಿದೆ.
ಪೃಥ್ವಿ ಶಾ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. 2018ರಂದು ಪೃಥ್ವಿ ಮೊದಲ ಬಾರಿಗೆ ಐಪಿಎಲ್ ಆಡುವ ಅವಕಾಶವನ್ನು ಪಡೆದರು. ಅಲ್ಲಿಂದ ಇಲ್ಲಿಯ ವರೆಗೆ ಪೃಥ್ವಿ 71 ಪಂದ್ಯಗಳನ್ನು ಆಡಿದ್ದು 1694 ರನ್ ಸಿಡಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳು ಸೇರಿವೆ. ಅಲ್ಲದೆ 56 ಬೌಂಡರಿ ಹಾಗೂ 16 ಸಿಕ್ಸರ್ ಬಾರಿಸಿ ತಾವಾಡುವ ತಂಡಕ್ಕೆ ನೆರವಾಗಿದ್ದಾರೆ.