ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ನನ್ನ ಅಚ್ಚುಮೆಚ್ಚಿನ ಆಟಗಾರ: ಪ್ರಿಯಂ ಗರ್ಗ್

ಬೆಂಗಳೂರು, ಮೇ 21: ತಮ್ಮ ಗುರು ರಾಹುಲ್ ದ್ರಾವಿಡ್ ಜೊತೆ 2016ರಲ್ಲಿ ವಿಶ್ವಕಪ್ ಗೆದ್ದ ನಂತರ ತೆಗೆಸಿಕೊಂಡ ಅಪರೂಪದ ಫೋಟೋ ಹಂಚಿಕೊಂಡ ಭಾರತದ ಅಂಡರ್ 19 ತಂಡದ ನಾಯಕ ಪ್ರಿಯಂ ಗರ್ಗ್ ದ್ರಾವಿಡ್ ಅವರ ಜೊತೆ ಕಳೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇಷ್ಟ. ರಾಹುಲ್ ದ್ರಾವಿಡ್ ಆಟ ಅಚ್ಚುಮೆಚ್ಚು ಎಂದು ಗರ್ಗ್ ಹೇಳಿದ್ದಾರೆ.
Helo ಲೈವ್‌ನಲ್ಲಿ ಮಾತನಾಡಿದ ಪ್ರಿಯಂ ಗರ್ಗ್, 'ಭಾರತಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕರೆ ನಾನು ಟೆಸ್ಟ್ ಆಡಲು ಇಷ್ಟ ಪಡುತ್ತೇನೆ. ಟೆಸ್ಟ್ ಕ್ರಿಕೆಟ್ ನನಗೆ ಬಹಳ ಇಷ್ಟ. ಟೆಸ್ಟ್ ಕ್ರಿಕೆಟ್ ನಲ್ಲಿ ಹೆಚ್ಚು ಸಾಧನೆ ಮಾಡುವುದು ನನ್ನ ಕನಸು,' ಎಂದರು.
'ಇರಾನಿ ಟ್ರೋಫಿಯಲ್ಲಿ ಸಚಿನ್ ತೆಂಡೂಲ್ಕರ್ 143 ರನ್ ಹೊಡೆದಿದ್ದರು. ಸಚಿನ್ ತೆಂಡೂಲ್ಕರ್ ಅವರ ಈ ಇನ್ನಿಂಗ್ಸ್ ನನಗೆ ಇಷ್ಟ. ಸಚಿನ್ ತೆಂಡೂಲ್ಕರ್ ನನಗೆ ಸಿಕ್ಕರೆ, ನೀವು ಹೇಗೆ ಬದಲಾದಿರಿ? ನಿಮ್ಮನ್ನು ನೀವು ಹೇಗೆ ಬದಲು ಮಾಡಿಕೊಂಡಿರಿ ಎಂದು ಕೇಳಲು ಇಷ್ಟ ಪಡುತ್ತೇನೆ,' ಎಂದು ಹೇಳಿದ ಪ್ರಿಯಂ ಗರ್ಗ್ ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಿಥಾಲಿ ರಾಜ್ ಬಹಳ ಇಷ್ಟದ ಆಟಗಾರ್ತಿ,' ಎಂದು ಹೇಳಿದರು.
ತನ್ನ ಅಚ್ಚುಮೆಚ್ಚಿನ ಆಟಗಾರರ ಬಗ್ಗೆ ಮಾತನಾಡಿದ ಪ್ರಿಯಂ, 'ಅತ್ಯುತ್ತಮ ನಾಯಕ ಮಹೇಂದ್ರ ಸಿಂಗ್ ಧೋನಿ, ವಾರ್ನರ್- ಕೊಹ್ಲಿ ಇವರಲ್ಲಿ ಉತ್ತಮ ಆಟಗಾರ ವಿರಾಟ್ ಕೊಹ್ಲಿ. ಭಾರತದ ಬೌಲರ್ ಪೈಕಿ ನನಗೆ ಇಷ್ಟದ ಬೌಲರ್ ಜಸ್ಪ್ರೀತ್ ಬುಮ್ರಾ,' ಎಂದು ತಿಳಿಸಿದರು.
'ನಾನು ಸುರೇಶ ರೈನಾಕಿಂತ ಉತ್ತಮ ಆಗಲು ಸಾಧ್ಯವಿಲ್ಲ. ಸುರೇಶ ರೈನಾ ಉನ್ನತ ಮಟ್ಟದಲ್ಲಿದ್ದಾರೆ. ನಾನು ಯಾರ ರೀತಿಯಲ್ಲಿಯೂ ಫೀಲ್ಡಿಂಗ್ ಮಾಡಲು ಇಷ್ಟ ಪಡುವುದಿಲ್ಲ. ಬದಲಾಗಿ ನಾನು ನನ್ನಿಂದ ಎಷ್ಟು ಉತ್ತಮವಾದುದನ್ನು ನೀಡಲು ಸಾಧ್ಯ ಎನ್ನುವುದನ್ನು ಮಾತ್ರ ಚಿಂತನೆ ನಡೆಸುತ್ತೇನೆ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications