For Quick Alerts
ALLOW NOTIFICATIONS  
For Daily Alerts
 

Prithvi Shaw: ತಂಡವನ್ನು ಬದಲಿಸಿದ ಪೃಥ್ವಿ ಶಾ

ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸಿನಲ್ಲಿರುವ ಪೃಥ್ವಿ ಶಾ ದೇಶೀಯ ಟೂರ್ನಿಯಲ್ಲಿ ಈಗ ತಂಡವನ್ನು ಬದಲಿಸಿದ್ದಾರೆ. ಇಷ್ಟು ದಿನಗಳ ಕಾಲ ಪೃಥ್ವಿ ಶಾ ಮುಂಬೈ ಪರ ದೇಶೀಯ ಟೂರ್ನಿಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಇವರು ಈ ವರ್ಷ ಮಹಾರಾಷ್ಟ್ರ ಪರ ಆಡುವುದನ್ನು ಕಾಣಬಹುದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ರು. ಅಲ್ಲದೆ ಇವರಿಗೆ ಫಿಟ್ನೆಸ್‌ ಸಮಸ್ಯೆಯು ಸಹ ಬಹುವಾಗಿ ಕಾಡಿತು. ಇವರು ಬುಚಿ ಬಾಬು ಆಹ್ವಾನ ಪಂದ್ಯಾವಳಿಗಾಗಿ ಮಹಾರಾಷ್ಟ್ರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ಮಹಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ಬುಚಿ ಬಾಬು ಟೂರ್ನಿಗೆ ತನ್ನ 17 ಜನರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಪೃಥ್ವಿ ಶಾ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ರುತುರಾಜ್‌ ಗಾಯಕ್ವಾಡ್‌ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಸ್ಟಾರ್‌ ಆಟಗಾರರಾದ ಋತುರಾಜ್‌ ಗಾಯಕ್ವಾಡ್ ಹಾಗೂ ವಿಕೆಟ್ ಕೀಪರ್ ಸೌರಭ್ ನವಲೆ ಇಬ್ಬರೂ ದುಲೀಪ್ ಟ್ರೋಫಿಗಾಗಿ ಪಶ್ಚಿಮ ವಲಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

Prithvi Shaw switches to Maharashtra for domestic season joining Ruturaj Gaikwad

ಈ ತಂಡದ ಪಟ್ಟವನ್ನು ಅಂಕಿತ್ ಬಾವ್ನೆಗೆ ಕಟ್ಟಲಾಗಿದೆ. ಇದರಲ್ಲಿ ಮುಖೇಶ್ ಚೌಧರಿ ಮತ್ತು ರಾಜವರ್ಧನ್ ಹಂಗರ್ಗೇಕರ್ ಸಹ 17 ಆಟಗಾರರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಬುಚಿ ಬಾಬು ಟೂರ್ನಿ ಇದೇ 18 ರಂದು ಆರಂಭವಾಗಲಿದೆ. ಇನ್ನು ಈ ಟೂರ್ನಿಯ ಫೈನಲ್‌ ಪಂದ್ಯ ಸೆಪ್ಟಂಬರ್ 9 ರಂದು ನಡೆಯಲಿದ್ದು, ಎಲ್ಲ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ. ಬುಚಿ ಬಾಬು ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.

ಪೃಥ್ವಿ ಶಾ ಸಾಧನೆ

ಪೃಥ್ವಿ ಶಾ ಈಗಾಗಲೇ ಭಾರತದ ಪರ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು 42ರ ಸರಾಸರಿಯಲ್ಲಿ 339 ರನ್‌ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ. ಇನ್ನು ಇವರಿಗೆ 6 ಏಕದಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಲಾಯಿತು. ಆದರೆ ಈ ಅವಕಾಶವನ್ನು ಪಡೆಯುವಲ್ಲಿ ಇವರು ವಿಫಲರಾಗಿದ್ದಾರೆ. ಇನ್ನು 58 ಪ್ರಥಮ ದರ್ಜೆ ಪಂದ್ಯದಲ್ಲಿ 4556 ರನ್‌ ಸಿಡಿಸಿದ್ದು, 13 ಶತಕ, 18 ಅರ್ಧಶತಕಗಳು ಸೇರಿವೆ. ಲೀಸ್ಟ್‌ ಎ 65 ಪಂದ್ಯದಲ್ಲಿ ಇವರು 55ರ ಸರಾಸರಿಯಲ್ಲಿ 3399 ರನ್‌ ಸಿಡಿಸಿದ್ದಾರೆ. ಈ ವೇಳೆ 10 ಶತಕ ಹಾಗೂ 14 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಮಹಾರಾಷ್ಟ್ರ ತಂಡ: ಅಂಕಿತ್ ಬಾವ್ನೆ (ನಾಯಕ), ರುತುರಾಜ್ ಗಾಯಕ್ವಾಡ್, ಪೃಥ್ವಿ ಶಾ, ಸಿದ್ಧೇಶ್ ವೀರ್, ಸಚಿನ್ ಧಾಸ್, ಅರ್ಶಿನ್ ಕುಲಕರ್ಣಿ, ಹರ್ಷಲ್ ಕೇಟ್, ಸಿದ್ಧಾರ್ಥ್ ಮ್ಹಾತ್ರೆ, ಸೌರಭ್ ನವಲೆ, ಮಂದರ್ ಭಂಡಾರಿ, ರಾಮಕೃಷ್ಣ ಘೋಷ್, ಮುಖೇಶ್ ಚೌಧರಿ, ಪ್ರದೀಪ್ ದಾಧೆ, ವಿಕಿ ಓಸ್ಟ್ವಾಲ್, ಹಿತೇಶ್ ವಾಲುಂಜ್, ಪ್ರಶಾಂತ್ ಸೋಲಂಕಿ, ರಾಜವರ್ಧನ್ ಹಂಗರ್ಗೇಕರ್.

Story first published: Thursday, August 14, 2025, 21:12 [IST]
Other articles published on Aug 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+