Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪದಾರ್ಪಣಾ ಪಂದ್ಯದಲ್ಲಿ ಕನ್ನಡಿಗ ಮಯಾಂಕ್, ಪೃಥ್ವಿ ಶಾ ವಿಶೇಷ ದಾಖಲೆ

Prithvi Shaw, Mayank Agarwal Set To Create A Unique Record In Hamilton

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಸರಣಿಯ ಮೊದಲ ಪಂದ್ಯ ಬುಧವಾರ ಆರಂಭವಾಗಲಿದೆ. ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಪೃಥ್ವಿ ಶಾ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಪೃಥ್ವಿ ಶಾ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರೂ ಟೆಸ್ಟ್‌ನಲ್ಲಿ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರರು. ಆದರೆ ನಾಳೆ ಈ ಇಬ್ಬರು ಆಟಗಾರರಿಗೂ ಅಂತಾರಾಷ್ಟ್ರೀಯ ಏಕದಿನದಲ್ಲಿ ಪದಾರ್ಪಣಾ ಪಂದ್ಯ. ಇಬ್ಬರೂ ಆರಂಭಿಕರಾಗಿ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುತ್ತಿರುವುದು ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ಕನೇ ದೃಷ್ಟಾಂತವಾಗಿದೆ.

ಕೊನೆಯ ಬಾರಿಗೆ 2016ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಇದೇ ರೀತಿಯ ಸನ್ನಿವೇಶ ಉಂಟಾಗಿತ್ತು. ಅಂದು ಇಬ್ಬರೂ ಆರಂಭಿಕರು ಕನ್ನಡಿಗರೇ ಆಗಿದ್ದಿದ್ದು ಮತ್ತೊಂದು ವಿಶೇಷ. ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ ಅಂದು ಪದಾರ್ಪಣಾ ಪಂದ್ಯದಲ್ಲೇ ಆರಂಭಿಕರಾಗಿ ಕಣಕ್ಕಿಳೀದಿದ್ದರು.

ಇದಕ್ಕೂ ಮುನ್ನ 1974ರಲ್ಲಿ ಬ್ಯಾಟಿಂಗ್ ಲೆಜೆಂಡ್ ಸುನಿಲ್ ಗವಾಸ್ಕರ್ ಪದಾರ್ಪಣಾ ಪಂದ್ಯದಲ್ಲಿ ಮೊದಲ ಬಾರಿಗೆ ಆರಂಭಿಕರಿಬ್ಬರೂ ಈ ರೀತಿ ಸನ್ನಿವೇಶ ಮೊದಲಬಾರಿಗೆ ಉಂಟಾಗಿತ್ತು. ಸುನಿಲ್ ಗವಾಸ್ಕರ್ ಜೊತೆಗೆ ಸುಧೀರ್ ನಾಯ್ಕ್ ಇಬ್ಬರಿಗೂ ಇದು ಪದಾರ್ಪಣಾ ಪಂದ್ಯ. 1976ರರಲ್ಲಿ ಪಾರ್ಥಸಾರಥಿ ಶರ್ಮಾ ಮತ್ತು ದಿಲೀಪ್ ವೆಂಗ್ ಸರ್ಕಾರ್ ಇಬ್ಬರೂ ಪದಾರ್ಪಣಾ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಸರಣಿಗೂ ಮುನ್ನವೇ ಗಾಯಗೊಂಡು ನ್ಯೂಜಿಲೆಂಡ್ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಬಳಿಕ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ನಾಯು ಬೇನೆಗೆ ಒಳಗಾದ ಕಾರಣ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಸಂಪೂರ್ಣ ಹೊರಗುಳಿದಿದ್ದಾರೆ.

Story first published: Tuesday, February 4, 2020, 16:11 [IST]
Other articles published on Feb 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+