
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಈ ಬಗ್ಗೆ ಹೇಳಿಕೆ ನೀಡಿದ್ದು. ಪಂದ್ಯಾವಳಿಗೆ ಒಟ್ಟು 10 ಲಕ್ಷ ಡಾಲರ್ ವಿನಿಯೋಗವಾಗಲಿದೆ ಎಂದು ತಿಳಿಸಿದೆ.
ದುಬೈನಲ್ಲಿ ಸಭೆ ಸೇರಿದ ಐಸಿಸಿ ಪ್ರಮುಖರು ಮುಂದಿನ ವಿಶ್ವಕಪ್ ಕುರಿತಾದ ವಿವರಗಳನ್ನು ನೀಡಿದರು. ಅಲ್ಲದೇ ಸಿದ್ಧತೆ ಕುರಿತು ಚರ್ಚೆ ನಡೆಸಿದರು.[ಮಹೇಂದ್ರ ಸಿಂಗ್ ಧೋನಿ ತಂದೆಯಾಗಲಿದ್ದಾರೆ]
ಈಗಾಗಲೇ ಪೂರ್ವ ಸಿದ್ಧತೆಗಳು ಮುಕ್ತಾಯ ಹಂತದಲ್ಲಿದ್ದು ಪಂದ್ಯಗಳ ಸ್ಥಳ ಮತ್ತು ಕ್ರೀಡಾಂಗಣ ನಿಗದಿ ಮಾಡಲಾಗಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ 2015ರ ಫೆಬ್ರವರಿ 14 ರಂದು ಆರಂಭವಾಗಲಿದೆ.
2011 ರ ವಿಶ್ವಕಪ್ ಗೆ ಹೋಲಿಸಿದರೆ ಬಹುಮಾನದ ಮೊತ್ತದಲ್ಲಿ ಶೇ. 20 ಹೆಚ್ಚಳ ಮಾಡಲಾಗಿದೆ. ಒಂದು ಪಂದ್ಯ ಸೋಲದೆ ಯಾವುದಾದರೂ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ 40.2 ಲಕ್ಷ ಡಾಲರ್ ಬಹುಮಾನ ಪಡೆಯಲಿದೆ. ಅದೇ ಒಂದೇ ಒಂದು ಪಂದ್ಯ ಸೋತು ಕಪ್ ಎತ್ತಿದರೆ 39.75 ಲಕ್ಷ ಡಾಲರ್ ಬಹುಮಾನ ಪಡೆಯಲಿದೆ ಎಂದು ಐಸಿಸಿ ತಿಳಿಸಿದೆ.