Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಟೆಸ್ಟ್ ಸ್ಪೆಷಲಿಸ್ಟ್‌ಗಳಿಗೆ ಇಲ್ಲ ತಂಡದಲ್ಲಿ ಸ್ಥಾನ; ಈ ಇಬ್ಬರು ಆಟಗಾರರು ನಿವೃತ್ತಿ ಪಡೆಯುತ್ತಾರಾ?

ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿ ಇದೇ ತಿಂಗಳು ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಬಿಸಿಸಿಐ ಆಯ್ಕೆ ಸಮಿತಿ ಕೇಲವ ಮೊದಲ ಟೆಸ್ಟ್‌ ಪಂದ್ಯಕ್ಕೆ ಮಾತ್ರ ತಂಡವನ್ನು ಪ್ರಕಟಿಸಿದೆ. ಆದರೆ, ಎರಡನೇ ಟೆಸ್ಟ್‌ ಪಂದ್ಯಕ್ಕೆ ಇನ್ನು ತಂಡವನ್ನು ಪ್ರಕಟಿಸಿಲ್ಲ. ಆದರೆ ಬಿಸಿಸಿಐ ಆಯ್ಕೆ ಸಮಿತಿಯ ಆಧಾರ ಸ್ಥಂಬವಾಗಿದ್ದ ಇಬ್ಬರು ಆಟಗಾರರನ್ನು ಬಿಸಿಸಿಐ ಕಡೆಗಣಿಸಿದೆ. ಈ ಅನುಭವಿ ಆಟಗಾರರ ವೃತ್ತಿ ಬದುಕು ಬಹುಶ ಅಂತ್ಯವಾದಂತೆ ಕಾಣುತ್ತಿದೆ.

ಈ ಮೊದಲು ಭಾರತ ಟೆಸ್ಟ್ ತಂಡವನ್ನು ಪ್ರಕಟಿಸುತ್ತದೆ ಎಂದು ಅನ್ನುವಾಗ, ಆ ತಂಡದಲ್ಲಿ ಇಬ್ಬರಿಗೆ ಸ್ಥಾನ ಫಿಕ್ಸ್ ಇರುತ್ತಿತ್ತು. ಆ ಇಬ್ಬರೂ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಪ್ರಭಾವದಿಂದ ಟೆಸ್ಟ್‌ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರು. ಒಬ್ಬರು ಮೂರನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿದ್ದರೆ, ಇನ್ನೊಬ್ಬ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದ ಆಟಗಾರ. ಅಲ್ಲದೆ ನಾಯಕತ್ವದ ಗುಣಗಳಿಂದ ತುಂಬಿಕೊಂಡಿದ್ದ ಪ್ಲೇಯರ್ಸ್.

Pujara and Rahane Omitted from India s Test Squad Future in Doubt

ಪೂಜಾರ, ರಹಾನೆ ಔಟ್

ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರ ಸ್ಥಂಬ ಎಂದೇ ಖ್ಯಾತಿ ಪಡೆದಿದ್ದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ ಅನುಭವ ಈಗ ತಂಡಕ್ಕೆ ಬೇಡವಾಗಿದೆ. ಈ ಇಬ್ಬರೂ ಆಟಗಾರರನ್ನು ದುಲೀಪ್ ಟ್ರೋಫಿಯ ವೇಳೆಯೂ ತಂಡದಿಂದ ಕೈ ಬಿಡಲಾಗಿತ್ತು. ಹೀಗಾಗಿ ಇಬ್ಬರ ಹೆಸರಿನೊಂದಿಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಈಗ ಈ ಸುದ್ದಿ ನಿಜವಾಗುತ್ತದಾ ಎಂಬ ಸಂಶಯ ಮೂಡಿದೆ. ಇವರು ಇನ್ನು ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯುವುದು ಡೌಟ್ ಎಂದು ಹೇಳಲಾಗುತ್ತಿದೆ.

ಚೇತೇಶ್ವರ್‌ ಪೂಜಾರ ಅವರ ಸ್ಥಾನದಲ್ಲಿ ಈಗ ಶುಭಮನ್‌ ಗಿಲ್‌ ಆಡುತ್ತಿದ್ದಾರೆ. ಇನ್ನು ಅಜಿಂಕ್ಯ ರಹಾನೆ ಸ್ಥಾನದಲ್ಲಿ ಯುವ ಆಟಗಾರ ಸರ್ಫರಾಜ್‌ ಖಾನ್ ಬ್ಯಾಟ್ ಮಾಡಲಿದ್ದಾರೆ. ಈ ಯುವಕರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ತಂಡದಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಅನುಭವಿ ಆಟಗಾರರ ದಂಡೇ ಭಾರತ ತಂಡದಲ್ಲಿ ಸದ್ಯ ಇದ್ದು, ಇನ್ನು ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಟೆಸ್ಟ್‌ ತಂಡಕ್ಕೆ ಮರಳುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ.

Pujara and Rahane Omitted from India s Test Squad Future in Doubt

ಬೌನ್ಸಿ ಪಿಚ್‌ಗಳಲ್ಲಿ ತಮ್ಮ ಅಮೋಘ ಬ್ಯಾಟಿಂಗ್‌ನಿಂದಲೇ ಅದೇಷ್ಟೋ ವಿದೇಶಿ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಪೂಜಾರ, ರಹಾನೆ ಅವರ ಅನುಪಸ್ಥಿತಿ ತಂಡಕ್ಕೆ ಕಾಡಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.

ಮೊದಲ ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್‌ ಕೀಪರ್), ಧ್ರುವ ಜುರೆಲ್ (ವಿಕೆಟ್‌ ಕೀಪರ್), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಷರ್ ಪಟೇಲ್ , ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

Story first published: Monday, September 9, 2024, 12:57 [IST]
Other articles published on Sep 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+