Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಶೂನ್ಯ ಸುತ್ತಿದ ಪೃಥ್ವಿ ಶಾ, ಕಾಲೆಳೆದ ನೆಟ್ಟಿಗರು

Prithvi Shaw Subject To Funny troll On Twitter After Duck In adelaide Test

ಆಸ್ಟ್ರೇಲಿಯಾ ವಿರುದ್ಧದ ಬಹುನಿರೀಕ್ಷಿತ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿದಿದೆ. ಅಡಿಲೇಡ್‌ನಲ್ಲಿ ಡೇ-ನೈಟ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದೆ. ಆದರೆ ಇನ್ನಿಂಗ್ಸ್ ಆರಂಭಿಸಲು ಇಳಿದ ಪೃಥ್ವಿ ಶಾ ಮಾತ್ರ ಟೀಮ್ ಇಂಡಿಯಾ ಅಭಿಮಾನಿಗಳನ್ನು ನಿರಾಸೆಗೊಳಪಡಿಸಿದ್ದಾರೆ.

ಪೃಥ್ವಿ ಶಾ ಇನ್ನಿಂಗ್ಸ್‌ನ ಎರಡನೇ ಎಸೆತಕ್ಕೇ ಬೌಲ್ಡ್ ಆಗುವ ಮೂಲಕ ಆರಂಬದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಯಶಸ್ಸನ್ನು ನೀಡಿದರು. ಮಿಚೆಲ್ ಸ್ಟಾರ್ಕ್ ಎಸೆದ ಎರಡನೇ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಪೃಥ್ವಿ ಶಾ ಮುಂದಾದರು. ಆದರೆ ತಿರುವು ಪಡೆದುಕೊಂಡ ಚೆಂಡು ಬ್ಯಾಟ್‌ನ ಎಡ್ಜ್‌ಗೆ ಬಡಿದು ವಿಕೆಟ್ ಉರುಳಿಸಿತು. ಈ ಮೂಲಕ ಭಾರತ ಆರಂಭದಲ್ಲೇ ಆಘಾತವನ್ನು ಅನುಭವಿಸಿದೆ.

ಈ ಮಧ್ಯೆ ಪೃಥ್ವಿ ಶಾ ನೀರಸ ಪ್ರದರ್ಶನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಮುಂದುವರಿದಿದೆ. ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಭಾರತ ಎ ತಂಡದ ಪರವಾಗಿ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದಾಗಲೂ ಪೃಥ್ವಿ ಶಾ ಬ್ಯಾಟ್‌ನಿಂದ ನೀರಸ ಪ್ರದರ್ಶನವನ್ನು ನೀಡಿದ್ದರು.

ಪೃಥ್ವಿ ಶಾ ಕಳೆದ ಕೆಲ ತಿಂಗಳಿನಿಂದ ಸತತವಾಗಿ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಆವೃತ್ತಿಯ ಐಪಿಎಲ್‌ನಲ್ಲೂ ಶಾ ಬ್ಯಾಟ್‌ನಿಂದ ನಿರೀಕ್ಷಿತ ಮಟ್ಟದಲ್ಲಿ ರನ್ ಹರಿದುಬರಲಿಲ್ಲ. ಶೀಘ್ರವಾಗಿ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ್ದರೆ. ಇದೆಲ್ಲದರ ಹೊರತಾಗಿಯೂ ಶಾ ಮೇಲೆ ತಮಡದ ಮ್ಯಾನೇಜ್‌ಮೆಂಟ್ ಸಾಕಷ್ಟು ನಂಬಿಕೆಯನ್ನಿಟ್ಟು ಕಣ್ಕಕಿಳಿಸಿದೆ. ದೀಗ ಮೊದಲ ಪಂದ್ಯದಲ್ಲಿ ತಂಡದ ಮ್ಯಾನೇಜ್‌ಮೆಂಟ್ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಶಾ ವಿಫಲರಾಗಿದ್ದಾರೆ.

ಹೀಗಾಗಿ ಪೃಥ್ವಿ ಶಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಪೃಥ್ವಿ ಶಾ ಅವರ ಸತತ ವೈಫಲ್ಯವನ್ನು ಮುಂದಿಟ್ಟು ಪೃಥ್ವಿ ಶಾ ಅವರನ್ನು ಟೀಕೆ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲ ಆಯ್ದ ತಮಾಷೆಯ ಟ್ವಿಟ್ಟರ್ ಟ್ರೋಲ್‌ಗಳು ಇಲ್ಲಿದೆ ನೋಡಿ

Story first published: Thursday, December 17, 2020, 13:48 [IST]
Other articles published on Dec 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+