Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಿಯಾಮ್ ಶತಕ, ದ.ಆಫ್ರಿಕಾ ಯು-19 ವಿರುದ್ಧ ಭಾರತ ಯು-19ಗೆ ಜಯ

Priyam’s 110 sets up India U-19 team’s 66-run win over SA

ಡರ್ಬನ್, ಜನವರಿ 4: ಪ್ರಿಯಾಮ್ ಗರ್ಗ್ ನಾಯಕನ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ಅಂಡರ್ 19 ವಿರುದ್ಧದ ಚತುರ್ಭುಜ ಏಕದಿನ ಸರಣಿಯಲ್ಲಿ ಭಾರತ ಅಂಡರ್ 19 ತಂಡ 66 ರನ್ ಜಯ ಗಳಿಸಿದೆ. ಪ್ರಿಯಾಮ್ ಶತಕ ಬಾರಿಸಿ ಬ್ಯಾಟಿಂಗ್‌ನಲ್ಲಿ ಬೆಂಬಲವಿತ್ತರೆ, ಸುಶಾಂತ್ ಮಿಶ್ರಾ 4 ವಿಕೆಟ್‌ಗಳನ್ನು ಉರುಳಿಸಿ ಬೌಲಿಂಗ್ ವಿಭಾಗದಲ್ಲಿ ಬಲವಾಗಿ ನಿಂತರು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಅಂಡರ್ 19 ತಂಡದಿಂದ ಯಶಸ್ವಿ ಜೈಸ್ವಾಲ್ 13, ತಿಲಕ್ ವರ್ಮಾ 42, ಪ್ರಿಯಾಮ್ ಗರ್ಗ್ 110 (103 ಎಸೆತ), ಧೃವ್ ಜುರೇಲ್ 65, ಶಾಶ್ವತ್ ರಾವತ್ 14 ರನ್‌ ಕೊಡುಗೆಯಿತ್ತಿದ್ದರಿಂದ ಭಾರತ 50 ಓವರ್‌ ಮುಕ್ತಾಯಕ್ಕೆ 5 ವಿಕೆಟ್ ನಷ್ಟದಲ್ಲಿ 264 ರನ್ ಮಾಡಿತು.

ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದಿಂದ ಮಂಜೆ ಲಿವರ್ಟ್ 13, ಆಂಡ್ರ್ಯೂ ಲೌ 45, ಜೋನಾಥನ್ ಬರ್ಡ್ 22, ಖಾನ್ಯ ಕೊಟಾನಿ 13, ನಾಯಕ ಬ್ರೈಸ್ ಪಾರ್ಸನ್ಸ್ 57, ಅಚಿಲ್ಲೆ ಕ್ಲೋಟೆ 11, ಮೊಂಡ್ಲಿ ಖುಮಾಲೊ 10 ರನ್‌ ಸೇರ್ಪಡೆಯೊಂದಿಗೆ 50 ಓವರ್ ಮುಕ್ತಾಯಕ್ಕೆ 9 ವಿಕೆಟ್ ನಷ್ಟದಲ್ಲಿ 198 ರನ್ ಪೇರಿಸಲಷ್ಟೇ ಶಕ್ತವಾಯ್ತು.

ಭಾರತದ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಮೊಂಡ್ಲಿ ಖುಮಾಲೊ 53 ರನ್‌ಗೆ 4, ಅಚಿಲ್ಲೆ ಕ್ಲೋಟೆ 1 ವಿಕೆಟ್ ಪಡೆದು ಗಮನ ಸೆಳೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ಸುಶಾಂತ್ ಮಿಶ್ರಾ 48ಕ್ಕೆ 4, ರವಿ ಬಿಷ್ಣೋಯ್ 2, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್, ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದರು. ಪ್ರಿಯಾಮ್ ಗರ್ಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Saturday, January 4, 2020, 10:51 [IST]
Other articles published on Jan 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+