Prithvi Shaw: ಪ್ರೀತಿಯಲ್ಲಿ ಬಿದ್ದರಾ ಪೃಥ್ವಿ ಶಾ?
ಭಾರತ ತಂಡಕ್ಕೆ ಕಂ ಬ್ಯಾಕ್ ಮಾಡುವ ಕನಸಿನಲ್ಲಿರುವ ಪೃಥ್ವಿ ಶಾ, ಇತ್ತೀಚಿನ ದಿನಗಳಲ್ಲಿ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದ ಸದ್ದು ಮಾಡುತ್ತಿಲ್ಲ. ಬದಲಿಗೆ ತಮ್ಮ ವೈಯಕ್ತಿಕ ಜೀವನದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಪಾರ್ಟಿಯ ವಿಡಿಯೋ ಹಂಚಿಕೊಂಡಿದ್ದ ಪೃಥ್ವಿ ಈ ಮೊದಲು ಟೀಕೆಗೆ ಗುರಿಯಾಗಿದ್ದರು. ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪೃಥ್ವಿ ಶಾ ಸಾಮಾಜಿಕ ತಾಣದಲ್ಲಿ ತಮ್ಮ ಪೋಸ್ಟ್‌ಗಳಿಂದ ವೈರಲ್ ಆಗುತ್ತಿದ್ದಾರೆ. ಶಾ ಅವರು ನಟಿ ಆಕೃತಿ ಅಗರ್‌ವಾಲ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಚರ್ಚೆಗಳು ಸಹ ಆರಂಭವಾಗಿದ್ದವು. ಅಲ್ಲದೆ ಪೃಥ್ವಿ ಇತ್ತೀಚಿಗೆ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಒಂದನ್ನು ಸಹ ಮಾಡಿದ್ದರು. "ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭಾಶಯಗಳು. ಗಣಪತಿ ಬಪ್ಪಾ ಮೋರ್ಯಾ" ಎಂದು ಬರೆದಿದ್ದಾರೆ. ಈ ಪೋಸ್ಟ್ ಅಭಿಮಾನಿಗಳ ದೃಷ್ಟಿ ಕದ್ದಿತ್ತು. ಈಗ ಮತ್ತೊಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಆಕೃತಿ ಅಗರ್ವಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೃಥ್ವಿ ಅವರ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಇದೇ ವೇಳೆ ನಾನು ಮತ್ತು ನನ್ನ ಗೂಫ್‌ಬಾಲ್ ಎಂದು ಬರೆದುಕೊಂಡಿದ್ದರು. ತಕ್ಷಣ ಪೃಥ್ವಿ ಈ ಸ್ಟೋರಿಯನ್ನು ತಮ್ಮ ಖಾತೆಗೆ ಹಂಚಿಕೊಂಡಿದ್ದರು. ಅಲ್ಲದೆ ಇದೇ ವೇಳೆ "ಮಿಸ್ ಯು" ಎಂಬ ಸಂದೇಶವನ್ನು ಸಹ ಬರೆದುಕೊಂಡಿದ್ದರು. ಈ ಸಂದೇಶದ ಬಳಿಕ ಇಬ್ಬರ ನಡುವಣ ಸಂಬಂಧದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ದೇಶೀಯ ಟೂರ್ನಿಯಲ್ಲಿ ಪೃಥ್ವಿ ಸ್ಥಿರ ಪ್ರದರ್ಶನ
ಇನ್‌ಸ್ಟಾಗ್ರಾಮ್‌ನಲ್ಲಿ ಆಕೃತಿ ಸುಮಾರು 33 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಇದೇ ವೇಳೆ ಇವರು ತಮ್ಮ ಸ್ಟೈಲಿಷ್ ಲುಕ್ ಹಾಗೂ ವಿಭಿನ್ನ ವಿಡಿಯೋಗಳಿಂದ ಅಭಿಮಾನಿಗಳ ಮನ ಕದ್ದಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ ಪರ ಆಡಿ ಸೈ ಎನಿಸಿಕೊಂಡಿದ್ದ ಪೃಥ್ವಿ ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಲು ಹರಸಾಹಸ ಪಡುತ್ತಿದ್ದಾರೆ. ಪೃಥ್ವಿ ಅವರು ಸೌದಿಯಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲೂ ಬಿಕರಿ ಆಗಿರಲಿಲ್ಲ. ಪೃಥ್ವಿ ಈಗ ದೇಶೀಯ ಟೂರ್ನಿಯಲ್ಲಿ ಮುಂಬೈ ತಂಡದ ಬದಲಿಗೆ, ಮಹಾರಾಷ್ಟ್ರ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೆ ಈ ತಂಡದ ಪರ ಆಡಿದ ಬುಚ್ಚಿ ಬಾಬು ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಈ ವೇಳೆ ಇವರು ಆಡಿದ 3 ಪಂದ್ಯಗಳಲ್ಲಿ 59.33 ರ ಸರಾಸರಿಯಲ್ಲಿ 178 ರನ್ ಸಿಡಿಸಿದ್ದರು.
ಪೃಥ್ವಿ ಶಾ ಸಾಧನೆ
25 ವರ್ಷದ ಪೃಥ್ವಿ ಶಾ ಅವರನ್ನು ಭವಿಷ್ಯದ ಆಟಗಾರ ಎಂದೇ ಗುರುತಿಸಲಾಗಿತ್ತು. ಇವರು ಭಾರತದ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿದ್ದಾರೆ. ಬ್ಲ್ಯೂ ಜೆರ್ಸಿಯಲ್ಲಿ ಇವರು ಕೊನೆಯ ಬಾರಿಗೆ ಶ್ರೀಲಂಕಾ ವಿರುದ್ಧ ಜುಲೈ 23, 2021ರಲ್ಲಿ ಕಾಣಿಸಿಕೊಂಡಿದ್ದರು. ಭಾರತದ ಪರ 5 ಟೆಸ್ಟ್ ಪಂದ್ಯ ಆಡಿರುವ ಪೃಥ್ವಿ 42ರ ಸರಾಸರಿಯಲ್ಲಿ 339 ರನ್ ಸಿಡಿಸಿದ್ದಾರೆ. ಈ ವೇಳೆ 1 ಶತಕ ಹಾಗೂ 2 ಅರ್ಧಶತಕಗಳಿ ಸಹ ಸೇರಿವೆ. ಇನ್ನು 6 ಏಕದಿನ ಪಂದ್ಯಗಳಲ್ಲಿ 189 ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications