Pro Kabaddi: ಪುಣೇರಿಗೆ ಭರ್ಜರಿ ಜಯ: ಗೆಲುವಿನ ಕನಸಿನಲ್ಲಿ ಬುಲ್ಸ್
ಭರವಸೆಯ ಆಟಗಾರ ಅಲಿ ಸಮಾಧಿ ಅವರ ಕೆಚ್ಚೆದಯ ಆಟವು ಜೈಪುರ ಪಿಂಕ್ ಪ್ಯಾಂಥರ್ಸ್‌ಗೆ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆಲುವಿನ ಖಾತೆ ಓಪನ್ ಮಾಡುವಲ್ಲಿ ವಿಫಲವಾಗಿದೆ. ಪ್ರಸಕ್ತ ಆವೃತ್ತಿ 63ನ ಪಂದ್ಯದಲ್ಲಿ ಪುಣೇರಿ ಪಲ್ಟನ್ 41-36 ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿ 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಮೊದಲಾವಧಿಯಲ್ಲಿ ಪುಣೇರಿ ಪಲ್ಟನ್ ಭರ್ಜರಿ ಪ್ರದರ್ಶನ ನೀಡಿತು. ಈ ವೇಳೆ ಪುಣೇರಿ ಜೈಪುರ ತಂಡದ ತಂತ್ರವನ್ನು ಅರಿತು ಆಡಿತು. ಅಲ್ಲದೆ ಸುಲಭವಾಗಿ ಅಂಕಗಳನ್ನು ಗಳಿಸುತ್ತಾ ಸಾಗಿತು. ಈ ಅವಧಿಯಲ್ಲಿ ಪುಣೇರಿ ಸತತ ಅಂಕಗಳನ್ನು ಕಲೆ ಹಾಕಿತು. ಈ ವೇಳೆ ಪುಣೇರಿ ಎದುರಾಳಿ ತಂಡವನ್ನು 2 ಬಾರಿ ಆಲೌಟ್ ಮಾಡಿತು. ಈ ಬೋನಸ್ ಅಂಕಗಳ ಪರಿಣಾಮ ಅಂಕದ ಬೇಟೆಯಲ್ಲಿ ಪುಣೇರಿ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪುಣೇರಿ 25-12 ಅಂಕಗಳಿಂದ ಮುನ್ನಡೆ ಸಾಧಿಸಿತು.

ಎರಡನೇ ಅವಧಿಯ ಆಟದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಸ್ಟಾರ್ ಆಟಗಾರ ಅಲಿ ಸಮಾಧಿ ಅಮೋಘ ದಾಳಿಯ ಪ್ರದರ್ಶನವನ್ನು ನೀಡಿದರು. ಈ ಅವಧಿಯ ಮೊದಲು ಇವರು ಬ್ಯಾಕ್ ಟು ಬ್ಯಾಕ್ ಸೂಪರ್ ರೇಡ್ ಮಾಡಿ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದರು. ಈ ಅವಧಿಯ 17ನೇ ನಿಮಿಷದಲ್ಲಿ ಪುಣೇರಿ ತಂಡದ ಅಂಗಳವನ್ನು ಖಾಲಿ ಮಾಡುವಲ್ಲೂ ಸಹ ಅಲಿ ಸಮಾಧಿ ಪ್ರಮುಖ ಪಾತ್ರವನ್ನು ವಹಿಸಿದರು. ಆದರೆ ಕೊನೆಯಲ್ಲಿ ಪುಣೇರಿ ರಕ್ಷಣಾ ಆಟಗರರು ಇವರನ್ನು ಟ್ಯಾಕಲ್ ಮಾಡಿದರು. ಇಲ್ಲಿಂದ ಜೈಪುರ ಪಂದ್ಯದಲ್ಲಿ ಪುಟಿದೇಳಲು ಸಾಧ್ಯವೇ ಆಗಲಿಲ್ಲ.
ಜೈಪುರ ತಂಡದ ಪರ ಅಲಿ ಸಮಾಧಿ 22 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 22 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿತು. ಪುಣೇರಿ ತಂಡದ ಪರ ಆದಿತ್ಯ ಶಿಂಧೆ 13 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು.
ಬುಲ್ಸ್‌ಗೆ ಸವಾಲು
ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್, ತೆಲುಗು ಟೈಟನ್ಸ್ ತಂಡಗಳ ಕಾದಾಟ ನಡೆಲಿವೆ. ಇನ್ನು ಬೆಂಗಳೂರು ಬುಲ್ಸ್ ಹಾಗೂ ತಮಿಳು ತಲೈವಾಸ್ ತಂಡಗಳು ಹೋರಡಲಿವೆ. ಈ ಮೂಲಕ ಬೆಂಗಳೂರು ಬುಲ್ಸ್ ಗೆಲವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications