Prithvi Shaw Selfie Row: ಪೃಥ್ವಿ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಹಿಳೆಯಿಂದ ಅರ್ಜಿ

ಪೃಥ್ವಿ ಶಾ ಹಾಗೂ ಗೆಳೆಯರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಮಹಿಳೆ ಸಪ್ನಾ ಗಿಲ್‌ಗೆ ಸೋಮವಾದ ಜಾಮೀನು ದೊರೆತಿದೆ. ಜಾಮೀನಿನ ಮೇಲೆ ಬಂಧನದಿಂದ ಬಿಡುಗಡೆಯಾಗಿರುವ ಸಪ್ನಾ ಗಿಲ್ ಪೃಥ್ವಿ ಶಾ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಪೃಥ್ವಿ ಶಾ ವಿರುದ್ಧ ಆರೋಪಗಳನ್ನು ಮಾಡಿರುವ ಮಹಿಳೆ ಭಾರತೀಯ ಕ್ರಿಕೆಟಿಗನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಮುಂಬೈನ ಪಂಚತಾರಾ ಹೋಟೆಲ್‌ನ ಹೊರಭಾಗದಲ್ಲಿ ಸೆಲ್ಫಿ ವಿಚಾರವಾಗಿ ಪೃಥ್ವಿ ಶಾ ಹಾಗೂ ಗೆಳೆಯರು ಮತ್ತು ಮತ್ತೊಂದು ಗುಂಪಿನ ಮಧ್ಯೆ ಮಾರಾಮಾರಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೃಥ್ವಿ ಶಾ ಗೆಳೆಯ ನೀಡಿದ ದೂರಿನ ಆಧಾರದಲ್ಲಿ ಸಪ್ನಾ ಗಿಲ್ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ಈ ಆರೋಪಿಗಳು ಸೋಮವಾರ ಬೇಲ್ ದೊರೆತ ಹಿನ್ನೆಲೆಯಲ್ಲಿ ಬಿಡುಗಡೆಗೊಂಡಿದ್ದಾರೆ.
ಅಂಧೇರಿಯ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ವಕೀಲ ಕಾಶಿಫ್ ಅಲಿ ಖಾನ್ ಮೂಲಕ ಪೃಥ್ವಿ ಶಾ ಹಾಗೂ ಗೆಳೆಯ ಆಶಿಶ್ ಯಾದವ್ ಸೇರಿದಂತೆ ಇತರರ ವಿರುದ್ಧ ದೌರ್ಜನ್ಯದ ಆರೋಪವನ್ನು ಮಾಡಿದ್ದು ಎಫ್‌ಐಆರ್ ದಾಖಲಿಸುವಂತೆ ಮಹಿಳೆ ಅರ್ಜಿ ಸಲ್ಲಿಸಿದ್ದಾರೆ.
ಸಪ್ನಾ ಗಿಲ್ ಸಲ್ಲಿದ ಅರ್ಜಿಯ ಪ್ರಕಾರ ಆಕೆ ಮತ್ತು ಆಕೆಯ ಸ್ನೇಹಿತ ಶೋಭಿತ್ ಠಾಕೂರ್ ಅವರು ಅಪ್‌ಮಾರ್ಕೆಟ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಅಲ್ಲಿ ಪೃಥ್ವಿ ಶಾ ಹಾಗೂ ಸ್ನೇಹಿತರು ಪಾರ್ಟಿ ಮಾಡುತ್ತಿದ್ದು ಆ ಸಂದರ್ಭದಲ್ಲಿ ಅವರು ಮದ್ಯ ಸೇವನೆ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಠಾಕೂರ್ ಅವರು ಕ್ರಿಕೆಟ್ ಅಭಿಮಾನಿಯಾಗಿರುವುದರಿಂದ ಸೆಲ್ಫಿಗಾಗಿ ಪೃಥ್ವಿ ಶಾ ಅವರನ್ನು ಸಂಪರ್ಕಿಸಿದ್ದು ಇದು ಜಗಳಕ್ಕೆ ಕಾರಣವಾಯಿತು ಎಂದು ದೂರಿದ್ದಾರೆ
"ಶೋಭಿತ್ ಠಾಕೂರ್ ಹದಿಹರೆಯದವನಾಗಿದ್ದ ಆತನಿಗೆ ಕುಡುಕ ಗುಂಪಿನ ಕ್ರೌರ್ಯದ ಬಗ್ಗೆ ಅರಿವು ಇರಲಿಲ್ಲ. ಆತ ಅಸಹಾಯಕನಾಗಿದ್ದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಆಕೆ(ಗಿಲ್) ಮಧ್ಯ ಪ್ರವೇಶಿಸಿದ್ದು ಠಾಕೂರ್‌ಗೆ ಮತ್ತಷ್ಟು ಗಾಯಗಳಾಗದಂತೆ ಶಾ ಮತ್ತು ಇತರರನ್ನು ತಡೆಯಲು ಪ್ರಯತ್ನಿಸಿದಳು" ಎಂದು ಈ ಅರ್ಜಿಯಲ್ಲಿ ವಿವರಿಸಲಾಗಿದೆ. ಅಲ್ಲದೆ ಮದ್ಯದ ನಶೆಯಲ್ಲಿದ್ದ ಫೃಥ್ವಿ ಶಾ ಬಳಿ ಮಹಿಳೆ ಬೇಡಿಕೊಂಡು ಮನವಿ ಮಾಡಿದರು ಎಂದು ಕೂಡ ಉಲ್ಲೇಖಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications