Pro Kabaddi League: ವಾರ್ ಗೆದ್ದ ಪುಣೇರಿ ಅಗ್ರ ಸ್ಥಾನ ಭದ್ರ
12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪುಣೇರಿ ಪಲ್ಟನ್ 45-36ರಿಂದ ಬಂಗಾಳ ವಾರಿಯರ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಈ ಮೂಲಕ ಪುಣೇರಿ ಪ್ರಸಕ್ತ ಟೂರ್ನಿಯಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದೆ.
ಬುಧವಾರ ನಡೆದ ಪ್ರಸಕ್ತ ಆವೃತ್ತಿಯ 11ನೇ ಪಂದ್ಯದಲ್ಲಿ ಪುಣೇರಿ ಆರಂಭದಿಂದಲೇ ಭರ್ಜರಿ ಪ್ರದರ್ಶನ ನೀಡಿತು. ಮೊದಲ 20 ನಿಮಿಷದಲ್ಲಿ ಪುಣೇರಿ 26-22 ರಿಂದ ಬಂಗಾಳ ವಾರಿಯರ್ಸ್ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ದಾಳಿಯಲ್ಲಿ ಸಮಬಲದ ಪ್ರದರ್ಶನ ನೀಡಿದವು. ಅಲ್ಲದೆ ಪುಣೇರಿ ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು.

ಎರಡನೇ ಅವಧಿಯ ಆಟದಲ್ಲೂ ಪುಣೇರಿ ತನ್ನ ಸ್ಥಿರ ಪ್ರದರ್ಶನ ಮುಂದುವರೆಸಿತು. ಪುಣೇರಿ 19-14 ಅಂಕಗಳಿಂದ ಬಂಗಾಳ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಬಂಗಾಳ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿದರೆ, ಪುಣೇರಿ ಎರಡನೇ ಅವಧಿಯಲ್ಲಿ ಟ್ಯಾಕಲ್‌ನಲ್ಲಿ ಕ್ಲಾಸಿಕ್ ಪ್ರದರ್ಶನ ನೀಡಿ 7 ಅಂಕ ಸೇರಿಸಿತು. ಈ ಅವಧಿಯಲ್ಲಿ ಬಂಗಾಳ ತಂಡವನ್ನು ಒಮ್ಮೆ ಪುಣೇರಿ ಆಲೌಟ್ ಮಾಡಿತು. ಪಂದ್ಯದಲ್ಲಿ ಉಭಯ ತಂಡಗಳು ತಲಾ 38 ಬಾರಿ ದಾಳಿಯನ್ನು ನಡೆಸಿದವು. ಈ ವೇಳೆ ಪುಣೇರಿ 22, ಬಂಗಾಳ 21 ಅಂಕ ಕಲೆ ಹಾಕಿತು. ಇನ್ನು ಟ್ಯಾಕಲ್‌ನಲ್ಲಿ ಪುಣೇರಿ 12 ಅಂಕ ಕಲೆ ಹಾಕಿದರೆ, ಬಂಗಾಳ 5 ಅಂಕ ಸೇರಿಸಿತು.
ಪುಣೇರಿ ಪರ ಆದಿತ್ಯ ಶಿಂದೆ, ಅಸ್ಲಂ ಇನ್ಮಾಂದಾರ್ ತಲಾ 11 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಬಂಗಾಳ ತಂಡದ ಪರ ದೇವಾಂಕ್ 11 ಅಂಕ ಕಲೆ ಹಾಕಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಹರಿಯಾಣಗೆ ಜಯ
ಇದಾದ ಬಳಿಕ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಹಾಗೂ ಯು ಮುಂಬಾ ತಂಡಗಳು ನಿಗದಿತ ಅವಧಿಯಲ್ಲಿ ಸಮ ಅಂಕಗಳನ್ನು ಕಲೆ ಹಾಕಿದವು. ಪರಿಣಾಮ ಪಂದ್ಯದ ಫಲಿತಾಂಶ ಅರಿಯಲು ಟೈಬ್ರೇಕರ್ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಹರಿಯಾಣ 7 ಮುಂಬಾ 6 ಅಂಕ ಸೇರಿಸಿತು. ಈ ಮೂಲಕ ಹರಿಯಾಣ ಸ್ಟೀಲರ್ಸ್ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications