For Quick Alerts
ALLOW NOTIFICATIONS  
For Daily Alerts
 

ಆಂಗ್ಲರ ನಾಡಿನಲ್ಲಿ ಪೃಥ್ವಿ ಶಾ ಬಿರುಗಾಳಿ: ಏಕದಿನ ಮಾದರಿಯಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ ದಾಂಡಿಗ

ಭಾರತದ ಯುವ ಕ್ರಿಕೆಟಿಗ ಪೃಥ್ವಿ ಶಾ ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ್ದಾರೆ. ಇಂಗ್ಲೆಂಡ್‌ನ ದೇಶೀಯ ಲಿಸ್ಟ್ ಎ ಕ್ರಿಕೆಟ್ ಟೂರ್ನಿಯಾದ ರಾಯಲ್ ಲಂಡನ್ ಒನ್‌ ಡೇ ಕಪ್‌ನಲ್ಲಿ ಪೃರ್ಥವಿ ಶಾ ಭಾಗುಯಾಗಿದ್ದು ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಟೂರ್ನಿಯ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಕೇವಲ ಮೂರನೇ ಕ್ರಿಕೆಟಿಗ ಎಂಬ ದಾಖಲೆಗೆ ಶಾ ಪಾತ್ರರಾಗಿದ್ದಾರೆ. ಅಲ್ಲದೆ ಕಳೆದ ವರ್ಷ ಒಲ್ಲಿ ರಾಬಿನ್ಸನ್ ಸಿಡಿಸಿದ್ದ ವೈಯಕ್ತಿಕ ಅತಿ ಹೆಚ್ಚಿನ ಸ್ಕೋರ್ 206 ರನ್‌ಗಳನ್ನು ಕೂಡ ಪೃಥ್ವಿ ಶಾ ಹಿಂದಿಕ್ಕಿದ್ದಾರೆ.

ಈ ಪಂದ್ಯದಲ್ಲಿ ಪೃಥ್ವಿ ಶಾ ಅಬ್ಬರ ಎದೆಂಥಾ ಪ್ರಮಾಣದಲ್ಲಿತ್ತೆಂದರೆ ಅವರೊಬ್ಬರೇ ಗಳಿಸಿದ್ದು ಬರೊಬ್ಬರಿ 244 ರನ್. ಇದಕ್ಕಾಗಿ ಬಳಸಿಕೊಂಡಿದ್ದು ಕೇವಲ 153 ಎಸೆತ. 28 ಬೌಂಡರಿ ಹಾಗೂ 11 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಲಿಸ್ಟ್ ಎ ಇತಿಹಾಸದಲ್ಲಿ ಪೃಥ್ವಿ ಶಾ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.

Prithvi Shaw record breaking knock: hits double hundred in One-Day Cup 2023

23 ವರ್ಷದ ಭಾರತದ ಯುವ ಬ್ಯಾಟರ್ ಈ ಋತುವಿನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡದ ಪರವಾಗಿ ಆಡಿ ಗ್ರೂಪ್ ಹಂತದ ಮೂರನೇ ಪಂದ್ಯದಲ್ಲಿ ಸೋಮರ್‌ಸೆಟ್ ವಿರುದ್ಧ ಅಮೋಘ ಪ್ರದರ್ಶನ ನೀಡುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಇದಕ್ಕೂ ಮುನ್ನ ನಡೆದ ಎರಡು ಪಂದ್ಯಗಳಲ್ಲಿ ಶಾ 60 ರನ್‌ಗಳನ್ನು ಮಾತ್ರವೇ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಲಿಸ್ಟ್ ಎ ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಬ್ಯಾಟಿಂಗ್ ಪ್ರದರ್ಶನ ನಿಡಿದ್ದು ಈ ಮೂಲಕ ತಮ್ಮ ಕಳಪೆ ಫಾರ್ಮ್ ಅಂತ್ಯಗೊಳಿಸಿದ್ದಾರೆ.

ಪೃಥ್ವಿ ಶಾ ಈ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಲ್ಲದೆ ಇಂಗ್ಲೆಂಡ್‌ನ ಲಿಸ್ಟ್ ಎ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಳೆದ ವರ್ಷ ದಾಖಲಾದ ಅತ್ಯಧಿಕ ಸ್ಕೋರ್ ದಾಖಲೆಯನ್ನು ಕೂಡ ಮುರಿದಿದ್ದಾರೆ. ಕೆಂಟ್‌ನ ಒಲಿ ರಾಬಿನ್ಸನ್ ಮತ್ತು ಸಸೆಕ್ಸ್‌ನ ಅಲಿ ಓರ್ 2022ರ ಆವೃತ್ತಿಯಲ್ಲಿ ತಲಾ 206 ರನ್ ಗಳಿಸಿ ಈ ಟೂರ್ನಿಯಲ್ಲಿ ಮೊದಲ ಬಾರಿಗೆ ದ್ವಿಶತಕಗಳನ್ನು ಸಿಡಿಸಿದ ಸಾಧನೆ ಮಾಡಿದ್ದರು.

ಗ್ಲೌಸೆಸ್ಟರ್‌ಶೈರ್ ವಿರುದ್ಧದ ಮೊದಲ ಪಂದ್ಯದಲ್ಲಿ 34 ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಶಾ ಹಿಟ್ ವಿಕೆಟ್‌ ಮೂಲಕ ವಿಕೆಟ್ ಕಳೆದುಕೊಂಡಿದ್ದರು. ನಂತರ ಎರಡನೇ ಪಂದ್ಯದಲ್ಲಿ ಸಸೆಕ್ಸ್ ವಿರುದ್ಧ 26 ರನ್ ಮಾತ್ರ ಗಳಿಸಲು ಶಕ್ರವಾಗಿದ್ದರು. ಮೂರನೇ ಪಂದ್ಯದಲ್ಲಿ ಅವರು ಇಂಗ್ಲೆಂಡ್‌ನ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗವಾಗಿ ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದು ಇದಕ್ಕಾಗಿ ಕೇವಲ 129 ಎಸೆತಗಳನ್ನು ಮಾತ್ರವೇ ಬಳಸಿಕೊಂಡದರು.

ಥಾಣೆ ಮೂಲದ ಸ್ಫೋಟಕ ಯುವ ಕ್ರಿಕೆಟಿಗ ಕೊನೆಯ ಬಾರಿಗೆ ಭಾರತ ತಂಡದ ಪರವಾಗಿ ಜುಲೈ 2021 ರಲ್ಲಿ ಕಣಕ್ಕಿಳಿದಿದ್ದರು. ಇತ್ತೀಚಿನ ದೇಶೀಯ ಋತುವಿನಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಶಾ ವಿಫಲವಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 106 ರನ್ ಮಾತ್ರವೇ ಅವರು ಗಳಿಸಿದ್ದು ಮುಂಬರುವ ಏಷ್ಯಾ ಕಪ್‌ ಮತ್ತು ಏಕದಿನ ವಿಶ್ವಕಪ್ ಟೂರ್ನಿಗೂ ಪರಿಗಣಿಸಿಲ್ಲ.

ಇನ್ನು ಸಸೆಕ್ಸ್‌ ಪರ ಆಡುವ ಭಾರತದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಕಳೆದ ವರ್ಷ ಸರ್ರೆ ವಿರುದ್ಧ 174 ರನ್ ಗಳಿಸಿದ್ದು ಇಂಗ್ಲೆಂಡ್‌ನ ಲಿಸ್ಟ್ ಎ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟಿಗನೊಬ್ಬನ ಗರಿಷ್ಠ ಸ್ಕೋರ್ ಎಂಬ ದಾಖಲೆಯಾಗಿತ್ತು. ಈ ದಾಖಲೆಯನ್ನು ಶಾ ಇದೀಗ ಮುರಿದಿದ್ದಾರೆ.

Story first published: Wednesday, August 9, 2023, 19:44 [IST]
Other articles published on Aug 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+