ಚಾಂಪಿಯನ್ಸ್ ಟ್ರೋಫಿಗೆ ಸಂಭಾವ್ಯ ಟೀಂ ಇಂಡಿಯಾ ಹೀಗಿದೆ
ನವದೆಹಲಿ, ಮೇ 07: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆ ಬಗೆಗಿನ ಗೊಂದಲಗಳಿಗೆ ತೆರೆ ಬಿದ್ದಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾವು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದೆ. 15 ಸದಸ್ಯರ ಭಾರತ ತಂಡ ಮಂಗಳವಾರಂದು ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಇದಕ್ಕೂ ಮುನ್ನ ಯಾರಿಗೆಲ್ಲ ಚಾನ್ಸ್ ಸಿಗಬಹುದು ಎಂಬುದನ್ನು ಲೆಕ್ಕ ಹಾಕಿ, ತಯಾರಿಸುವ ಸಂಭಾವ್ಯ ತಂಡದ ಪಟ್ಟಿ ಇಲ್ಲಿದೆ
ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಗಳು ನಡೆಯಲಿವೆ. [#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]
ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು /ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.

ಭುಜದ ನೋವಿಗೆ ತುತ್ತಾಗಿ ಸದ್ಯ ಇಂಗ್ಲೆಂಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಎಲ್ ರಾಹುಲ್ ಅವರ ಅನುಪಸ್ಥಿತಿ, ಭಾರತವನ್ನು ಕಾಡಲಿದೆ. ರಾಹುಲ್ ಅವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗದ ಕಾರಣ, ರಾಹುಲ್ ಬದಲಿಗೆ ಅಜಿಂಕ್ಯ ರಹಾನೆ ಅಥವಾ ರೋಹಿತ್ ಶರ್ಮರನ್ನು ಕಣಕ್ಕಿಳಿಸುವುದು ಒಳ್ಳೆಯದು ಎಂದು ಅಭಿಪ್ರಾಯ ಬಂದಿದೆ.
ರೋಹಿತ್ ಆಯ್ಕೆ ಖಚಿತವಾಗಿದ್ದು, ಮತ್ತೊಬ್ಬ ಓಪನರ್ ಶಿಖರ್ ಧವನ್ ಅಥವಾ ಗೌತಮ್ ಗಂಭೀರ್ ನಡುವೆ ಪೈಪೋಟಿ ಇದೆ.ಆದರೆ, ನಾಯಕ ವಿರಾಟ್ ಕೊಹ್ಲಿ ಅವರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ ಅಜಿಂಕ್ಯ ರಹಾನೆ ಪರ ವಾದ ಮಂಡಿಸಿದ್ದಾರೆ.
ಸಂಭಾವ್ಯ ತಂಡ ಹೀಗಿದೆ:
* ರೋಹಿತ್ ಶರ್ಮ(ಆರಂಭಿಕ ಆಟಗಾರ)
* ಅಜಿಂಕ್ಯರಹಾನೆ (ಆರಂಭಿಕ ಆಟಗಾರ)
* ಶಿಖರ್ ಧವನ್ (ರಿಸರ್ವ್ ಓಪನರ್)
* ವಿರಾಟ್ ಕೊಹ್ಲಿ (ನಾಯಕ)
* ಯುವರಾಜ್ ಸಿಂಗ್(ಆಲ್ ರೌಂಡರ್)
* ಎಂಎಸ್ ಧೋನಿ (ವಿಕೆಟ್ ಕೀಪರ್)
* ಮನೀಶ್ ಪಾಂಡೆ (ಬ್ಯಾಟ್ಸ್ ಮನ್)
* ಕೇದಾರ್ ಜಾಧವ್(ಆಲ್ ರೌಂಡರ್)
* ಹಾರ್ದಿಕ್ ಪಾಂಡ್ಯ(ಆಲ್ ರೌಂಡರ್)
* ರವೀಂದ್ರ ಜಡೇಜ (ಆಲ್ ರೌಂಡರ್)
* ರವಿಚಂದ್ರನ್ ಅಶ್ವಿನ್ (ಸ್ಪಿನ್ನರ್)
ಅಶ್ವಿನ್ ಅನುಪಸ್ಥಿತಿಯಾದರೆ
* ಕೃನಾಲ್ ಪಾಂಡ್ಯ/ ಕುಲದೀಪ್ ಯಾದವ್
* ಉಮೇಶ್ ಯಾದವ್
* ಭುವನೇಶ್ವರ್ ಕುಮಾರ್
* ಮೊಹಮ್ಮದ್ ಶಮಿ
* ಜಸ್ ಪ್ರೀತ್ ಬೂಮ್ರಾ
(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications