ಟೀಮ್ ಇಂಡಿಯಾ ಸದ್ಯ ಏಷ್ಯಾ ಕಪ್ ಟಿ20 ಕ್ರಿಕೆಟ್‌ನಲ್ಲಿ ಆಡುತ್ತಿದೆ. ಇನ್ನು ಈ ತಂಡದಲ್ಲಿ ಸ್ಥಾನ ಪಡೆಯದ ಆಟಗಾರರು ಭಾರತದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ "ಎ" ಸರಣಿಯಲ್ಲಿ ಆಡುತ್ತಿದ್ದು, ಇನ್ನು ಹಲವು ಆಟಗಾರರು ದೇಶೀಯ ಟೂರ್ನಿಗೆ ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿರುವ ಸ್ಟಾರ್ ಆಟಗಾರನ ವೈಯಕ್ತಿಕ ಜೀವನದ ಬಗ್ಗೆ ಬಿಗ್ ಅಪ್ ಡೇಟ್ ಸಿಕ್ಕಿದೆ.
ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಹಾಗೂ ಆಕೃತಿ ಅಗರ್‌ವಾಲ್ ನಡವಿನ ಸಂಬಂಧದ ಬಗ್ಗೆ ಚರ್ಚೆಗಳು ಬಹುಳ ದಿನಗಳಿಂದ ಆರಂಭವಾಗಿವೆ. ಆದರೆ ಈ ಇಬ್ಬರೂ ಸ್ಟಾರ್‌ಗಳು ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಇತ್ತೀಚಿಗೆ ಒಂದು ವಿಡಿಯೋವನ್ನು ಆಕೃತಿ ಪೋಸ್ಟ್ ಮಾಡಿದ್ದು, ಇವರಿಬ್ಬರ ಸಂಬಂಧದ ಬಗ್ಗೆ ಈಗ ಊಹಾಪೋಹಗಳಿಗೆ ರೆಕ್ಕೆ ಬಂದಂತೆ ಆಗಿದೆ.

ಆಕೃತಿ ತಮ್ಮ ಮಿನಿ ವ್ಲಾಗ್‌ನ್ನು ಇತ್ತೀಚಿಗೆ ಹಂಚಿಕೊಂಡಿದ್ದಾರೆ. ಈ ವ್ಲಾಗ್ ಜಸ್ಟ್ 51 ಸೆಕೆಂಡ್‌ಗಳದ್ದಾಗಿದ್ದು, ಹಲವು ಕಥೆಗಳನ್ನು ಹೇಳುತ್ತಿದೆ. ಈ ವಿಡಿಯೋದಲ್ಲಿ ಆಕೃತಿ, ಭರವಸೆಯ ಆಟಗಾರ ಪೃಥ್ವಿ ಶಾ ಅವರೊಂದಿಗೆ ಲೋನಾವಾಲಾ ಪ್ರವಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ನಿಕಟತೆ ಹಾಗೂ ಅವರಿಬ್ಬರ ನಡುವಿನ ಸಂಬಂಧವನ್ನು ತೋರಿಸುತ್ತದೆ. ಈ ವಿಡಿಯೋದಲ್ಲಿ ಕಂಡು ಬಂದಿದ್ದನ್ನು ನೋಡಿದರೆ, ಈ ಇಬ್ಬರ ನಡುವೆ ಬರೀ ಸರಳ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಟೀಮ್ ಇಂಡಿಯಾದ ಆಟಗಾರ ಪೃಥ್ವಿ ಶಾ ಆಕೃತಿ ಅವರೊಂದಿಗೆ ಕಳೆಯುತ್ತಿರುವ ಸಮಯವನ್ನು ನೋಡಿದ ಅಭಿಮಾನಿಗಳು, ಇದು ಬರೀ ಸ್ನೇಹ ಅಷ್ಟೇ ಅಲ್ಲ ಅದಕ್ಕೂ ಮೀರಿದ್ದು. ದಂಪತಿಗಳಾಗಬಹುದು ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಈ ಇಬ್ಬರೂ ಸ್ಟಾರ್‌ಗಳು ಗಣೇಶ್ ಚತುರ್ಥಿಯ ದಿನದಂದು ಫೋಟೋವೊಂದನ್ನು ಹಂಚಿಕೊಂಡಿದ್ದು ಈ ಫೋಟೋ ಸಹ ಸಖತ್ ವೈರಲ್ ಆಗಿತ್ತು. ಆಗಲೇ ಅಭಿಮಾನಿಗಳು ಈ ಇಬ್ಬರ ಸಂಬಂಧದ ಬಗ್ಗೆ ಮಾತನಾಡಲು ಆರಂಭಿಸಿದರು. ಈಗ ಇವರಿಬ್ಬರ ನಡುವಿನ ವಿಡಿಯೋವೊಂದು ಮತ್ತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಚರ್ಚೆಗಳು ಜೋರಾಗಿವೆ.
ಶಾ ವಿಡಿಯೋದಲ್ಲಿ ಎಲ್ಲಿಯೂ ಆಕೃತಿ ತನ್ನ ಗೆಳತಿ ಎಂದು ಹೇಳದೇ ಇದ್ದರೂ ಸಹ ಈ ವ್ಲಾಗ್ ಚಿತ್ರೀಕರಿಸಿದ ಮತ್ತು ಹಂಚಿಕೊಂಡ ರೀತಿ ಆ ಇಬ್ಬರು ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿವೆ.
ಪೃಥ್ವಿ ಶಾ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಎಂದು ಕರೆಯಾಗಲಾಗುತ್ತಿತ್ತು. ಇವರ ಬ್ಯಾಟಿಂಗ್‌ನ್ನು ಕ್ರಿಕೆಟ್ ದಿಗ್ಗಜರೊಂದಿಗೆ ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಇವರು ಆಫ್ ಫೀಲ್ಡ್‌ನಲ್ಲಿ ತಮ್ಮ ಜೀವನ ಶೈಲಿಯಿಂದಲೇ ಹೆಚ್ಚು ಹೆಸರುವಾಸಿಯಾದರು. ಹೀಗಾಗಿ ಇದು ಅವರ ವೃತ್ತಿ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಹೀಗಾಗಿ ಇವರು ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಲು ಇನ್ನು ಹರಸಾಹರ ಪಡುತ್ತಲೇ ಇದ್ದಾರೆ.