For Quick Alerts
ALLOW NOTIFICATIONS  
For Daily Alerts
 

Pro Kabaddi: ಟೈಟನ್ಸ್‌ ಸವಾಲು ಗೆದ್ದ ದಬಾಂಗ್ ದೆಹಲಿ

ಹೈದರಾಬಾದ್‌: ಭರವಸೆಯ ಆಟಗಾರ ನವೀನ್ ಕುಮಾರ್‌, ಆಶು ಮಲಿಕ್‌ ಅಬ್ಬರದ ಪ್ರದರ್ಶನ ನೀಡಿದ ಪರಿಣಾಮ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 18ನೇ ಪಂದ್ಯದಲ್ಲಿ ದಬಾಂಗ್‌ ದೆಹಲಿ ಕೆಸಿ, ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು.

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ದೆಹಲಿ 41-37 ಅಂಕಗಳಿಂದ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿತು. ಈ ಮೂಲಕ ದಬಾಂಗ್ ದೆಹಲಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

Pro Kabaddi League Dabang Delhi K C beat Telugu Titans

ಆರಂಭದಲ್ಲಿ ಟೈಟನ್ಸ್ ಆರ್ಭಟ

ತೆಲಗು ಟೈಟನ್ಸ್‌ ಹಾಗೂ ದಬಾಂಗ್ ದೆಹಲಿ ಕೆಸಿ ತಂಡದ ನಡುವಣ ಮೊದಲಾವಧಿಯ ಆಟದಲ್ಲಿ ಆತಿಥೇಯ ಟೈಟನ್ಸ್‌ ಅಬ್ಬರಿಸಿತು. ಈ ಅವಧಿಯಲ್ಲಿ ದಾಳಿಯಲ್ಲಿ ಉಭಯ ತಂಡಗಳು ಅಬ್ಬರದ ಪ್ರದರ್ಶನ ನೀಡಿದವು. ಈ ವೇಳೆ ದಬಾಂಗ್ ಹಾಗೂ ಟೈಟನ್ಸ್ ತಂಡಗಳು ರೈಡಿಂಗ್‌ನಲ್ಲಿ 14 ಅಂಕಗಳನ್ನು ಕಲೆ ಹಾಕಿದವು. ಈ ವೇಳೆ ಉಭಯ ತಂಡಗಳ ರಕ್ಷಣಾ ಪಡೆಯ ಆಟ ಕಳಪೆಯಾಗಿತ್ತು. ಮೊದಲಾವಧಿಯ 20 ನಿಮಿಷದಲ್ಲಿ ಟೈಟನ್ಸ್‌ ಒಂದು ಬಾರಿ ಬೋನ್ಸ್‌ ಅಂಕವನ್ನು ಕಲೆ ಹಾಕಿತು.

ಎರಡನೇ ಅವಧಿಯಲ್ಲಿ ಯೋಜನಾ ಬದ್ಧ ಆಟವನ್ನು ಆಡಿದ ದಬಾಂಗ್ ದೆಹಲಿ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯ ದಾಳಿಯಲ್ಲಿ ದೆಹಲಿ ಆಟಗಾರರು ಆರ್ಭಟಿಸಿದರು. ಈ ವೇಳೆ ದಬಾಂಗ್‌ ದೆಹಲಿ ಎರಡು ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿತು.

Pro Kabaddi League Dabang Delhi K C beat Telugu Titans

ವಿಜೇತ ತಂಡದ ಪರ ನವೀನ್ ಕುಮಾರ್, ಆಶು ಮಲಿಕ್‌ ತಲಾ 15 ಅಂಕಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಪವನ್‌ ಶೆರಾವತ್‌ 18 ಅಂಕಗಳನ್ನು ಸೇರಿಸಿ ಅಂತರವನ್ನು ಕಡಿಮೆ ಮಾಡಿದರು.

ಮೊದಲ ಪಂದ್ಯ ಟೈ

ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ಬಂಗಾಳ ವಾರಿಯರ್ಸ್‌ ಹಾಗೂ ಯು ಮುಂಬಾ ತಂಡಗಳ ನಡುವೆ ನಡೆದ 11ನೇ ಆವೃತ್ತಿಯ 17ನೇ ಪಂದ್ಯ ಟೈನಲ್ಲಿ ಅಂತ್ಯವಾಯಿತು.

ಮೊದಲಾವಧಿಯ ಆಟದಲ್ಲಿ ಬಂಗಾಳ ವಾರಿಯರ್ಸ್‌ ತಂಡ ಅಬ್ಬರದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ವಾರಿಯರ್ಸ್‌ 20-13 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಬಂಗಾಳ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಮುಂಬಾ ತಂಡ ಒಂದು ಬಾರಿ ಆಲೌಟ್ ಆಯಿತು.

ಎರಡನೇ ಅವಧಿಯ ಆಟದಲ್ಲಿ ಮುಂಬಾ 18-11 ಅಂಕಗಳಿಂದ ಬಂಗಾಳ ವಿರುದ್ಧ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಮುಂಬಾ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮಬಲ ಸಾಧಿಸಿತು. ಬಂಗಾಳ ಈ ಅವಧಿಯಲ್ಲಿ ಟ್ಯಾಕಲ್‌ನಲ್ಲಿ ಅಬ್ಬರಿಸಿದರು. ಬಂಗಾಳ ಎರಡನೇ ಅವಧಿಯ ಆಟದಲ್ಲಿ ಒಂದು ಬಾರಿ ಆಲೌಟ್ ಆಯಿತು. ಈ ಪಂದ್ಯದಲ್ಲಿ ಬಂಗಾಳ ಮಣಿಂದರ್‌ 8, ಮುಂಬಾ ತಂಡದ ಪರ ಮಂಜೀತ್‌ 7 ಅಂಕಗಳನ್ನು ಕಲೆ ಹಾಕಿದರು.

Story first published: Saturday, October 26, 2024, 23:13 [IST]
Other articles published on Oct 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+