PKL 2025: ಪುಣೇರಿಗೆ ಭರ್ಜರಿ ಜಯ ಅಗ್ರಸ್ಥಾನ ಭಧ್ರ
ಬುಧವಾರ ಪ್ರೋ ಕಬಡ್ಡಿ ಟೂರ್ನಿಯ 12ನೇ ಆವೃತ್ತಿಯ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಭರ್ಜರಿ ಜಯ ಸಾಧಿಸಿದೆ. ಪ್ರಸಕ್ತ ಆವೃತ್ತಿಯ 25ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 45-37 ರಿಂದ ಯು ಮುಂಬಾ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 43-32ರಿಂದ ಯುಪಿ ಯೋಧಾಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಪುಣೇರಿ ಅಗ್ರ ಸ್ಥಾನವನ್ನು ಭಧ್ರ ಪಡಿಸಿಕೊಂಡರೆ, ತೆಲುಗು ಟೈಟಾನ್ಸ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಬುಧವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನಸ್ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿತು. ಮೊದಲ 20 ನಿಮಿಷದಲ್ಲಿ ಟೈಟಾನ್ಸ್ ತಂಡ ದಾಳಿಯಲ್ಲಿ ಅಬ್ಬರಿಸಿತು. ಈ ಅವಧಿಯಲ್ಲಿ ಟೈಟಾನ್ಸ್ 15 ಅಂಕ ಕಲೆ ಹಾಕಿ ಮಿಂಚಿದರೆ, ಟ್ಯಾಕಲ್‌ನಲ್ಲಿ ಕೇವಲ 3 ಅಂಕ ಸೇರಿಸಿತು. ಈ ಅವಧಿಯಲ್ಲಿ ಟೈಟಾನ್ಸ್ 2 ಬಾರಿ ಮುಂಬಾ ತಂಡವನ್ನು ಆಲೌಟ್ ಮಾಡಿತು. ಎರಡನೇ ಅವಧಿಯ ಆಟದಲ್ಲಿ ಮುಂಬಾ ಭರ್ಜರಿ ಪುಟಿದೇದ್ದಿತು. ಈ ಅವಧಿಯಲ್ಲಿ ಮುಂಬಾ 26-18 ರಿಂದ ಮುನ್ನಡೆ ಸಾಧಿಸಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳಿಕೆಯ ಹಿನ್ನಡೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಕೊನೆಯ 20 ನಿಮಿಷದಲ್ಲಿ ಟೈಟಾನ್ಸ್ ತಂಡದ ಟ್ಯಾಕಲ್ ಭರ್ಜರಿ ಪ್ರದರ್ಶನ ನೀಡಿತು.

ವಿಜೇತ ತಂಡದ ಪರ ಸ್ಟಾರ್ ಆಲ್‌ರೌಂಡರ್ ಭರತ್ ಅಬ್ಬರಿಸಿದರು. ಇವರು 16 ಬಾರಿ ದಾಳಿ ನಡೆಸಿ 13 ಅಂಕ ಗಳಿಸಿದರು. ಇವರು ಟಚ್‌ನಲ್ಲಿ 10, ಬೋನಸ್ 2, ಟ್ಯಾಕಲ್‌ನಲ್ಲಿ 1 ಅಂಕ ಸೇರಿಸಿದರು. ಉಳಿದಂತೆ ಚೇತನ್ 6 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಸತೀಶ್ ಹಾಗೂ ಸುನಿಲ್ 6 ಅಂಕ ಸಂಪಾದಿಸಿದರು.
ಪುಣೇರಿಗೆ ಭರ್ಜರಿ ಜಯ
ಎರಡನೇ ಅವಧಿಯಲ್ಲಿ ಪುಣೇರಿ ಪಲ್ಟನ್ 43-32 ರಿಂದ ಯುಪಿ ಯೋಧಾಸ್ ವಿರುದ್ಧ ಜಯ ಸಾಧಿಸಿತು. ಪುಣೇರಿ ತಂಡದ ಪರ ಪಂಕಜ್ ಹಾಗೂ ಆದಿತ್ಯ ಶಿಂಧೆ ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಕನ್ನಡಿಗ ಗಗನ್ ಗೌಡ 12 ಅಂಕ ಕಲೆ ಹಾಕಿದರು. ಪುಣೇರಿ ಮೊದಲಾವಧಿಯಿಂದ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ಪುಣೇರಿ 21-16 ರಿಂದ ಮುನ್ನಡೆ ಸಾಧಿಸಿತು. ಪುಣೇರಿ ಎರಡನೇ ಅವಧಿಯಲ್ಲೂ ಅಮೋಘ ಆಟದ ಪ್ರದರ್ಶನ ನೀಡಿ ಮುನ್ನಡೆ ಕಾಯ್ದುಕೊಂಡಿತು. ಪರಿಣಾಮ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಒಟ್ಟಾರೆ ಪಂದ್ಯದಲ್ಲಿ ಪುಣೇರಿ ದಾಳಿಯಲ್ಲಿ 16, ಯುಪಿ 19 ಅಂಕಗಳನ್ನು ಕಲೆ ಹಾಕಿತು. ಪುಣೇರಿ ರಕ್ಷಣಾ ಆಟ ಭರ್ಜರಿಯಾಗಿತ್ತು. ಒಟ್ಟಾರೆ ಪಲ್ಟನ್ 10 ಟ್ಯಾಕಲ್ ಅಂಕಗಳನ್ನು ಕಲೆ ಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications