Video: ಸಿಕ್ತು ವಿಕೆಟ್, ಸಂಭ್ರಮಾಚರಣೆ, ಬೌಲರ್‌ನಿಂದ ಕೀಪರ್ ತಲೆಗೆ ಏಟು
ಭಾರತದಲ್ಲಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಇದೇ ರೀತಿ ಪಾಕಿಸ್ತಾನದಲ್ಲೂ ಪಿಎಸ್‌ಎಲ್ ನಡೆಯುತ್ತಿದೆ. ಐಪಿಎಲ್‌ನಲ್ಲಿ ಬಿಕರಿ ಆಗದೇ ಉಳಿದ ಸ್ಟಾರ್ ಆಟಗಾರರು ಪಿಎಸ್‌ಎಲ್‌ನಲ್ಲಿ ಆಡುತ್ತಿದ್ದಾರೆ. ಈ ವೇಳೆ ಪಿಎಸ್‌ಎಲ್ ಬಗ್ಗೆ ಹಲವು ಚರ್ಚೆಗಳು ಆರಂಭವಾಗಿವೆ. ಈ ಮಧ್ಯೆ ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೌಲರ್ ಸಂಭ್ರಮಾಚರಣೆ ಮಾಡುವ ವೇಳೆ ತಮ್ಮ ತಂಡದ ವಿಕೆಟ್‌ಗೆ ಗಾಯ ಮಾಡಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆದ ಬಳಿಕ ಸಂಭ್ರಮಾಚರಣೆ ಮಾಡಲಾಗುತ್ತದೆ. ಹಲವು ಬೌಲರ್‌ಗಳು ತಮ್ಮ ವಿಭಿನ್ನ ಸಂಭ್ರಮಾಚರಣೆಯಿಂದಲೇ ಹೆಸರುವಾಸಿ. ಈಗ ವೈರಲ್ ಆಗುತ್ತಿರುವ ದೃಶ್ಯ ಪಿಎಸ್‌ಎಲ್‌ನಲ್ಲಿ ನಡೆದ ಸಂಭ್ರಮಾಚರಣೆಯದ್ದಾಗಿದೆ. ಈ ವೇಳೆ ಬೌಲರ್ ವಿಕೆಟ್ ಪಡೆದ ಸಂಭ್ರಮದಲ್ಲಿ ಮಾಡಿಕೊಂಡ ಎಡವಟ್ಟು ತಂಡಕ್ಕೆ ಪೆಟ್ಟು ಬಿದ್ದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಮತ್ತೊಮ್ಮೆ ಪಿಎಸ್‌ಎಲ್‌ನ್ನು ಗೇಲಿ ಮಾಡಲು ಆರಂಭಿಸಿದ್ದಾರೆ.

ಆಗಿದ್ದು ಏನು?
ಮುಲ್ತಾನ್ ಸುಲ್ತಾನ್ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಾಹೋರ್ ಖಲಂದರ್ಸ್ ಇನಿಂಗ್ಸ್‌ನ 15ನೇ ಓವರ್‌ನ ಕೊನೆಯ ಎಸೆತದಲ್ಲಿ ಭರವಸೆಯ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ ಅವರ ವಿಕೆಟ್ ಪಡೆದುಕೊಂಡಿತು. ಈ ಓವರ್ ಬೌಲ್ ಮಾಡುತ್ತಿದ್ದ ಉಬೇದ್ ಶಾ ನಡೆಸಿದ ಸಂಭ್ರಮಾಚರಣೆಗೆ ವಿಕೆಟ್ ಕೀಪರ್ ಬೆಲೆ ತೆತ್ತಿದ್ದಾರೆ. ಉಬೇದ್ ಶಾ ಎಸೆದ ಬ್ಯಾಕ್ ಆಫ್ ಲೆಂಥ್ ಡಿಲೇವರಿಯನ್ನು ಸ್ಯಾಮ್ ತಪ್ಪಾಗಿ ಗ್ರಹಿಸಿ ಕವರ್ಸ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಕಮರ್ನ್ ಗುಲ್ಹಾಮ್ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು. ಈ ಸಂಭ್ರಮದ ವೇಳೆ ಉಬೇದ್, ವಿಕೆಟ್ ಕೀಪರ್‌ಗೆ ಹೈಫೈ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಉಬೇದ್ ಅವರ ಕೈ ವಿಕೆಟ್ ಕೀಪರ್ ತಲೆಗೆ ಬೀಳ್ತಾ ಇದ್ದಂತೆ ಉಸ್ಮಾನ್ ಖಾನ್ ಸ್ವಲ್ಪ ಗಾಯಗೊಂಡರು. ಅಲ್ಲದೆ ವಿಕೆಟ್ ಕೀಪರ್ ಉಬೇದ್ ಖಾನ್ ಹೊಡೆದ ಫೋರ್ಸ್‌ಗೆ ನೆಲಕ್ಕೆ ಬಿದ್ದರು. ಇದಾದ ಬಳಿಕ ಉಸ್ಮಾನ್ ಫಿಟ್ ಆಗಿ ವಿಕೆಟ್ ಕೀಪಿಂಗ್ ಮಾಡಲು ಬಂದರು. ಈ ಪಂದ್ಯದಲ್ಲಿ ಉಬೈದ್ 4 ಓವರ್ ಬೌಲ್ ಮಾಡಿ 37 ರನ್ ನೀಡಿ 3 ವಿಕೆಟ್ ಪಡೆದರು.
ಪಂದ್ಯ ಫಲಿತಾಂಶ
ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 228 ರನ್ ಸಿಡಿಸಿತು. ಯಾಸಿರ್ ಖಾನ್ 44 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ನೆರವಿನಿಂದ 87 ರನ್ ಸಿಡಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಲಾಹೋರ್ ಖಲಂದರ್ದ್ 33 ರನ್‌ಗಳಿಂದ ಸೋಲು ಕಂಡಿತು. ಈ ವೇಳೆ ಸಿಕಂದರ್ ರಾಝ್ 50 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಪಿಎಸ್‌ಎಲ್‌ನಲ್ಲಿ ಮುಲ್ತಾನ್ ಸುಲ್ತಾನ್ ದಾಖಲಿಸಿದ ಮೊದಲ ಗೆಲುವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications