ಪೂಮಾ ಜೊತೆಗೆ ವಾಷಿಂಗ್ಟನ್ ಸುಂದರ್, ದೇವದತ್ ಪಡಿಕ್ಕಲ್ ಒಪ್ಪಂದ

ನವದೆಹಲಿ: ಜಾಗತಿಕ ಸ್ಪೋರ್ಟ್ಸ್ ಬ್ರ್ಯಾಂಡ್ ಪೂಮಾ ಜೊತೆಗೆ ಭಾರತದ ಯುವ ಕ್ರಿಕೆಟರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ದೇವದತ್ ಪಡಿಕ್ಕಲ್ ಒಪ್ಪಂದ ಮಾಡಿಕೊಂಡಿದ್ದಾರೆ. ಇಬ್ಬರೂ ಆಟಗಾರರು ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸುತ್ತಿದ್ದಾರೆ.
ಪೂಮಾ ಒಪ್ಪಂದ ಮಾಡಿಕೊಂಡಿರುವ ಜನಪ್ರಿಯ ಕ್ರಿಕೆಟರ್‌ಗಳ ಸಾಲಿನಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ದೇವದತ್ ಪಡಿಕ್ಕಲ್ ಕೂಡ ಸೇರಿಕೊಂಡಿದ್ದಾರೆ. ಪೂಮಾ ಜೊತೆ ಒಪ್ಪಂದ ಹೊಂದಿರುವ ಇನ್ನಿತರ ಆಟಗಾರರೆಂದರೆ ಭಾರತದ ನಾಯಕ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಕೆಎಲ್ ರಾಹುಲ್, ಮಹಿಳಾ ತಂಡದ ಆಟಗಾರ್ತಿ ಸುಷ್ಮ ವರ್ಮಾ ಮತ್ತು ದಂತಕತೆ ಯುವರಾಜ್ ಸಿಂಗ್.
ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ಪರಿಗಣಿಸಿದರೆ, ವಾಷಿಂಗ್ಟನ್ ಸುಂದರ್ ಮತ್ತು ದೇವದತ್ ಪಡಿಕ್ಕಲ್ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿಯೇ ಪೂಮಾ ಈ ಯುವ ಆಟಗಾರರ ಜೊತೆ ಒಪ್ಪಂದ ಮಾಡಿಕೊಂಡಿದೆ.
'ಪೂಮಾದಲ್ಲಿ ನಾವು ಭಾರತದ ಯುವ ಕ್ರಿಕೆಟ್ ಪ್ರತಿಭೆಗಳನ್ನು ಉತ್ತೇಜಿಸುವುದಕ್ಕೆ ಬದ್ಧರಾಗಿದ್ದೇವೆ. ದೇವದತ್ ಮತ್ತು ವಾಷಿಂಗ್ಟನ್ ಮೈದಾನದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ನಾವು ಈ ಆಟಗಾರರರಿಗೆ ಬರೀ ಬೆಂಬಲಿಸುವುದಷ್ಟೇ ಅಲ್ಲ. ಇದರಿಂದ ಅವರ ಭವಿಷ್ಯದ ದಿನಗಳು ಉತ್ತಮಗೊಳ್ಳಲಿದೆ,' ಎಂದು ಪೂಮಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications