ರೋಚಕ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ತಲೆಬಾಗಿದ ಬೆಂಗಳೂರು ಬುಲ್ಸ್

ಪುಣೆ, ನವೆಂಬರ್ 24: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್‌ನಲ್ಲಿ ಶುಕ್ರವಾರ (ನವೆಂಬರ್ 23) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ಬೆಂಗಳೂರು ಬುಲ್ಸ್ ತಂಡ 31-33ರ ರೋಚಕ ಸೋಲನುಭವಿಸಿತು. ಬೆಂಗಳೂರು ಉತ್ತಮ ಪೈಪೋಟಿ ನೀಡಿತಾದರೂ ವಾರಿಯರ್ಸ್ ಒಗ್ಗಟ್ಟಿನಾಟದಿಂದ ಕೊಂಚ ಮೇಲುಗೈ ಸಾಧಿಸಿತು.
ಬೆಂಗಳೂರು ಪರ ಪವನ್ ಕುಮಾರ್, ರೋಹಿತ್ ಕುಮಾರ್, ಕಾಶಿಲಿಂಗ್ ಅಡಕೆ ಉತ್ತಮ ಆಟವಾಡಿದರೆ, ಬೆಂಗಾಲ್ ಪರ ಮಣೀಂದರ್ ಸಿಂಗ್, ಮಹೇಶ್ ಗೌಡ ಜಿದ್ದಾಜಿದ್ದಿಗೆ ಸಾಕಷ್ಟು ಅಂಕ ಕಲೆ ಹಾಕಿದ್ದರು. ಆದರೆ ಎಲ್ಲಾ ಆಟಗಾರರ ಪೂರ್ತಿ ಬೆಂಬಲ ಮೂಲಕ ವಾರಿಯರ್ಸ್‌ಗೆ ಗೆಲುವು ಒಲಿಯಿತು.
ಬೆಂಗಾಲ್‌ನಿಂದ ರವೀಂದರ್ ರಮೇಶ್ 3, ರಣ್ ಸಿಂಗ್ 3, ಅಮಿತ್ ನಗಾರ್ 2, ಬಲ್‌ದೇವ್ ಸಿಂಗ್ ಮತ್ತು ವಿಜಿನ್ ತಂಗದುರೈ ತಲಾ ಒಂದು ಅಂಕ ಸೇರಿಸಿದ್ದೇ ತಂಡದ ಕೈ ಹಿಡಿಯಿತೇನೊ.

ಮಣೀಂದರ್ ಹೀರೋ
ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಸಿಂಗ್ 10 ರೈಡ್ ಮತ್ತು 4 ಬೋನಸ್ ಸೇರಿ ಬರೋಬ್ಬರಿ 14 ಅಂಕಗಳನ್ನು ತಂಡದ ಖಾತೆಗೆ ಸೇರಿಸಿದ್ದು ಟರ್ನಿಂಗ್ ಪಾಯಿಂಟ್ ಎನಿಸಿತು. ಜೊತೆಗೆ ಉಳಿದ ಆಟಗಾರರ ಅಂಕ ಕೊಡುಗೆ ತಂಡಕ್ಕೆ ಲಭಿಸಿದ್ದರಿಂದ ಬೆಂಗಾಲ್ ವಿಜಯ ಪತಾಕೆ ಹಾರಿಸಿದೆ.

ಮಿಂಚಿದ ಕುಮಾರ್ ಜೋಡಿ
ಬೆಂಗಳೂರು ಸೋತರೂ ತಂಡದ ಪರ ಪವನ್ ಕುಮಾರ್ ಮತ್ತು ರೋಹಿತ್ ಕುಮಾರ್ ಭರ್ಜರಿ ಆಟ ಗಮನ ಸೆಳೆಯಿತು. ಪವನ್ 11, ರೋಹಿತ್ 9 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರು. ಕಾಶಿಲಿಂಗ್ ಅವರ 5 ಅಂಕದ ಕೊಡುಗೆಯೂ ತಂಡಕ್ಕೆ ಬಲ ತುಂಬಿತು.

ಮಣೀಂದರ್ ಹೀರೋ
ಈ ಸೋಲಿನ ಬಳಿಕವೂ ಬಿ ಝೋನ್‌ನಲ್ಲಿರುವ ಬೆಂಗಳೂರು ಅಂಕಪಟ್ಟಿಯ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. 41 ಪಾಯಿಂಟ್‌ಗಳಿಂದ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, 38 ಅಂಕ ಕಲೆ ಹಾಕಿರುವ ಪಾಟ್ನಾ ಪೈರೇಟ್ಸ್ ದ್ವಿತೀಯ ಸ್ಥಾನದಲ್ಲಿ, ಬೆಂಗಾಲ್ ವಾರಿಯರ್ಸ್ (37 ಅಂಕ) ತೃತೀಯ ಸ್ಥಾನದಲ್ಲಿದೆ.

ಮುಂಚೂಣಿಯಲ್ಲಿ ಗುಜರಾತ್
ಝೋನ್ ಎ ಯಲ್ಲಿ ಮೊದಲ ಸ್ಥಾನದಲ್ಲಿದ್ದ ಮುಂಬೈಯನ್ನು ಗುಜರಾತ್ ಫಾರ್ಚೂನ್ ಜೈಂಟ್ಸ್ ಕೆಳಗಿಳಿಸಿ ಅಗ್ರ ಸ್ಥಾನ ಅಲಂಕರಿಸಿದೆ. ಫಾರ್ಚೂನ್ ಜೈಂಟ್ಸ್ 58 ಅಂಕ ಗಳಿಸಿದ್ದರೆ, ಮುಂಬೈ 57 ಅಂಕಗಳಿಂದ ದ್ವಿತೀಯ ಸ್ಥಾನದಲ್ಲಿದೆ. ಪುಣೇರಿ ಪಲ್ಟಾನ್ ಗೆ ಮೂರನೇ ಸ್ಥಾನ (42 ಅಂಕ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications