ಟಿ20 ವಿಶ್ವಕಪ್ 2021: ಭಾರತದ 15 ಮಂದಿ ಸಂಭಾವ್ಯ ತಂಡ ಹೀಗಿದೆ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡವು ನಂತರ ಟಿ20 ವಿಶ್ವಕಪ್ ಗಾಗಿ ಸಿದ್ಧತೆ ನಡೆಸಬೇಕಾಗಿದೆ. ಕೊವಿಡ್ 19 ಕಾರಣದಿಂದ ಹಲವು ಪ್ರಮುಖ ಟೂರ್ನಮೆಂಟ್ ಗಳು ಮುಂದೂಡಲ್ಪಟ್ಟಿವೆ. ಆದರೆ, ಭಾರತದಲ್ಲಿ ನಿಗದಿಯಂತೆ ಐಸಿಸಿ ಆಯೋಜನೆಯ ಟಿ20 ವಿಶ್ವಕಪ್ 2021ರಲ್ಲಿ ನಡೆಯಲಿದೆ. ಈ ನಡುವೆ ಮತ್ತೊಂದು ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿದ್ದಾರೆ.
ಇನ್ನೊಂದೆಡೆ ಆಟಗಾರರ ವಿಷಯಕ್ಕೆ ಬಂದರೆ, ಆಸ್ಟ್ರೇಲಿಯಾ ಸರಣಿ ಹಾಗೂ ಐಪಿಎಲ್ 14 ಆಟಗಾರರಿಗೆ ಉತ್ತಮ ವೇದಿಕೆ ಒದಗಿಸಲಿದ್ದು, ಮುಂಬರುವ ಟಿ20 ವಿಶ್ವಕಪ್ 2021 ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಅವಕಾಶ ಒದಗಿಸಲಿದೆ.
ಟಿ20 ವಿಶ್ವಕಪ್ 2021ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಪಪುವಾ ನ್ಯೂಗಿನಿ, ನಮೀಬಿಯಾ, ನೆದರ್ಲೆಂಡ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕೂಡ ಪಾಲ್ಗೊಳ್ಳಲಿದೆ.
2007ರಲ್ಲಿ ಧೋನಿ ನಾಯಕತ್ವದಲ್ಲಿ ಕಪ್ ಎತ್ತಿದ್ದ ಭಾರತ 2016ರಲ್ಲಿ ಟಿ20 ವಿಶ್ವಕಪ್ ಆಯೋಜಿಸಿತ್ತು. ಸೆಮಿಫೈನಲ್ ನಲ್ಲಿ ಭಾರತವನ್ನು ಸೋಲಿಸಿದ್ದ ವೆಸ್ಟ್ ಇಂಡೀಸ್ ತಂಡವು ನಂತರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಟಿ20 ವಿಶ್ವಕಪ್ 2021ಕ್ಕೆ ವರ್ಷಕ್ಕಿಂತ ಕಡಿಮೆ ಅವಧಿಯಿದ್ದು, ಟೀಂ ಇಂಡಿಯಾ ಸೇರಬಲ್ಲ ಸಂಭಾವ್ಯ 15 ಆಟಗಾರರ ಪಟ್ಟಿ ಇಲ್ಲಿದೆ;
1. ರೋಹಿತ್ ಶರ್ಮ
2. ಶಿಖರ್ ಧವನ್
3. ಕೆಎಲ್ ರಾಹುಲ್
4. ವಿರಾಟ್ ಕೊಹ್ಲಿ(ನಾಯಕ)
5. ಶ್ರೇಯಸ್ ಅಯ್ಯರ್
6. ಸಂಜು ಸಾಮ್ಸನ್ (ವಿಕೆಟ್ ಕೀಪರ್)
7. ರಿಷಬ್ ಪಂತ್ (ವಿಕೆಟ್ ಕೀಪರ್)
8. ಹಾರ್ದಿಕ್ ಪಾಂಡ್ಯ
9. ರವೀಂದ್ರ ಜಡೇಜ
10. ಯುಜುವೇಂದ್ರ ಚಾಹಲ್
11. ಮೊಹಮ್ಮದ್ ಶಮಿ
12. ಜಸ್ ಪ್ರೀತ್ ಬೂಮ್ರಾ
13. ವಾಷಿಂಗ್ಟನ್ ಸುಂದರ್
14. ದೀಪಕ್ ಚಾಹರ್
15. ನವದೀಪ್ ಸೈನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications