ಐಪಿಎಲ್‌ಗಿಂತ ಪಿಎಸ್‌ಎಲ್, ಇತರ ಲೀಗ್‌ಗಳಲ್ಲಿ ಹೆಚ್ಚು ಪುರಸ್ಕಾರ: ಸ್ಟೇನ್

ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಆಡುತ್ತಿಲ್ಲ. ಈ ಬಾರಿಯ ಆಟಗಾರರ ಹರಾಜಿನಲ್ಲೇ ಭಾಗವಹಿಸದಿರಲು ಸ್ಟೇನ್ ನಿರ್ಧರಿಸಿದ್ದರು. ತನ್ನ ಈ ನಿರ್ಧಾರಕ್ಕೆ ಕಾರಣವೇನೆಂದು ಸ್ಟೇನ್ ಈಗ ಹೇಳಿಕೊಂಡಿದ್ದಾರೆ.
ಸದ್ಯ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್)ನ ಕ್ವೆಟ್ಟ ಗ್ಲಾಡಿಯೇಟರ್ಸ್ ಪರ ಆಡುತ್ತಿರುವ ಡೇಲ್ ಸ್ಟೇನ್ ಮಾತನಾಡಿ, ಐಪಿಎಲ್‌ಗಿಂತ ಪಿಎಸ್‌ಎಲ್, ಎಲ್‌ಪಿಎಲ್‌ನಂತ ಇತರ ಲೀಗ್ ಟೂರ್ನಿಗಳು ಒಬ್ಬ ಆಟಗಾರನಿಗೆ ಹೆಚ್ಚಿನ ಪುರಸ್ಕಾರ, ಗೌರವ, ಅವಕಾಶ ನೀಡುತ್ತವೆ ಎಂದಿದ್ದಾರೆ.
ಐಪಿಎಲ್‌ನಲ್ಲಿ ಪ್ರತಿಭೆಗಿಂತ ದುಡ್ಡು ಮತ್ತು ಬ್ಯುಸಿನೆಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಆಟಗಾರರು ಗಳಿಸುವ ಹಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಐಪಿಎಲ್ ಕ್ರಿಕೆಟ್‌ಗೆ ಹೊರತಾಗಿ ಬೇರೆಡೆ ಹೆಚ್ಚಿನ ಗಮನ ಸೆಳೆಯುತ್ತದೆ ಎಂದು ಸ್ಟೇನ್ ಹೇಳಿದ್ದಾರೆ. 'ಇತರ ಲೀಗ್‌ಗಳಲ್ಲಿ ಆಡುವಾಗ ಅಲ್ಲಿ ಒಬ್ಬ ಆಟಗಾರನಾಗಿ ಹೆಚ್ಚಿನ ಪುರಸ್ಕಾರ, ಗೌರವ ಲಭಿಸುವುದನ್ನು ನಾನು ಗಮನಿಸಿದ್ದೇನೆ,' ಎಂದು ಸ್ಟೇನ್ ವಿವರಿಸಿದ್ದಾರೆ.
'ನೀವು ಐಪಿಎಲ್‌ಗೆ ಹೋದರೆ ಅಲ್ಲಿ ದೊಡ್ಡ ದೊಡ್ಡ ತಂಡಗಳಿರುತ್ತವೆ. ದೊಡ್ಡ ದೊಡ್ಡ ಆಟಗಾರರಿರುತ್ತಾರೆ ಮತ್ತು ಆಟಗಾರರು ಗಳಿಸುವ ಹಣದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತದೆ, ಕೆಲವೊಮ್ಮೆ ಎಲ್ಲೋ ಕ್ರಿಕೆಟ್ ಮರೆತುಹೋಗುತ್ತದೆ,' ಎಂದು ಸ್ಟೇನ್ ಹೇಳಿದ್ದಾರೆ.
ಹಿಂದಿನ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಸ್ಟೇನ್ ಅವರನ್ನು ಈ ಬಾರಿ ಆರ್‌ಸಿಬಿ ತಂಡದಿಂದ ರಿಲೀಸ್ ಮಾಡಿತ್ತು. ತಂಡದಲ್ಲಿದ್ದಾಗಲೂ ಸ್ಟೇನ್‌ಗೆ ಹೆಚ್ಚಿನ ಅವಕಾಶ ಸಿಗುತ್ತಿರಲಿಲ್ಲ. ಒಂದು ಪಂದ್ಯದಲ್ಲಿ ಕೊಂಚ ಹೆಚ್ಚು ರನ್ ನೀಡಿದರೆ ಆ ಬಳಿಕ ಸ್ಟೇನ್ ಪ್ರತಿಭೆಯನ್ನು ಆರ್‌ಸಿಬಿ ಮರೆತು ಅವರನ್ನು ತಂಡದಿಂದ ಹೊರಗಿಡುತ್ತಿತ್ತು. ಇದು ಆರ್‌ಸಿಬಿ ತಂಡ ಮಾತ್ರ ಅಲ್ಲ, ಐಪಿಎಲ್‌ನ ಬಹುತೇಕ ಫ್ರಾಂಚೈಸಿಗಳ ಕೆಟ್ಟ ಚಾಳಿಯಿದು. ಕ್ರಿಸ್ ಗೇಲ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್ ಇಂಥ ಅನೇಕ ಆಟಗಾರರು ಇದರ ಅನುಭವ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications