
ಚೇತೇಶ್ವರ್ ಪೂಜಾರಾ 2018-19ರ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ಆಟಗಾರ. ಭಾರತ ಐತಿಹಾಸಿಕವಾಗಿ ಅಂದಿನ ಟೆಸ್ಟ್ ಸರಣಿ ಗೆಲ್ಲಲು ಪೂಜಾರ ಪ್ರದರ್ಶನ ಮಹತ್ವದ್ದಾಗಿತ್ತು. ಈ ಶ್ರೇಷ್ಠ ಪ್ರದರ್ಶನಕ್ಕೆ ಪೂಜಾರ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.
ಆದರೆ ಈ ಬಾರಿಯ ಸರಣಿ ಹಿಂದಿನ ಸರಣಿಯಷ್ಟು ಸುಲಭವಾಗಿರಲಾರದು. ಅದರಲ್ಲೂ ಪೂಜಾರ ಪಾಲಿಗೆ ಈ ಬಾರಿಯ ಟೆಸ್ಟ್ ಸರಣಿ ಸಾಕಷ್ಟು ಕಠಿಣವೆನಿಸಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾಥ್ ಹೇಳಿಕೊಂಡಿದ್ದಾರೆ.
ನಾಲ್ಕು ಪಂದ್ಯಗಳ ಸರಣಿಯಲ್ಲಿ ಅಂದು ಟೀಮ್ ಇಂಡಿಯಾ 2-1 ಅಂತರದಿಂದ ವಶಕ್ಕೆ ಪಡೆದುಕೊಂಡಿತ್ತು. ಆ ಸರಣಿಯಲ್ಲಿ ಪೂಜಾರ 70 ಇನ್ನಿಂಗ್ಸ್‌ಗಳಲ್ಲಿ 74.43ರ ಸರಾಸರಿಯಲ್ಲಿ ಭರ್ಜರಿ 521 ರನ್ ಗಳಿಸಿದ್ದರು. ಇದರಲ್ಲಿ 3 ಶತಕಗಳು ದಾಖಲಾಗಿತ್ತು. ಪೂಜಾರ ಈ ಪ್ರದರ್ಶನ ಟೀಮ್ ಇಂಡಿಯಾಗೆ ದೊಡ್ಡ ಶಕ್ತಿ ನೀಡಿತ್ತು.
ಪೂಜಾರಾ ನೀಡಿದ ಆ ಅದ್ಭುತ ಪ್ರದರ್ಶನದ ಬಗ್ಗೆ ಮೆಕ್‌ಗ್ರಾಥ್ ಮಾತನಾಡಿದರು. ಕಳೆದ ಬಾರಿ ಪೂಜಾರ ಅದ್ಭುತವಾಗಿ ಆಡಿದರು. ಕ್ರೀಸ್‌ಗೆ ಇಳಿದು ಸಾಕಷ್ಟು ಸಮಯತೆಗೆದುಕೊಂಡು ಅಟವನ್ನು ಮುಂದುವರಿಸಿದರು. ಆತ ರನ್‌ಗಳಿಸುತ್ತಿಲ್ಲ ಎಂದಾಕ್ಷಣ ಒತ್ತಡಕ್ಕೆ ಒಳಗಾಗದೇ ಆಡುವ ಆಟಗಾರ. ಅದು ಆತನಲ್ಲಿನ ವಿಶೇಷತೆ. ಎಂದು ಮೆಕ್‌ಗ್ರಾಥ್ ವಿವರಿಸಿದ್ದಾರೆ.
"ಪೂಜಾರ ಈ ಬಾರಿಯ ಸರಣಿಗೂ ಮುನ್ನ ಹೆಚ್ಚು ಕಾಲ ಕ್ರಿಕೆಟ್ ಆಡಿಲ್ಲ. ಸುದೀರ್ಘ ಕಾಲ ಬ್ಯಾಟಿಂಗ್ ನಡೆಸುವ ಅವಕಾಶ ಆತನಿಗೆ ದೊರೆತಿಲ್ಲ. ಇದು ಈ ಸರಣಿಯಲ್ಲಿ ಪ್ರಭಾವ ಬೀರಲಿದೆ. ಕಳೆದ ಬಾರಿಯ ಸರಣಿಗಿಂತ ಈ ಬಾರಿಯ ಸರಣಿಯಲ್ಲಿ ಪೂಜಾರ ಹೆಚ್ಚಿನ ಪರಿಶ್ರಣವನ್ನು ಪಡೆಯಬೆಕಾಗುತ್ತದೆ" ಎಂದು ಮೆಕ್‌ಗ್ರಾಥ್ ವಿವರಿಸಿ