Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ನ್ಯೂಜಿಲೆಂಡ್: ಪೃಥ್ವಿ ಶಾಗೆ ಕಾಲುನೋವು, ಅಭ್ಯಾಸಕ್ಕೆ ಅಲಭ್ಯ

Prithvi Shaw skips practice with swollen foot, call to be taken on Friday

ಕ್ರಿಸ್ಟ್‌ಚರ್ಚ್, ಫೆಬ್ರವರಿ 27: ಯುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಗುರುವಾರದ (ಫೆಬ್ರವರಿ 27) ಅಭ್ಯಾಸವನ್ನು ತಪ್ಪಿಸಿಕೊಂಡಿದ್ದಾರೆ. ಕಾಲುನೋವಿಗೀಡಾಗಿರುವ ಪೃಥ್ವಿಗೆ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ಗಾಗಿ ಕ್ರಿಸ್ಟ್‌ಚರ್ಚ್ ಮೈದಾನದಲ್ಲಿ ಅಭ್ಯಾಸ ನಡೆಸಲಾಗಿಲ್ಲ. ಆದರೆ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎನ್ನವ ಬಗ್ಗೆ ಶುಕ್ರವಾರ ಸ್ಪಷ್ಟ ಮಾಹಿತಿ ಲಭಿಸಲಿದೆ.

ಪೃಥ್ವಿಯ ಎಡಗಾಲು ನೋವಿನಿಂದಾಗಿ ಊದಿಕೊಂಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪೃಥ್ವಿ ರಕ್ತ ಪರೀಕ್ಷೆಗೆ ಒಳಗಾಗುವುದರಲ್ಲಿದ್ದಾರೆ. ಒಟ್ಟಿನಲ್ಲಿ ದ್ವಿತೀಯ ಟೆಸ್ಟ್‌ನ ತಯಾರಿಯಲ್ಲಿರುವ ಭಾರತ ತಂಡ ನಿರ್ವಹಣಾ ಸಮಿತಿಗೆ ಆಟಗಾರರ ಈ ಗಾಯದ ಸಮಸ್ಯೆ ತಲೆನೋವಾಗಿದೆ. ಆರಂಭಿಕ ಪಂದ್ಯದಲ್ಲಿ ಆಡಿದ್ದ ಪೃಥ್ವಿ ಕ್ರಮವಾಗಿ 16, 14 ರನ್ ಗಳಿಸಿದ್ದರು.

ಗಾಯದ ಕಾರಣದಿಂದಾಗಿ ಈಗಾಗಲೇ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಹೊರಗಿದ್ದಾರೆ. ಶಿಖರ್ ಧವನ್, ರೋಹಿತ್ ಶರ್ಮಾ, ಯುಜುವೇಂದ್ರ ಚಾಹಲ್, ಕೆಎಲ್ ರಾಹುಲ್ ಮೊದಲ ಟೆಸ್ಟ್ ನಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲಿ ಭಾರತ 10 ವಿಕೆಟ್‌ ಸೋಲನುಭವಿಸಿತ್ತು.

ಪೃಥ್ವಿ ಶಾ ರಕ್ತ ಪರೀಕ್ಷೆಯ ಫಲಿತಾಂಶ, ತಂಡದ ಫೇವರ್ ಆಗಿ ಬಂದರೆ ಬಹುಶಃ ಶುಕ್ರವಾರದ ತರಬೇತಿಯಲ್ಲಿ ಶಾ ಪಾಲ್ಗೊಳ್ಳುತ್ತಾರೆ. ಒಂದು ವೇಳೆ ಪೃಥ್ವಿ ಶಾ ತಂಡದಿಂದ ಹೊರಗುಳಿಯಬೇಕಾಗಿ ಬಂದರೆ, ಮಯಾಂಕ್ ಅಗರ್ವಾಲ್ ಜೊತೆ ಶುಬ್‌ಮಾನ್‌ ಗಿಲ್ ಆರಂಭಿಕರಾಗಿ ಆಡುವ ನಿರೀಕ್ಷೆಯಿದೆ.

Story first published: Thursday, February 27, 2020, 11:26 [IST]
Other articles published on Feb 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+