ವಿಜಯ್ ಹಜಾರೆ: ಮಯಾಂಕ್ ಅಗರ್ವಾಲ್ ದಾಖಲೆ ಸರಿಗಟ್ಟಿದ ಪೃಥ್ವಿ ಶಾ

ದೆಹಲಿ: ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್, ಮುಂಬೈ ತಂಡದ ನಾಯಕ ಪೃಥ್ವಿ ಶಾ ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ನಾಲ್ಕನೇ ಶತಕ ಬಾರಿಸಿದ್ದಾರೆ. ಕರ್ನಾಟಕ ವಿರುದ್ಧ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಪೃಥ್ವಿ ಈ ಸಾಧನೆ ತೋರಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ತಂಡದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಹೆಸರಿನಲ್ಲಿದ್ದ ದಾಖಲೆಯನ್ನೂ ಪೃಥ್ವಿ ಮುರಿದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈನಿಂದ 122 ಎಸೆತಗಳಲ್ಲಿ ಪೃಥ್ವಿ ಶಾ 165 ರನ್ ಬಾರಿಸಿದ್ದಾರೆ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಈವರೆಗೆ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಪೃಥ್ವಿ ಗುರುತಿಸಿಕೊಂಡಿದ್ದಾರೆ.

ಅತ್ಯಧಿಕ ರನ್ ಪಟ್ಟಿಯಲ್ಲಿ ನಂ.1
ಅತ್ಯಧಿಕರ ರನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ 737 ರನ್ ಬಾರಿಸಿದ್ದರೆ, ಅಗ್ರ ಸ್ಥಾನದಲ್ಲಿರುವ ಪೃಥ್ವಿ 754 ರನ್ ಗಳಿಸಿದ್ದಾರೆ. ಇದರೊಂದಿಗೆ ವಿಜಯ್ ಹಜಾರೆಯಲ್ಲಿ ಸೀಸನ್ ಒಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿರುವ ಮುಂಚೂಣಿ ಆಟಗಾರನಾಗಿ ಪೃಥ್ವಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮಯಾಂಕ್ ದಾಖಲೆ ಬದಿಗೆ
ಪೃಥ್ವಿಗೂ ಮುನ್ನ ಕರ್ನಾಟಕ ತಂಡದ ಮಯಾಂಕ್ ಅಗರ್ವಾಲ್ ಹೆಸರಲ್ಲಿ ವಿಜಯ್ ಹಜಾರೆ ಸೀಸನ್ ಒಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆಯಿತ್ತು. 2018ರ ಆವೃತ್ತಿಯಲ್ಲಿ ಒಟ್ಟು 723 ರನ್ ಬಾರಿಸಿದ್ದ ಅಗರ್ವಾಲ್ ಈ ದಾಖಲೆ ನಿರ್ಮಿಸಿದ್ದರು. ಆದರೆ ಈಗ ಪೃಥ್ವಿ 754 ರನ್ ರನ್ ಬಾರಿಸಿರುವುದರಿಂದ ಮಯಾಂಕ್ ದಾಖಲೆ ಬದಿಗೆ ಸರಿದಂತಾಗಿದೆ. ಕೇವಲ 7 ಇನ್ನಿಂಗ್ಸ್‌ಗಳಲ್ಲಿ ಪೃಥ್ವಿ ಈ ದಾಖಲೆ ನಿರ್ಮಿಸಿದ್ದಾರೆ. 8 ಇನ್ನಿಂಗ್ಸ್‌ಗಳಲ್ಲಿ ಮಯಾಂಕ್ ಈ ದಾಖಲೆ ಬರೆದಿದ್ದರು.

ಪ್ರತೀ ಇನ್ನಿಂಗ್ಸ್‌ನಲ್ಲಿ ಪೃಥ್ವಿ ರನ್
2021ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪ್ರತೀ ಇನ್ನಿಂಗ್ಸ್‌ನಲ್ಲಿ ಪೃಥ್ವಿ ಶಾ ಗಳಿಸಿದ ರನ್ ಗಮನಿಸಿದರೆ 105* (89 ಎಸೆತ), 34 (38), 227* (152), 36 (30), 2 (5), 185*(123) ಹೀಗಿದೆ. 5 ಟೆಸ್ಟ್ ಪಂದ್ಯಗಳಲ್ಲಿ 339 ರನ್, 3 ಏಕದಿನ ಪಂದ್ಯಗಳಲ್ಲಿ 84 ರನ್, 38 ಐಪಿಎಲ್ ಪಂದ್ಯಗಳಲ್ಲಿ 826 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಪೃಥ್ವಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications