ರೋಹಿತ್ ಶರ್ಮಾ ಸ್ಪೆಶಾಲಿಟಿ ಹೇಳಿದ ಯುವ ಬ್ಯಾಟ್ಸ್‌ಮನ್ ಪ್ರಿಯಂ ಗರ್ಗ್

ನವದೆಹಲಿ, ಮೇ 13: ರೋಹಿತ್ ಶರ್ಮ ಅವರ ಟೈಮಿಂಗ್ ಅನ್ನು ನಾನು ಬಹಳ ಇಷ್ಟ ಪಡುತ್ತೇನೆ. ನನಗೂ ಟೈಮಿಂಗ್ಸ್ ಆಟ ಬಹಳ ಇಷ್ಟ. ಹೀಗಾಗಿ ರೋಹಿತ್ ಶರ್ಮ ಅವರ ಟೈಮಿಂಗ್ಸ್ ನನಗೆ ಹೆಚ್ಚು ಖುಷಿಕೊಡುತ್ತದೆ. ಪಂದ್ಯದ ಸನ್ನಿವೇಶವನ್ನು ಗಮನಿಸಿ ನಾನು ಆಟ ಆಡುತ್ತೇನೆ. ತಂಡ ಏನನ್ನು ಬಯಸುತ್ತದೆಯೋ ಅದಕ್ಕೆ ತಕ್ಕಂತೆ ಆಡುವುದು ಅತ್ಯಗತ್ಯ. ಎದುರಾಳಿ ತಂಡದ ತಂತ್ರಗಳಿಗೆ ಪ್ರತಿ ತಂತ್ರ ಹೂಡುವುದೂ ಕೂಡ ಅಷ್ಟೇ ಅಗತ್ಯ,' ಎಂದು ಭಾರತ ಅಂಡರ್ 19 ತಂಡದ ನಾಯಕ ಪ್ರಿಯಂ ಗರ್ಗ್ ಹೇಳಿದ್ದಾರೆ.
Helo ಲೈವ್‌ನಲ್ಲಿ ಮಾತನಾಡಿದ ಪ್ರಿಯಂ ಗರ್ಗ್, 'ಸಚಿನ್ ತೆಂಡೂಲ್ಕರ್ ಅವರು ಯಾವ ಸಮಯದಲ್ಲಿ ಹೇಗೆ ಆಡುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಸಮಯಕ್ಕೆ ತಕ್ಕಂತೆ ಆಡುತ್ತಿದ್ದರು. ಅದು ಬಹಳ ಇಷ್ಟವಾಗುತ್ತದೆ ಎಂದರು.
ಹಲೋ ಲೈವ್‌ನಲ್ಲಿ ಮಾತನಾಡಿದ ಗರ್ಗ್ ಇನ್ನೂ ಕುತೂಹಲಕಾರಿ ವಿಚಾರಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಗರ್ಗ್ ಫೇವರಿಟ್ ತಂಡದ ಓಪನರ್
ನಿಮ್ಮ ಫೇವರಿಟ್ ಭಾರತ ತಂಡದ ಬಗ್ಗೆ ಹೇಳಿ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಂ ಗರ್ಗ್, ನನ್ನ ನೆಚ್ಚಿನ ಭಾರತ ತಂಡದಲ್ಲಿ ರೋಹಿತ್ ಶರ್ಮ ಅವರನ್ನು ಆರಂಭಿಕ ಆಟಗಾರನನ್ನಾಗಿ ಮಾಡಲು ಬಯಸುತ್ತೇನೆ. ಅದೇ ರೀತಿ ಜಸ್ಪ್ರೀತ್ ಬುಮ್ರಾ ಅವರನ್ನು ವೇಗದ ಬೌಲರ್ ಆಗಿ ಹಾಗೂ ಕುಲದೀಪ್ ಯಾದವ್ ಅವರನ್ನು ಸ್ಪಿನ್ನರ್ ಬಳಕೆ ಮಾಡಲು ಇಷ್ಟ ಪಡುತ್ತೇನೆ,' ಎಂದರು.

ಬಹಳ ಸ್ಲೆಡ್ಜಿಂಗ್ ಮಾಡಿದ್ದೇನೆ
ಲೈವ್‌ನಲ್ಲಿನ ಮಾತುಕತೆ ಮುಂದುವರೆಸಿದ ಗರ್ಗ್, 'ಸ್ಲೆಡ್ಜಿಂಗ್ ನಾರ್ಮಲ್, ಅದು ಎದುರಾಳಿಗಳ ಏಕಾಗ್ರತೆಯನ್ನು ಹಾಳು ಮಾಡುತ್ತದೆ. ನಾನೂ ಬಹಳ ಸ್ಲೆಡ್ಜಿಂಗ್ ಮಾಡಿದ್ದೇನೆ. ತಂಡಕ್ಕಾಗಿ ಕೂಡ ಅನೇಕ ಸಾರಿ ನಾನು ಸ್ಲೆಡ್ಜ್ ಮಾಡಿದ್ದೇನೆ. ಸ್ಲೆಡ್ಜ್ ಟೈಮ್ ವೇಳೆ ಬಹಳ ಶಾಂತ ರೀತಿಯಿಂದ ಇರಬೇಕು, ಯಾರಾದರೂ ಸ್ಲೆಡ್ಜ್ ಮಾಡೋ ಸಮಯದಲ್ಲಿ ನಾನು ಅದನ್ನು ಕಡೆಗಣಿಸುತ್ತೇನೆ. ಸ್ಲೆಡ್ಜಿಂಗ್ ಜಾಸ್ತಿ ಆದರೆ ನಾನು ಅತ್ತಿತ್ತ ನಡೆದಾಡುವ ಮೂಲಕ ಸ್ಲೆಡ್ಜ್‌ನಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತೇನೆ,' ಎಂದರು.

ಜೈಸ್ವಾಲ್ ಪರಿಪೂರ್ಣ ಆಟಗಾರ
'ಯಶಸ್ವಿ ಜೈಸ್ವಾಲ್ ಪರಿಪೂರ್ಣ ಆಟಗಾರ, ಬಹಳ ಶ್ರಮ ಜೀವಿ, ಶಿಸ್ತಿನ ಆಟಗಾರ. ಪ್ರತಿ ಆಟಗಾರರಿಗೂ ಶಿಸ್ತು ಅಗತ್ಯ. ಯಶಸ್ವಿ ಜೈಸ್ವಾಲ್ ಫೀಲ್ಡಿಂಗ್ ಕೂಡ ಚನ್ನಾಗಿದೆ. ಸ್ಪಿನ್ನರ್ ಹಾಗೂ ವೇಗಿ ಇಬ್ಬರ ರೀತಿಯಲ್ಲೂ ಆಡುವ ಸಾಮರ್ಥ್ಯ ಜೈಸ್ವಾಲ್ ಗೆ ಇದೆ,' ಎಂದು ಪ್ರಿಯಂ ಗರ್ಗ್ ಹೇಳಿದ್ದಾರೆ.

ರವಿ ಬಹಳ ಹಾರ್ಡ್ ವರ್ಕರ್
'ರವಿ ಬಿಶ್ನೋಯಿ ಬಹಳ ಹಾರ್ಡ್ ವರ್ಕರ್. ರವಿ ತಮ್ಮ ಬದುಕನ್ನು ಬಹಳ ಎಂಜಾಯ್ ಮಾಡ್ತಾರೆ. ಅವರಂತೆ ಆಟವನ್ನು ಎಂಜಾಯ್ ಮಾಡುವವರನ್ನು ನಾನು ನೋಡಿಲ್ಲ. ಪಂದ್ಯ ಶುರುವಾದಾಗ 100% ಸಾಮರ್ಥ್ಯ ವಿನಿಯೋಗಿಸುತ್ತಾನೆ. ಒತ್ತಡದ ಸಮಯದಲ್ಲಿಯೂ ಕೂಡ ಅತ್ಯುತ್ತಮವಾಗಿ ಆಡುವ ಸಾಮರ್ಥ್ಯ ಆತನಿಗಿದೆ. ನಾನು ಅವರಿಗೆ 10 ಕ್ಕೆ 10 ಅಂಕ ನೀಡುತ್ತೇನೆ,' ಎಂದು ಗರ್ಗ್ ಹೇಳಿದರು.

ಕ್ರಿಕೆಟ್ ಆಸಕ್ತರಿಗೆ ಟಿಪ್ಸ್
'ನೀವು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದರೆ ನಿಮ್ಮ ಸಾಮರ್ಥ್ಯದ ಅರಿವು ನಿಮಗೆ ಇರಬೇಕು. ನೀವು ಬ್ಯಾಟಿಂಗ್ ಮಾಡುತ್ತೀರಿ ಎಂದು ಅಂದುಕೊಂಡರೆ ಬ್ಯಾಟಿಂಗ್ ಕುರಿತು ಸಂಪೂರ್ಣ ಗಮನ ಹರಿಸಬೇಕು. ಅದೇ ರೀತಿ ನಿಮ್ಮ ಸಾಮರ್ಥ್ಯದ ಕುರಿತು ನೀವು ಸಂಪೂರ್ಣ ಗಮನ ಹರಿಸುವ ಅಗತ್ಯವಿದೆ,' ಎಂದು ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications