ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ ಎಂದ ಆಸಿಸ್ ಕ್ಯಾಪ್ಟನ್ ಫಿಂಚ್

ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಏಕದಿನ ಸರಣಿಯಲ್ಲಿ ಕಾದಾಡಲು ಇನ್ನು ಕೆಲ ಗಂಟೆಗಳಷ್ಟೇ ಬಾಕಿಯಿದೆ. ಸುದೀರ್ಘ ಮೂರು ತಿಂಗಳ ಕಾಲದ ಈ ಸರಣಿಯಲ್ಲಿ ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದರ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿ ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ಐಪಿಎಲ್‌ನಲ್ಲಿ ಆಸ್ಟ್ರಲಿಯಾ ಹಾಗೂ ಟೀಮ್ ಇಂಡಿಯಾ ನಾಯಕರಿಬ್ಬರೂ ಒಂದೇ ತಂಡದಲ್ಲಿದ್ದು ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಈ ಹಾಗಾಗಿ ಈ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಏಕದಿನ ಸರಣಿಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಬಹುಶಃ ಆತ ಏಕದಿನ ಕ್ರಿಕೆಟ್‌ನ ಸರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಕರೆದಿದ್ದಾರೆ.
"ಆತನ ದಾಖಲೆಯತ್ತ ನೀವು ಕನ್ಣುಹಾಯಿಸಿ. ಆತ ಎರಡನೇ ಸ್ಥಾನದಲ್ಲಿದ್ದಾನೆ. ಅದು ನಿಜಕ್ಕೂ ಅತ್ಯಂತ ಗಮನಾರ್ಹ ಸಂಗತಿ. ಹೀಗಾಗಿ ಈ ಸರಣಿಯಲ್ಲಿ ನಮ್ಮ ತಲೆಯಲ್ಲಿರಬೇಕಾದ ಸಂಗತಿಯೇನೆಂದರೆ ಆತನನ್ನು ನಿರಂತರವಾಗಿ ಔಟ್ ಮಾಡಲು ಪ್ರಯತ್ನಿಸುವುದಾಗಿದೆ" ಎಂದು ಫಿಂಚ್ ಹೇಳಿದ್ದಾರೆ.
"ಯಾವಾಗ ಆತನನ್ನು ಬಿಟ್ಟು ನೀವು ಇತರರತ್ತ ಗಮನ ಹರಿಸಿದರೆ ಆತತನ್ನು ಔಟ್ ಮಾಡುವ ಕೌಶಲ್ಯವನ್ನು ಕಳೆದುಕೊಳ್ಳಲಿದ್ದೀರಿ. ಆತನ ರಕ್ಷಾಕವಚದಲ್ಲಿ ಹೆಚ್ಚಿನ ನ್ಯೂನ್ಯತೆಗಳು ಇಲ್ಲ. ಬಹುಶಃ ಆತ ಸಾರ್ವಕಾಲಿಕ ಶ್ರೇಷ್ಠ ಏಕದಿನ ಆಟಗಾರ" ಎಂದು ಫಿಂಚ್ ಹೇಳಿಕೆಯನ್ನು ನೀಡಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮೊದಲ ಏಕದಿನ ಪಂದ್ಯ ಶುಕ್ರವಾರ ನಡೆಯಲಿದೆ. ಇದು ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಚಟುವಟಿಕೆ ಸ್ಥಬ್ಧವಾದ ಬಳಿಕ ಟೀಮ್ ಇಂಡಿಯಾದ ಮೊದಲ ಕ್ರಿಕೆಟ್ ಸರಣಿಯೂ ಆಗಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಈ ಸರಣಿಯ ಮೇಲೆ ಇಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications