PBKS vs RR IPL 2025: ರಾಜಸ್ಥಾನ ವಿರುದ್ಧ ಗೆಲುವಿನ ಕನಸಿನಲ್ಲಿ ಪಂಜಾಬ್: ಡ್ರೀಮ್ ಇಲೆವೆನ್ ತಂಡದಲ್ಲಿ ಈ ಆಟಗಾರರಿಗೆ ಆದ್ಯತೆ
ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ ಶನಿವಾರ ತನ್ನ ತವರಿನಲ್ಲಿ ಪ್ರಸಕ್ತ ಐಪಿಎಲ್ ಆವೃತ್ತಿಯ ಮೂರನೇ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿರುವ ಪಂಜಾಬ್ ಸದ್ಯ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಜಯ ಸಾಧಿಸಿ ಹ್ಯಾಟ್ರಿಕ್ ಜಯ ಸಾಧಿಸುವ ಕನಸನ್ನು ಪಂಜಾಬ್ ಹಾಕಿಕೊಂಡಿದೆ. ರಾಜಸ್ಥಾನ ಎರಡನೇ ಗೆಲುವಿನ ಮೇಲೆ ಕಣ್ಣು ನೆಟ್ಟಿದೆ.
ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು, ರೋಚಕತೆ ಹೆಚ್ಚಿಸಿದೆ. ಇನ್ನು ಈಗಾಗಲೇ ಎರಡೂ ತಂಡಗಳು ಐಪಿಎಲ್‌ನಲ್ಲಿ 28 ಪಂದ್ಯಗಳಲ್ಲಿ ಕಾದಾಟವನ್ನು ನಡೆಸಿದ್ದು, ಪಂಜಾಬ್ 12, ಆರ್‌ಆರ್ 16 ಪಂದ್ಯಗಳನ್ನು ಗೆದ್ದಿದೆ. ಸದ್ಯದ ಪಂಜಾಬ್ ತಂಡ ಸಖತ್ ಜೋಶ್‌ನಲ್ಲಿದೆ. ಹೊಸ ನಾಯಕ, ಹೋಸ ಕೋಚ್ ತಂಡದ ಮನೋಬಲವನ್ನು ಹೆಚ್ಚಿಸಿದ್ದಾರೆ. ಉಭಯ ತಂಡಗಳು ಮೈದಾನಕ್ಕೆ ಇಳಿದಾಗ 226 ರನ್ ಗರಿಷ್ಠ ಸ್ಕೋರ್ ಆಗಿತ್ತು.

ಹೇಗಿದೆ ಪಿಚ್?
ಮುಲ್ಲನ್‌ಪುರ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡಲಿದೆ. ಈ ಮೈದಾನದಲ್ಲಿ ಈ ಹಿಂದೆ ನಡೆದ 10 ಪಂದ್ಯಗಳಲ್ಲಿ ಮೊದಲ ಬ್ಯಾಟ್ ಮಾಡಿದ ತಂಡದ ಸರಾಸರಿ ಸ್ಕೋರ್ 170 ಆಗಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಶೇಕಡಾ 60ರಷ್ಟು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟ್ ಮಾಡಿದರೆ ಅಚ್ಚರಿಯಿಲ್ಲ.
ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಪಂಜಾಬ್
18ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಹೊಸ ಉತ್ಸಾಹದಿಂದ ಕಣಕ್ಕೆ ಇಳಿದಿದೆ. ಇದೇ ವೇಳೆ ಈ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಶ್ರೇಯಸ್ ಅಯ್ಯರ್ 2.0 ವರ್ಷನ್‌ನಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಈ ವೇಳೆ ಅವರು ಆಡಿದ ಎರಡೂ ಪಂದ್ಯಗಳಲ್ಲಿ ಬೆಂಕಿಯಂತೆ ಬ್ಯಾಟ್ ಮಾಡಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಶ್ರೇಯಸ್ ಅಯ್ಯರ್ ಅವರ ವಿಶೇಷತೆ ಏನಂದರೆ ಇವರು ತಮ್ಮ ಜೊತೆಗೆ ತಮ್ಮ ಜೊತೆಗಾರರನ್ನು ಸಹ ಉತ್ತಮವಾಗಿ ಆಡಿಸಿಕೊಳ್ಳುತ್ತಾರೆ. ಅಲ್ಲದೆ ಒಬ್ಬ ನಾಯಕನಿಗೆ ಇರಬೇಕಾದ ಎಲ್ಲ ಗುಣಗಳು ಇವರಲ್ಲಿ ಇದ್ದು ಎಲ್ಲರ ಚಿತ್ತ ಕದ್ದಿದ್ದಾರೆ. ತಂಡದ ಭರವಸೆಯ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದು ಪ್ರೀತಿ ಜಿಂಟಾ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಪಂಜಾಬ್ ಪರ ಗರಿಷ್ಠ ರನ್
- ಶ್ರೇಯಸ್ ಅಯ್ಯರ್, 2 ಪಂದ್ಯ, 149 ರನ್
- ಪ್ರಭಸಿಮ್ರನ್ ಸಿಂಗ್, 2 ಪಂದ್ಯ, 74 ರನ್
- ಪ್ರಿಯಾಂಶು ಆರ್ಯ, 2 ಪಂದ್ಯ, 55 ರನ್
ಪಂಜಾಬ್ ತಂಡದಲ್ಲೂ ಸ್ಟಾರ್ ಬೌಲರ್‌ಗಳು ಇದ್ದಾರೆ. ಆಡಿದ ಎರಡು ಪಂದ್ಯಗಳಲ್ಲಿ 5 ವಿಕೆಟ್ ಪಡೆದಿರುವ ಅರ್ಷದೀಪ್ ಸಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ವೇಗಿ ಲಾಕಿ ಫಾರ್ಗುಸನ್, ಮಾರ್ಕೊ ಜಾನ್ಸೆನ್ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಲೆಗ್ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ ಎದುರಾಳಿಗಳನ್ನು ಕಾಡಲು ಸಿದ್ಧರಾಗಿದ್ದಾರೆ.

ಸಂಭಾವ್ಯ ಪಂಜಾಬ್ ತಂಡ: ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಸೂರ್ಯಾಂಶ್ ಶೆಡ್ಜ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್, ಯುಜುವೇಂದ್ರ ಚಹಾಲ್, ಲಾಕಿ ಫರ್ಗುಸನ್, ಅರ್ಷ್‌ದೀಪ್ ಸಿಂಗ್
ನಾಯಕನ ಪ್ರವೇಶ
ರಾಜಸ್ಥಾನ ರಾಯಲ್ಸ್ ತಂಡದ ಪರ ಮೊದಲ ಮೂರು ಪಂದ್ಯಗಳಿಂದ ತಂಡದಿಂದ ದೂರ ಉಳಿದಿದ್ದ ಸಂಜು ಸ್ಯಾಮ್ಸನ್, ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ನಾಯಕನಾಗಿ ಅಖಾಡ ಪ್ರವೇಶಿಸಲಿದ್ದಾರೆ. ಇವರು ಈ ವೇಳೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದನ್ನು ನೋಡಬಹುದಾಗಿದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಯಶಸ್ವಿ ಜೈಸ್ವಾಲ್ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದ ತಂಡದ ಟೆನ್ಷನ್ ಹೆಚ್ಚಿಸಿದೆ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್, ನಿತೀಶ್ ರಾಣಾ ರನ್ ಕಲೆ ಹಾಕುವ ಭರವಸೆ ಮೂಡಿಸಿದ್ದಾರೆ. ನಿತೀಶ್ ಈ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಭರವಸೆ ಮೂಡಿಸಿದ್ದಾರೆ. ಧ್ರುವ್ ಜುರೇಲ್ ಸಹ ತಮ್ಮ ಜವಾಬ್ದಾರಿಯನ್ನು ಅರಿತು ಆಡುವ ಆಟಗಾರ. ಶಿಮ್ರೋನ್ ಹೆಟ್ಮೆಯರ್ ಬ್ಯಾಟ್‌ನಿಂದ ಈ ಆವೃತ್ತಿಯಲ್ಲಿ ಬಿಗ್ ಇನಿಂಗ್ಸ್ ಮೂಡಿ ಬಾರದೇ ಇರುವುದು ಚಿಂತೆ ಹೆಚ್ಚಿಸಿದೆ.
ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್ಸ್
- ಧ್ರುವ್ ಜುರೇಲ್, 3 ಪಂದ್ಯ, 106 ರನ್
- ನಿತೀಶ್ ರಾಣಾ, 3 ಪಂದ್ಯ, 100 ರನ್
- ಸಂಜು ಸ್ಯಾಮ್ಸನ್, 3 ಪಂದ್ಯ, 99 ರನ್
ರಾಜಸ್ಥಾನ ತಂಡದ ಬೌಲಿಂಗ್ ವಿಭಾಗ ಬಲಾಢ್ಯವಾಗಿದೆ. ವೇಗದ ಬೌಲರ್‌ಗಳಾಗಿ ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ ಬಿಗುವಿನ ದಾಳಿ ನಡೆಸಿ ಎದುರಾಳಿ ತಂಡಕ್ಕೆ ಕಾಟ ನೀಡಬಲ್ಲರು. ಇನ್ನು ಸ್ಪಿನ್ ವಿಭಾಗದಲ್ಲಿ ವಿಶ್ವ ವಿಖ್ಯಾತ ವನಿಂದು ಹಸರಂಗಾ ಹಾಗೂ ಮಹೇಶ್ ತಿಕ್ಷಣಾ ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡಬೇಕಿದೆ. ಅಂದಾಗ ಗೆಲುವಿನ ಕನಸು ನನಸಾಗುತ್ತದೆ.
ಸಂಭಾವ್ಯ ರಾಜಸ್ಥಾನ ತಂಡ: ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಯಾನ್ ಪರಾಗ್, ನಿತೀಶ್ ರಾಣಾ, ಧ್ರುವ್ ಜುರೆಲ್, ಶಿಮ್ರೋನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಮಹೇಶ್ ತಿಕ್ಷಿನಾ ಮತ್ತು ಸಂದೀಪ್ ಶರ್ಮಾ.
ಡ್ರೀಮ್ ಇಲೆವೆನ್‌ನಲ್ಲಿ ಯಾರು ಇದ್ರೆ ಬೆಸ್ಟ್?
ಈಗ ಫ್ಯಾಂಟಸಿ ತಂಡಗಳನ್ನು ರಚಿಸುವುದು ಒಂದು ಟ್ರೆಂಡ್ ಆಗಿದ್ದು ಅದರಂತೆ ಈ ಪಂದ್ಯಕ್ಕಾಗಿ ನೀವು ತಂಡವನ್ನು ರಚಿಸುವ ಇಶ್ಚೆಯನ್ನು ಹೊಂದಿದ್ದರೆ, ಮೂರು ವಿಕೆಟ್ ಕೀಪರ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಕಳೆದ ಪಂದ್ಯದಲ್ಲಿ ಪ್ರಭಸಿಮ್ರನ್ ಸಿಂಗ್ ಅಮೋಘ ಅರ್ಧಶತಕ ಬಾರಿಸಿದ್ದರಿಂದ ಇವರ ಆಯ್ಕೆ ಬೆಸ್ಟ್. ಸಂಜು ಸ್ಯಾಮ್ಸನ್, ಧುವ್ ಜುರೇಲ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದು ಇವರನ್ನು ತಂಡದಲ್ಲಿ ಇರಿಸಿಕೊಳ್ಳುವುದು ಉಪಯುಕ್ತವಾಗಿದೆ.
ಬ್ಯಾಟರ್ಸ್: ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿ ಇವರಿಗೆ ನಾಯಕತ್ವ ನೀಡುವುದು ಉತ್ತಮ ಆಯ್ಕೆಯಾಗಿದೆ. ಇವರೊಂದಿಗೆ ಆರ್‌ಆರ್ ಪರ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು.
ಆಲ್‌ರೌಂಡರ್ಸ್: ಉಭಯ ತಂಡದಲ್ಲೂ ಸ್ಟಾರ್ ಆಲ್‌ರೌಂಡರ್‌ಗಳ ದಂಡೇ ಇದ್ದು, ಈ ವೇಳೆ ಮೊದಲ ಆಯ್ಕೆಯ ಆಲ್‌ರೌಂಡರ್ ಆಗಿ ಗ್ಲೇನ್ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ರಾಜಸ್ಥಾನ ತಂಡದ ರಿಯಾನ್ ಪರಾಗ್, ಸ್ಪಿನ್ ಬೌಲರ್ ವನಿಂದು ಹಸರಂಗಾ, ನಿತೀಶ್ ರಾಣಾ ಅವರ ಆಯ್ಕೆ ಉತ್ತಮ ಆಯ್ಕೆ. ಕಳೆದ ಪಂದ್ಯದಲ್ಲಿ ಹಸರಂಗಾ ನಾಲ್ಕು ವಿಕೆಟ್ ಪಡೆದು ಅಬ್ಬರಿಸಿದ್ದರಿಂದ ಇವರನ್ನು ತಂಡದಲ್ಲಿ ಇರಿಸಿಕೊಳ್ಳುವುದು ಉತ್ತಮ ಆಯ್ಕೆ.
ಬೌಲರ್ಸ್: ಸರಣಿಯಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಅರ್ಷದೀಪ್ ಸಿಂಗ್ ಅವರನ್ನು ತಂಡದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯ ಆಯ್ಕೆ. ಇನ್ನು ರಾಜಸ್ಥಾನ ಪರ ಜೋಫ್ರಾ ಆರ್ಚರ್ ಅವರನ್ನು ತಂಡದಲ್ಲಿ ಸ್ಥಾನ ನೀಡಿದರೆ ಒಳಿತು. ಇವರು ಸಹ ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಿ ಎದುರಾಳಿ ತಂಡಕ್ಕೆ ಕಾಡಬಲ್ಲರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications