Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ಬೆಂಗಳೂರು ಬುಲ್ಸ್ ಬೆನ್ನು ಬಿಡದ ಸೋಲು

ಪುಣೆಯಲ್ಲಿ ನಡೆಯುತ್ತಿರುವ 11ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ ಸೋಲಿನ ಸರಪಳಿ ಮುಂದುವರೆದಿದೆ. ಟೂರ್ನಿಯ 104ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್‌ 44-29 ರಿಂದ ಬೆಂಗಳೂರು ಬುಲ್ಸ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಬೆಂಗಾಲ್‌ ತಂಡ ಆಡಿದ 17 ಪಂದ್ಯಗಳಲ್ಲಿ 5 ಜಯ, 10 ಸೋಲು ಕಂಡಿದ್ದು, 2 ಡ್ರಾದೊಂದಿಗೆ 37 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ. ಬೆಂಗಳೂರು ತಂಡ ಟೂರ್ನಿಯಲ್ಲಿ 14ನೇ ಸೋಲು ಕಂಡಿದೆ.

ಬೆಂಗಳೂರು ತಂಡ ಈ ಟೂರ್ನಿಯಲ್ಲಿ ಆಡಿದ 17ನೇ ಪಂದ್ಯದಲ್ಲಿನ ಭರ್ಜರಿ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕುವ ಕನಸನ್ನು ಹೊಂದಿತ್ತು. ಆದರೆ ಮೊದಲಾವಧಿಯ 20 ನಿಮಿಷದಲ್ಲಿ ಬುಲ್ಸ್‌ ಅಂದುಕೊಂಡಂತಹ ಪ್ರದರ್ಶನ ನೀಡಲಿಲ್ಲ. ಈ ಅವಧಿಯಲ್ಲಿ ಬೆಂಗಳೂರು ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ವೇಳೆ ಬೆಂಗಳೂರು 12-22 ಅಂಕಗಳಿಂದ ಹಿನ್ನಡೆ ಅನುಭವಿಸಿದೆ. ಬುಲ್ಸ್ ದಾಳಿಯಲ್ಲಿ 8, ಟ್ಯಾಕಲ್‌ನಲ್ಲಿ 4 ಅಂಕಗಳನ್ನು ಕಲೆ ಹಾಕಿತು. ಎದುರಾಳಿ ಬೆಂಗಾಲ್‌ ದಾಳಿ ಹಾಗೂ ಟ್ಯಾಕಲ್‌ನಲ್ಲಿ ತಲಾ 10 ಅಂಕಗಳನ್ನು ಸೇರಿಸಿತು. ಈ ವೇಳೆ ಬುಲ್ಸ್ ಒಂದು ಬಾರಿ ಅಂಕವನ್ನು ಖಾಲಿ ಮಾಡಿತು.

Pro Kabaddi Bengal Warriors Beat Bengaluru Bulls

ಎರಡನೇ ಅವಧಿಯ ಆಟದಲ್ಲಿ ಚೇತೋಹಾರಿ ಪ್ರದರ್ಶನ ನೀಡುವ ಬೆಂಗಳೂರು ಬುಲ್ಸ್ ತಂಡದ ಆಸೆ ಫಲಿಸಲಿಲ್ಲ. ಇದೇ ವೇಳೆ ಬುಲ್ಸ್ ಅಮೋಘ ದಾಳಿಯನ್ನು ನಡೆಸಿ ಅಂಕಗಳನ್ನು ಬಾಚಿಕೊಂಡಿತು. ಆದರೆ ಟ್ಯಾಕಲ್‌ನಲ್ಲಿ ಹಿನ್ನಡೆ ಅನುಭವಿಸಿ ಅಂಕವನ್ನು ಕೈ ಚೆಲ್ಲಿತು. ಈ ವೇಳೆಯೂ ಬುಲ್ಸ್ ಒಮ್ಮೆ ಆಲೌಟ್ ಆಯಿತು.

ಬುಲ್ಸ್ ಹಾಗೂ ವಾರಿಯರ್ಸ್ ತಂಡಗಳು ಒಟ್ಟಾರೆ ಪಂದ್ಯದಲ್ಲಿ 45 ಬಾರಿ ದಾಳಿ ನಡೆಸಿದವು. ಈ ವೇಳೆ ಬುಲ್ಸ್ 14, ಬಂಗಾಲ್ 17 ಅಂಕ ಸೇರಿಸಿತು. ಆದರೆ ಟ್ಯಾಕಲ್‌ನಲ್ಲಿ ಬಂಗಾಳ ವಾರಿಯರ್ಸ್‌ ಆಟ ಮನಮೋಹಕವಾಗಿತ್ತು. ಟ್ಯಾಕಲ್‌ ಮೂಲಕ ಬಂಗಾಲ್ 18 ಅಂಕ ಸಂಪಾದಿಸಿತು.

Pro Kabaddi Bengal Warriors Beat Bengaluru Bulls

ಜೈಪುರಗೆ ಜಯ

ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಭರ್ಜರಿ ಜಯ ದಾಖಲಿಸಿತು. ಜೈಪುರ 42-29 ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆಯಿತು. ಜೈಪುರ ಆಡಿದ 18 ಪಂದ್ಯಗಳಲ್ಲಿ 9 ಗೆಲುವು, 7 ಸೋಲು, 2 ಡ್ರಾ ಸಾಧಿಸಿದ್ದು, 54 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಿತು.

ಜೈಪುರ ತಂಡದ ಪರ ಅರ್ಜುನ್ ದೇಶ್ವಾಲ್‌ 13, ನೀರಜ್‌ ನರ್ವಾಲ್‌ 8 ಅಂಕ ಸಂಪಾದಿಸಿ ಜಯದಲ್ಲಿ ಮಿಂಚಿದರು. ಮೊದಲಾವಧಿಯ ಆಟದಿಂದಲೂ ಜೈಪುರ ಅಂಕಗಳ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಈ ವೇಳೆ 27-16 ಅಂಕಗಳನ್ನು ಕಲೆ ಹಾಕಿತು. ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಜೈಪುರ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಅವಧಿಯ ಆಟ ಸಹ ಜಿದ್ದಾಜಿದ್ದಿನಿಂದ ಕೂಡಿತ್ತು. ಈ ವೇಳೆ ಜೈಪುರ 15-13 ರಿಂದ ಗುಜರಾತ್ ತಂಡದ ವಿರುದ್ಧ ಮುನ್ನಡೆ ಸಾಧಿಸಿ ಸುಲಭವಾಗಿ ಪಂದ್ಯ ಗೆದ್ದಿತು.

Story first published: Tuesday, December 10, 2024, 23:27 [IST]
Other articles published on Dec 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+